See also 2coddle
1coddle ಕಾಡ್‍ಲ್‍
ಸಕರ್ಮಕ ಕ್ರಿಯಾಪದ
  1. ಅತ್ಯುಪಚರಿಸು; ಅತಿಶುಶ್ರೂಷೆ ಮಾಡು; ಅತ್ಯುಪಚಾರ ಮಾಡು; ರೋಗಿಯನ್ನು ಉಪಚರಿಸುವಂತೆ–ಉಪಚರಿಸು, ಆರೈಕೆ ಮಾಡು.
  2. ಶೀತ ತಟ್ಟದಂತೆ, ದೇಹಶ್ರಮವಾಗದಂತೆ ನೋಡಿಕೊ.
  3. ಚೆನ್ನಾಗಿ ತಿನ್ನಿಸು.
  4. ಅತಿ ಲಾಲನೆ ಮಾಡು; ಅತಿಮುದ್ದು ಮಾಡು.
  5. (ಹಣ್ಣು, ಮೊಟ್ಟೆ, ಮೊದಲಾದವನ್ನು ಕುದಿ ಬರದ ನೀರಿನಲ್ಲಿ) ಹದವಾಗಿ ಬೇಯಿಸು.
See also 1coddle
2coddle ಕಾಡ್‍ಲ್‍
ನಾಮವಾಚಕ

ಅತ್ಯುಪಚಾರಿ; ಬಲು ಆರೈಕೆಯವ; ಅತಿ ಉಪಚಾರ–ಮಾಡುವವ, ಮಾಡಿಕೊಳ್ಳುವವ.