See also 2coin
1coin ಕಾಇನ್‍
ನಾಮವಾಚಕ
  1. ಟಂಕಿಸಿದ ಲೋಹ, ಬಿಲ್ಲೆ; ಅಧಿಕೃತ ಮುದ್ರೆಯಿಂದ ನಾಣ್ಯವಾಗಿ ಟಂಕಿಸಿದ ಲೋಹದ ಬಿಲ್ಲೆ.
  2. ನಾಣ್ಯ; ಲೋಹದ ಹಣ.
ಪದಗುಚ್ಛ

false coin

  1. ಖೋಟಾನಾಣ್ಯ; ಕೀಳು ಲೋಹದಲ್ಲಿ, ಕಳ್ಳತನದಿಂದ ಮಾಡಿದ ನಾಣ್ಯ.
  2. (ರೂಪಕವಾಗಿ) ಖೋಟಾ; ಕೃತ್ರಿಮ; ನಕಲಿ; ಖೋಟಾ ವ್ಯಕ್ತಿ ಯಾ ವಸ್ತು.
ನುಡಿಗಟ್ಟು
  1. other side of the coin ನಾಣ್ಯದ ಇನ್ನೊಂದು ಮುಖ; (ಯಾವುದೇ ವಿಷಯದ ಬಗ್ಗೆ) ವಿರುದ್ಧ ದೃಷ್ಟಿಕೋನ.
  2. pay one in one’s own coin ತನಗೆ ಮಾಡಿದ್ದನ್ನು ಅವರಿಗೇ ಯಾ ಮಾಡಿದವರಿಗೆ ಹಿಂದಿರುಗಿಸು; (ಹಾಸ್ಯಕ್ಕೆ ಹಾಸ್ಯ, ಗೇಲಿಗೆ ಗೇಲಿ, ದೂಷಣೆಗೆ ದೂಷಣೆ, ಏಟಿಗೆ ಏಟು, ಹಿಂಸೆಗೆ ಪ್ರತಿಹಿಂಸೆ–ಮಾಡಿ) ಮುಯ್ಯಿಗೆ ಮುಯ್ಯಿ ತೀರಿಸು.
See also 1coin
2coin ಕಾಇನ್‍
ಸಕರ್ಮಕ ಕ್ರಿಯಾಪದ
  1. (ಲೋಹದ ಬಿಲ್ಲೆಗೆ ಅಧಿಕೃತ ಟಂಕವೊತ್ತಿ, ಮುದ್ರೆ ಒತ್ತಿ) ನಾಣ್ಯ ಮಾಡು; ನಾಣ್ಯ ತಯಾರಿಸು; ಟಂಕಿಸು.
  2. ಲೋಹದ ನಾಣ್ಯ ಮಾಡು; ಲೋಹವನ್ನು ನಾಣ್ಯವಾಗಿ ಪರಿವರ್ತಿಸು.
  3. (ಮುಖ್ಯವಾಗಿ ಹೊಸ ಪದವನ್ನು) ಸೃಷ್ಟಿಸು; ಕಲ್ಪಿಸು; ರಚಿಸು.
ನುಡಿಗಟ್ಟು
  1. coin money ಬೇಗ ದುಡ್ಡು ಮಾಡು; ಬೇಗ ಹಣ ಗಳಿಸು.
  2. to coin a phrase (ವ್ಯಂಗವಾಗಿ) (ಹಳಸಲು ಮಾತನಾಡುವಾಗಲೋ ತೀರ ಸಾಮಾನ್ಯ ಅಭಿಪ್ರಾಯವನ್ನು ಸೂಚಿಸುವಾಗಲೋ ಒಕ್ಕಣೆಯಾಗಿ ಬಳಸುವ) ಈ ಮಾತನ್ನು ಬಳಸಬಹುದಾದಲ್ಲಿ; ಹೀಗೆ ಹೇಳಬಹುದಾದರೆ; ಈ ಶಬ್ದ ಪ್ರಯೋಗಿಸಿದರೆ.