See also 2court
1court ಕೋರ್ಟ್‍
ನಾಮವಾಚಕ
  1. ಅಂಗಳ; ಅಂಗಣ; ತೊಟ್ಟಿ; ಗೋಡೆಗಳಿಂದ ಯಾ ಕಟ್ಟಡಗಳಿಂದ ಸುತ್ತುವರಿದಿರುವ ಪ್ರದೇಶ.
  2. (ಕೇಂಬ್ರಿಜ್‍ ವಿಶ್ವವಿದ್ಯಾನಿಲಯದಲ್ಲಿ) ಕಾಲೇಜಿನ ಒಳಾಂಗಣ.
  3. ಒಳಾಂಗಣ; ಒಳತೊಟ್ಟಿ; ಮನೆಯೊಳಗಿನ ಯಾ ಮನೆಯ ಒಂದು ಭಾಗವಾದ ಅಂಗಳ.
  4. (ಬ್ರಿಟಿಷ್‍ ಪ್ರಯೋಗ) (ಪಟ್ಟಣದಲ್ಲಿ) (ರಸ್ತೆಯ ಕಡೆಗೆ ಒಂದೇ ಹೆಬ್ಬಾಗಿಲಿರುವ ಯಾ ಸುತ್ತಲೂ ಮನೆಗಳಿರುವ) ವಠಾರ.
  5. ತುಂಡು–ಬೀದಿ, ರಸ್ತೆ; ಉದ್ದವಾಗಿರದ ರಸ್ತೆ.
  6. (ಬ್ರಿಟನ್ನಿನಲ್ಲಿ) ಭಾರಿಮನೆ; ವಾಡೆ.
  7. ಕ್ರೀಡಾಂಗಣ; ಆಟಗಳಿಗಾಗಿ ಸುತ್ತಲೂ ಆವರಣವುಳ್ಳ, ಚಾವಣಿವುಳ್ಳ ಯಾ ಇಲ್ಲದ ಅಂಗಳ.
  8. ಟೆನಿಸ್‍ ಕೋರ್ಟು ಯಾ ಟೆನಿಸ್‍ ಕೋರ್ಟಿನ ಒಂದು ಭಾಗ.
  9. ಲಾನ್‍ ಟೆನಿಸ್‍ ಆಟಕ್ಕಾಗಿ ಎಲ್ಲೆ ಗುರುತು ಹಾಕಿರುವ ನೆಲ.
  10. ಅರಮನೆ; ರಾಜನ ನಿವಾಸ.
  11. ರಾಜಪರಿವಾರ.
  12. ರಾಜನ ಆಸ್ಥಾನ; ಓಲಗ; ಒಡ್ಡೋಲಗ; ದರ್ಬಾರು; ರಾಜಸಭೆ.
  13. ರಾಜನ ಆಸ್ಥಾನಿಕರು; ರಾಜಾಸ್ಥಾನದ ದೊಡ್ಡ ಮನುಷ್ಯರು.
  14. (ರಾಜ್ಯಭಾರ ಮಾಡುವ) ದೊರೆ ಮತ್ತು ಮಂತ್ರಿಗಳು.
  15. ನ್ಯಾಯಸಭೆ; ನ್ಯಾಯಮಂಡಲಿ; ನ್ಯಾಯಾಧೀಶರ ಯಾ ನ್ಯಾಯತೀರ್ಪಿಗಾಗಿ ನಿಯಮಿತರಾದ ಇತರರ ಸಭೆ: court of law, law court, court of justice, court of judicature ನ್ಯಾಯಾಲಯ; ನ್ಯಾಯಸ್ಥಾನ.
  16. ನ್ಯಾಯಸ್ಥಾನ; ನ್ಯಾಯಾಲಯ; ಕೋರ್ಟು.
  17. ವಿಧ್ಯುಕ್ತ ಸದಸ್ಯರು; ಒಂದು ಮಂಡಲಿಯ ಯಾ ಸಂಘದ ಅರ್ಹತೆಯುಳ್ಳ ಸದಸ್ಯರು.
  18. ಇಂಥವರ ಸಭೆ.
  19. (ಕೆಲವು ಮಿತ್ರಕೂಟಗಳಲ್ಲಿ) ಸಭಾಮಂದಿರ.
  20. (ಅನುಗ್ರಹ, ಆಸಕ್ತಿಗಳಿಗಾಗಿ ತೋರಿಸುವ) ಗೌರವ; ಮನ್ನಣೆ; ಮರ್ಯಾದೆ; ಅನುನಯ.
ಪದಗುಚ್ಛ
  1. Court of St.James’s (ಆಡಳಿತ ನಡೆಸುತ್ತಿರುವ) ಬ್ರಿಟಿಷ್‍ ದೊರೆ ಮತ್ತು ಮಂತ್ರಿಮಂಡಲ.
  2. go to court ಕೋರ್ಟಿಗೆ ಹೋಗು; ಕೋರ್ಟು ಹತ್ತು; ಮೊಕದ್ದಮೆ ಹೂಡು; ಕಾನೂನುಕ್ರಮ ತೆಗೆದುಕೊ.
  3. High Court of Parliament ಅಧಿವೇಶನದಲ್ಲಿರುವ ಪಾರ್ಲಿಮಂಟ್‍ ಸಭೆ.
  4. in court ಕೋರ್ಟಿನಲ್ಲಿ ಹಾಜರು; ಕಕ್ಷಿಯಾಗಿಯೋ ವಕೀಲನಾಗಿಯೋ ನ್ಯಾಯಾಲಯದಲ್ಲಿ ಹಾಜರಾಗುವುದು.
  5. in open court ಬಹಿರಂಗವಾಗಿ; ಎಲ್ಲರೆದುರಿಗೂ; ಸಾರ್ವಜನಿಕವಾಗಿ.
  6. police court ಪೊಲೀಸ್‍ ಕೋರ್ಟು; ಪೊಲೀಸಿನವರು ಕೊಟ್ಟ ದೂರುಗಳನ್ನು ಅಲ್ಲೇ ವಿಚಾರಿಸುವ ನ್ಯಾಯಸ್ಥಾನ.
ನುಡಿಗಟ್ಟು
  1. hold court (ಅಭಿಮಾನಿಗಳು ಮೊದಲಾದವರ ನಡುವೆ) ದರ್ಬಾರು ನಡೆಸು.
  2. out of court
    1. (ವಾದಿಯ ಮತ್ತು ವಾದದ ವಿಷಯದಲ್ಲಿ) ಕೋರ್ಟುಬಾಹಿರ; ವಾದಾರ್ಹವಲ್ಲದ; ವಾದಬಾಹಿರ; ಮನವಿಯ ಹಕ್ಕಿಲ್ಲದ.
    2. ಅಸಂಬದ್ಧ; ಅಸಂಗತ; ಅಪ್ರಕೃತ; ಅನಗತ್ಯ; ಚರ್ಚೆಗೆ ಅನರ್ಹವಾದ.
    3. (ಒಪ್ಪಂದ, ರಾಜಿ, ವ್ಯವಸ್ಥೆಗಳ ವಿಷಯದಲ್ಲಿ) ಕೋರ್ಟುಬಾಹಿರವಾದ; ಕೋರ್ಟಿನಿಂದ ಹೊರಗೆ ನಡೆದ; ಕೋರ್ಟಿನಲ್ಲಿ ವಾದ ಪ್ರಾರಂಭಿಸುವ ಯಾ ತೀರ್ಪು ನೀಡುವ ಮುನ್ನ ಖಾಸಗಿಯಾಗಿ ಆದ, ಮಾಡಿಕೊಂಡ.
    4. (ವಿಷಯ ಯಾ ವ್ಯಕ್ತಿಯ ವಿಷಯದಲ್ಲಿ) ಪರಿಗಣಿಸಬೇಕಿಲ್ಲದ; ಗಣನೆಗೆ ಅರ್ಹವಲ್ಲದ; ಅಪರಿಗಣನೀಯ; ಪರಿಗಣನೆಗೆ ತೆಗೆದುಕೊಳ್ಳಬೇಕಾಗಿಲ್ಲದ.
  3. pay court to ಗೌರವ ತೋರು; ಮರ್ಯಾದೆ ತೋರಿಸು; ಅನುನಯ ತೋರು; ಅನುಸರಣೆ ಮಾಡು.
  4. the ball is in your court ಈಗ ನಿನ್ನ ಸರದಿ; ಈಗ ಮುಂದಿನ ಕ್ರಮ ತೆಗೆದುಕೊಳ್ಳಬೇಕಾದದ್ದು ನೀನು.
See also 1court
2court ಕೋರ್ಟ್‍
ಸಕರ್ಮಕ ಕ್ರಿಯಾಪದ
  1. ಓಲೈಸು; ಅನುನಯ ತೋರು; (ಆದರ, ಉಪಚಾರ, ಹೊಗಳಿಕೆ ಮೊದಲಾದವುಗಳಿಂದ ಅಧಿಕಾರಿ ಮೊದಲಾದವರ) ಅನುಗ್ರಹ, ಪ್ರೀತಿ, ಮೆಚ್ಚಿಕೆ ಮೊದಲಾದವನ್ನು ಸಂಪಾದಿಸಲು ಯತ್ನಿಸು.
  2. ಪ್ರೀತಿಸು; ಪ್ರಣಯ ತೋರು; ಹುಡುಗಿಯನ್ನು ಒಲಿಸಿಕೊಳ್ಳಲು ಪ್ರಯತ್ನಿಸು.
  3. (ರೂಪಕವಾಗಿ) ಮೋಹಗೊಳಿಸು; ಮರುಳುಗೊಳಿಸು; ಮುಗ್ಧನನ್ನಾಗಿ ಮಾಡು; ಬುಟ್ಟಿಗೆ ಹಾಕಿಕೊ; ವಂಚಿಸು.
  4. (ಅವಿವೇಕದಿಂದ, ಬುದ್ಧಿಯಿಲ್ಲದೆ) ಕರೆ ಕೊಡು; ಆಹ್ವಾನ ಕೊಡು; ಕೋರು; ಬರಮಾಡಿಕೊ: you are courting disaster ನೀನು ಕೇಡನ್ನು ಕರೆಯುತ್ತಿರುವಿ.
  5. (ಮೆಚ್ಚಿಕೆ ಮೊದಲಾದವನ್ನು) ಗಳಿಸಲು ಯತ್ನಿಸು.
ಅಕರ್ಮಕ ಕ್ರಿಯಾಪದ
  1. ಪ್ರೀತಿಸು; ಪ್ರಣಯ ತೋರು; ಪ್ರಣಯಾಸಕ್ತನಾಗು.
  2. (ಪ್ರಾಣಿಯ ವಿಷಯದಲ್ಲಿ) ಪ್ರಣಯ ಚೇಷ್ಟೆಗೆ ತೊಡಗು.