1deadly
ಡೆಡ್ಲಿ
ಗುಣವಾಚಕ
- ಸಾಯಿಸುವ;ಮಾರಕ; (ಪ್ರಾಣ) ಘಾತುಕ; ಪ್ರಾಣಾಂತಿಕ: deadly weapons ಮಾರಕಾಸ್ತ್ರಗಳು.
- ತೀವ್ರಹಾನಿ ಯಾ ಅಪಾಯವನ್ನು ಉಂಟುಮಾಡುವ.
- ವಿಷಕರ; ನಂಜಿನ; ವಿಷಸ್ವಭಾವದ; ವಿಷಭರಿತ: deadly serpent ವಿಷಸರ್ಪ.
- (ದೇವತಾಶಾಸ್ತ್ರ) ನಾರಕ; ನರಕಾರ್ಹ; ನರಕಕ್ಕೆ ಒಯ್ಯುವ: deadly sin ನರಕಾರ್ಹ ಶಾಪ.
- ಕಡುಹಗೆಯ; ಬದ್ಧದ್ವೇಷದ; ಬದ್ಧ ವೈರದ: deadly enemies ಬದ್ಧವೈರಿಗಳು.
- ವಿಧ್ವಸಂಸಕ; ವಿನಾಶಕ; ಹಾನಿಕರ.
- ಸಾವಿನಂಥ; ಹೆಣದಂಥ; ಮರಣಪ್ರಾಯ: deadly paleness ಹೆಣದ ಬಿಳಿಚು; ಶವವಿವರ್ಣತೆ. deadly faintness ಹೆಣದಂತೆ ಕಳೆಯಿಲ್ಲದಿರುವಿಕೆ. deadly gloom ಸಾವಿನಂಥ – ಮಂಕು, ಗ್ಲಾನಿ, ವಿಷಣ್ಣತೆ.
- ಅತಿ; ಬಹಳ; ತೀವ್ರ; ತುಂಬ; ವಿಪರೀತ: in deadly haste ವಿಪರೀತ ಆತುರವಾಗಿ. deadly dullness ಅತಿ ನೀರಸತೆ; ಬಹಳ ಮಂಕು.
- (ಗುರಿ, ಉದ್ದೇಶ, ಮೊದಲಾದವುಗಳ ವಿಷಯದಲ್ಲಿ) ನಿಖರವಾದ; ಖಚಿತವಾದ; ನಿಷ್ಕೃಷ್ಟವಾದ; ಕರಾರುವಾಕ್ಕಾದ.
- (ಆಡುಮಾತು) ಮಂಕು ಕವಿದ; ಉತ್ಸಾಹಶೂನ್ಯ; ನಿರಾಶೆ ತುಂಬಿದ.
2deadly
ಡೆಡ್ಲಿ
ಕ್ರಿಯಾವಿಶೇಷಣ
- ಸತ್ತಂತೆ; ಹೆಣದಂತೆ; ಮೃತಪ್ರಾಯವಾಗಿ; ಸಾವನ್ನು ಹೋಲುವ: deadly white ಹೆಣದಂತೆ ಬಿಳಿಚಿಕೊಂಡ. deadly faint ಹೆಣದಂತೆ ಕಳೆಯಿಲ್ಲದೆ.
- ತುಂಬ; ಬಹಳ; ಬಹು; ತೀವ್ರವಾಗಿ; ಅತಿಯಾಗಿ; ವಿಪರೀತವಾಗಿ: deadly tired ತುಂಬ ದಣಿದ. deadly dull ಬಹು ನೀರಸವಾಗಿ.