See also 1creep
2creep ಕ್ರೀಪ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) ಕಂಪಭೀತಿ; ಅತಿಗಾಬರಿ; ಮೈಮುದುಡುವ ಭೀತಿ: gave me the creeps ಗಾಬರಿಯಿಂದ ಮೈಮುದುಡಿತು.
  2. (ರೈಲುಮಾರ್ಗ, ರಸ್ತೆ ಮೊದಲಾದವುಗಳ ಒಡ್ಡಿನ ತಳಭಾಗದಲ್ಲಿನ) ತಗ್ಗಾದ ಕಮಾನು; ಸಣ್ಣ, ಕಿರು–ಕಮಾನು.
  3. ನುಸುಳುಗಂಡಿ; ಬೇಲಿ ಮೊದಲಾದವುಗಳಲ್ಲಿಯ ಕಂಡಿ.
  4. (ಅಶಿಷ್ಟ) ಅನಿಷ್ಟ; ಅಸಹ್ಯ ಮನುಷ್ಯ.
  5. (ಭೂವಿಜ್ಞಾನ) ಸರಣ; ಸರಿಕೆ; ಜಾರಿಕೆ; ಜರುಗು; ಮಣ್ಣು, ಕಲ್ಲುಚೂರು ಮೊದಲಾದವು, ಸಾಮಾನ್ಯವಾಗಿ ಬೆಟ್ಟದ ಇಳಿಜಾರಿನಲ್ಲಿ ಗುರುತ್ವದಿಂದ ಯಾ ಇತರ ನೈಸರ್ಗಿಕ ಕಾರಣಗಳಿಂದ ನಿಧಾನವಾಗಿ ಕಣ್ಣಿಗೆ ಕಾಣದಂತೆ ಕೆಳಕ್ಕೆ ಜರುಗುವುದು, ಇಳಿಯುವುದು: soil creep ಮಣ್ಣುಸರಿಕೆ. rock creep ಕಲ್ಲುಸರಿಕೆ; ಶಿಲಾಸರಣ.
  6. (ಭೂವಿಜ್ಞಾನ) ಪದರ, ಸ್ತರ–ಸರಿಕೆ; ಸ್ತರಸರಣ; ಹಿಗ್ಗಣೆ, ಕುಗ್ಗಣೆ ಮೊದಲಾದವುಗಳಿಂದ ಸ್ತರ ನಿಧಾನವಾಗಿ ಚಲಿಸುವುದು.
  7. (ಲೋಹವಿದ್ಯೆ) ಆಕಾರ ಬದಲಾವಣೆ; ರೂಪವ್ಯತ್ಯಾಸ; ಮುಖ್ಯವಾಗಿ ಲೋಹವು ಒತ್ತಡದಿಂದ ಯಾ ಹೆಚ್ಚಿನ ತಾಪದಿಂದ ನಿಧಾನವಾಗಿ ರೂಪವನ್ನು ಬದಲಾಯಿಸುವುದು.