See also 2deadly
1deadly ಡೆಡ್ಲಿ
ಗುಣವಾಚಕ
  1. ಸಾಯಿಸುವ;ಮಾರಕ; (ಪ್ರಾಣ) ಘಾತುಕ; ಪ್ರಾಣಾಂತಿಕ: deadly weapons ಮಾರಕಾಸ್ತ್ರಗಳು.
  2. ತೀವ್ರಹಾನಿ ಯಾ ಅಪಾಯವನ್ನು ಉಂಟುಮಾಡುವ.
  3. ವಿಷಕರ; ನಂಜಿನ; ವಿಷಸ್ವಭಾವದ; ವಿಷಭರಿತ: deadly serpent ವಿಷಸರ್ಪ.
  4. (ದೇವತಾಶಾಸ್ತ್ರ) ನಾರಕ; ನರಕಾರ್ಹ; ನರಕಕ್ಕೆ ಒಯ್ಯುವ: deadly sin ನರಕಾರ್ಹ ಶಾಪ.
  5. ಕಡುಹಗೆಯ; ಬದ್ಧದ್ವೇಷದ; ಬದ್ಧ ವೈರದ: deadly enemies ಬದ್ಧವೈರಿಗಳು.
  6. ವಿಧ್ವಸಂಸಕ; ವಿನಾಶಕ; ಹಾನಿಕರ.
  7. ಸಾವಿನಂಥ; ಹೆಣದಂಥ; ಮರಣಪ್ರಾಯ: deadly paleness ಹೆಣದ ಬಿಳಿಚು; ಶವವಿವರ್ಣತೆ. deadly faintness ಹೆಣದಂತೆ ಕಳೆಯಿಲ್ಲದಿರುವಿಕೆ. deadly gloom ಸಾವಿನಂಥ – ಮಂಕು, ಗ್ಲಾನಿ, ವಿಷಣ್ಣತೆ.
  8. ಅತಿ; ಬಹಳ; ತೀವ್ರ; ತುಂಬ; ವಿಪರೀತ: in deadly haste ವಿಪರೀತ ಆತುರವಾಗಿ. deadly dullness ಅತಿ ನೀರಸತೆ; ಬಹಳ ಮಂಕು.
  9. (ಗುರಿ, ಉದ್ದೇಶ, ಮೊದಲಾದವುಗಳ ವಿಷಯದಲ್ಲಿ) ನಿಖರವಾದ; ಖಚಿತವಾದ; ನಿಷ್ಕೃಷ್ಟವಾದ; ಕರಾರುವಾಕ್ಕಾದ.
  10. (ಆಡುಮಾತು) ಮಂಕು ಕವಿದ; ಉತ್ಸಾಹಶೂನ್ಯ; ನಿರಾಶೆ ತುಂಬಿದ.