See also 2covenant
1covenant ಕವ(ವಿ)ನಂಟ್‍
ನಾಮವಾಚಕ
  1. ಒಪ್ಪಂದ; ಒಡಂಬಡಿಕೆ; ಪರಸ್ಪರ ಒಪ್ಪಿಗೆ.
  2. (ನ್ಯಾಯಶಾಸ್ತ್ರ) ಕರಾರು.
  3. ಕರಾರಿನ ಷರತ್ತುಗಳಲ್ಲಿ ಒಂದು.
  4. (ಬೈಬ್‍ಲ್‍) ದೇವರಿಗೂ ಪ್ರಾಚೀನ ಇಸ್ರೇಲರಿಗೂ ಆದ ಒಡಂಬಡಿಕೆ.
ಪದಗುಚ್ಛ
  1. ARK of the Covenant.
  2. Covenant of the League of Nations ಲೀಗ್‍ ಆಹ್‍ ನೇಷನ್ಸ್‍ ಸ್ಥಾಪನೆಯ–ದಾಖಲೆ, ದಸ್ತಾವೇಜು.
  3. Day of the Covenant (ದಕ್ಷಿಣ ಆಹ್ರಿಕ) ಡಿಸೆಂಬರ್‍ 16ನೆ ತಾರೀಖು.
  4. land of the Covenant = Canaan.
  5. National Covenant ರಾಷ್ಟ್ರೀಯ ಒಡಂಬಡಿಕೆ; 1638ರಲ್ಲಿ ಸ್ಕಾಟ್ಲಂಡ್‍ನಲ್ಲಿ ಪ್ರೆಸ್ಬಿಟೇರಿಯನ್‍ ಧರ್ಮದ ರಕ್ಷಣೆಗಾಗಿ ಬ್ರಿಟಿಷ್‍ ರಾಜನೊಡನೆ ಮಾಡಿಕೊಂಡ–ಒಪ್ಪಂದ, ಕರಾರು.
  6. Solemn League and Covenant (ಇಂಗ್ಲಂಡಿನಲ್ಲೂ ಸ್ಕಾಟ್ಲಂಡಿನಲ್ಲೂ ಪ್ರೆಸ್ಬಿಟೇರಿಯನ್‍ ಧರ್ಮವನ್ನು ಸ್ಥಾಪನೆಮಾಡಿದ) ವಿಧಿವಿಹಿತವಾದ ಒಡಂಬಡಿಕೆ (1643).
See also 1covenant
2covenant ಕವ(ವಿ)ನಂಟ್‍
ಅಕರ್ಮಕ ಕ್ರಿಯಾಪದ

( ಸಕರ್ಮಕ ಕ್ರಿಯಾಪದ ಸಹ) (ಮುಖ್ಯವಾಗಿ ಕಾನೂನುಬದ್ಧವಾದ) ಕರಾರು ಮಾಡಿಕೊ; ದಾಖಲೆಯ, ದಸ್ತಾವೇಜಿನ ಮೂಲಕ ಒಪ್ಪಂದ ಮಾಡಿಕೊ.