1creep
ಕ್ರೀಪ್
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ crept).
- (ನೆಲದ ಮೇಲೆ ಬಗ್ಗಿ, ಮಲಗಿ) ಹರಿ; ಹರಿದಾಡು; ಜರುಗು; ದೇಕು; ತೆವಳು.
- ನಿಧಾನವಾಗಿ ಸಾಗು; ಮೆಲ್ಲಗೆ ಸರಿ.
- ಅಳುಕಿನಿಂದ ಹೋಗು; ಭಯದಿಂದ ಚಲಿಸು.
- ಕಳ್ಳತನದಿಂದ, ನುಸುಳಿಕೊಂಡು, ಕಾಣದಂತೆ–ಹೋಗು.
- ಉಪಾಯದಿಂದ ಒಳಕ್ಕೆ ಸೇರಿಕೊ; ಗೊತ್ತಾಗದಂತೆ ನುಸುಳಿಕೊ.
- ಅತಿ ದೀನವಾಗಿ–ವರ್ತಿಸು, ನಡೆದುಕೊ; ಕೃಪಣನಾಗಿ–ಬದುಕು, ಬಾಳು.
- (ಸಸ್ಯಗಳು ನೆಲದ ಮೇಲೆ ಯಾ ಗೋಡೆಯ ಮೇಲೆ) ಹರಡು; ಹಬ್ಬು.
- (ನೀರಿನ ತಳದಲ್ಲಿ ಮುಳುಗಿದ ಪದಾರ್ಥಗಳನ್ನು ಪತ್ತೆ ಹಚ್ಚಲು) ಪಾತಾಳ ಗರಡಿ ಎಳೆ.
- (ಲೋಹವಿದ್ಯೆ) (ಲೋಹದ ವಿಷಯದಲ್ಲಿ) (ಒತ್ತಡದಿಂದ ಯಾ ಅತಿ ಹೆಚ್ಚಿನ ತಾಪದ ಪರಿಣಾಮವಾಗಿ) ಆಕಾರ ಬದಲಾಯಿಸು; ರೂಪವ್ಯತ್ಯಾಸ ಹೊಂದು.
- (ಭೂವಿಜ್ಞಾನ) (ಮಣ್ಣು, ಕಲ್ಲುಚೂರು, ಪದರ ಮೊದಲಾದವು ವಾತಾವರಣದ ವ್ಯತ್ಯಾಸ ಮೊದಲಾದವುಗಳಿಂದಲೋ ಒತ್ತಡ, ಇಳಿಜಾರು, ಯಾ ಹಿಗ್ಗುಕುಗ್ಗುಗಳಿಂದಲೋ) ಸ್ಥಳಾಂತರಗೊಳ್ಳು; ಮೆಲ್ಲನೆ–ಸರಿ, ಜಾರು, ಜರುಗು.
- ಕ್ರಮೇಣ–ಹೆಚ್ಚು, ಏರು, ವರ್ಧಿಸು, ಹೆಚ್ಚುತ್ತಾ ಹೋಗು: creeping inflation ಕ್ರಮೇಣ ಹೆಚ್ಚುತ್ತಾ ಇರುವ ಹಣದುಬ್ಬರ.
- (ದೇಹದ ವಿಷಯದಲ್ಲಿ) (ಭಯ, ಹೆದರಿಕೆ ಮೊದಲಾದವುಗಳ ಪರಿಣಾಮವಾಗಿ) ಮುಲಗುಡು; ಮುಲಮುಲ ಎನ್ನು; ಜುಮ್ಮೆನ್ನು; ಏನೋ ಹರಿದಾಡಿದಂತಾಗು: flesh creeps ಮೈಜುಮ್ಮೆನ್ನುತ್ತದೆ; (ಭಯ, ಅಸಹ್ಯ ಮೊದಲಾದವುಗಳಿಂದ) ಮೈಮೇಲೆ ಹರಿದಂತಾಗುತ್ತದೆ.