See also 2air
1air ಏರ್‍
ಸಕರ್ಮಕ ಕ್ರಿಯಾಪದ
  1. ಗಾಳಿಯಾಡುವಂತೆ ಮಾಡು; ಗಾಳಿಯಾಡಿಸು; ಗಾಳಿಗೆ ಒಡ್ಡು; ಆರ ಹಾಕು; ಆರಿಸು.
  2. ಶಾಖಕ್ಕೆ ಒಡ್ಡು; ಬೆಚ್ಚಗೆ ಮಾಡು; ತೇವ ತೆಗೆ; ಹಸಿ ಆರಿಸು.
  3. (ಗುಣಗಳನ್ನು, ಒಳ್ಳೆಯ ಬಟ್ಟೆಗಳನ್ನು) ಪ್ರದರ್ಶಿಸು.
  4. (ಕುಂದುಕೊರತೆಗಳನ್ನು, ಸಿದ್ಧಾಂತಗಳನ್ನು) ಬಹಿರಂಗಪಡಿಸು; ಬಯಲು ಮಾಡು; ಪ್ರಕಟಿಸು: air one’s views ಅಭಿಪ್ರಾಯಗಳನ್ನು ಪ್ರಕಟಮಾಡು.
ಅಕರ್ಮಕ ಕ್ರಿಯಾಪದ
  1. ಗಾಳಿಗೆ ಹರಡು.
  2. ಗಾಳಿಗೊಡ್ಡಿಕೊ: the cloth is airing on the rod ಕೋಲಿನ ಮೇಲೆ ಬಟ್ಟೆ ಗಾಳಿಗೊಡ್ಡಿಕೊಂಡಿದೆ (ಒಣಗುತ್ತಿದೆ).
ನುಡಿಗಟ್ಟು

air oneself (ಶುದ್ಧವಾದ) ಗಾಳಿ ಸೇವನೆಗೆ ಹೊರಡು, ಹೋಗು; ವಾಯು ಸಂಚಾರ ಹೊರಡು.

See also 1air
2air ಏರ್‍
ನಾಮವಾಚಕ
  1. ಗಾಳಿ; ಎಲರು; ವಾಯು.
  2. ವಾಯುಮಂಡಲ; ವಿಮಾನ ಮೊದಲಾದವುಗಳಿಂದ (ಮುಖ್ಯವಾಗಿ ಯುದ್ಧ ರೀತಿಯ) ಕಾರ್ಯಾಚರಣೆ ನಡೆಸುವ ವಾಯು ಪ್ರದೇಶ.
  3. ವಾತಾವರಣ (ರೂಪಕವಾಗಿ ಸಹ).
  4. ಆಕಾಶ; ಬಾನು: birds of the air ಆಕಾಶದ ಹಕ್ಕಿಗಳು.
  5. ಮೆಲುಗಾಳಿ; ಮಂದಮಾರುತ.
  6. ರೇಡಿಯೋ, ಆಕಾಶವಾಣಿ ಯಾ ಟೆಲಿವಿಷನ್‍.
  7. ತೋರಿಕೆ; ಭಾವ; ಲಕ್ಷಣ: an air of absurdity ಅಸಂಗತತೆಯ ಭಾವ.
  8. ನಡೆವಳಿ; ನಡತೆ; ವರ್ತನೆ; ಠೀವಿ; ರೀತಿ: triumphant air ವಿಜಯದ ಠೀವಿ.
  9. ಆತ್ಮವಿಶ್ವಾಸ; ಧೈರ್ಯ: does things with an air ಧೈರ್ಯವಾಗಿ ಕೆಲಸಗಳನ್ನು ಮಾಡುತ್ತಾನೆ.
  10. (ಬಹುವಚನದಲ್ಲಿ) ಪ್ರತಿಷ್ಠೆ; ಜಂಬ; ಗಮ್ಮತ್ತು; ಠೀವಿ; (ತೋರ್ಕೆಯ) ದೊಡ್ಡಸ್ತಿಕೆ: gave himself air ಇಲ್ಲದ ದೊಡ್ಡಸ್ತಿಕೆ ತೋರಿಸಿದ.
  11. (ಸಂಗೀತ) ರಾಗ; ಧಾಟಿ; ಮಟ್ಟು; ಮುಖ್ಯವಾಗಿ ಪಾಶ್ಚಾತ್ಯ ಸಂಗೀತ ಪದ್ಧತಿಯಲ್ಲಿ ತಾರಸ್ವರದ ಹಾಡಿನ ಮಟ್ಟು.
ನುಡಿಗಟ್ಟು
  1. beat the air ಗಾಳಿ ಗುದ್ದು; ವ್ಯರ್ಥಪ್ರಯತ್ನ ಮಾಡು.
  2. by air ವಿಮಾನದಲ್ಲಿ; ವಿಮಾನದ ಮೂಲಕ.
  3. castles in the air ಗಾಳಿ ಗೋಪುರಗಳು; ಕಾರ್ಯಸಾಧ್ಯವಲ್ಲದ ಕಲ್ಪನೆಗಳು.
  4. $^3$clear the air.
  5. give (person) the air (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ವಜಾಮಾಡು.
  6. hot air ಜಂಬ; ಬಡಾಯಿ.
  7. in the air.
    1. (ಅಭಿಪ್ರಾಯ, ಭಾವನೆ, ಮೊದಲಾದವುಗಳ ವಿಷಯದಲ್ಲಿ) ಹರಡಿರುವ; ಹಬ್ಬಿರುವ.
    2. (ಯೋಜನೆ ಮೊದಲಾದವುಗಳ ವಿಷಯದಲ್ಲಿ) ಗಾಳಿಸುದ್ದಿಯಾಗಿ; ಅನಿಶ್ಚಿತವಾಗಿ; ಸಂದಿಗ್ಧವಾಗಿ.
  8. into thin air ಸಂಪೂರ್ಣ ಕಣ್ಮರೆಯಾಗಿ; ಅದೃಶ್ಯವಾಗಿ.
  9. on the air ಆಕಾಶವಾಣಿಯಲ್ಲಿ ಯಾ ರೇಡಿಯೋದಲ್ಲಿ ಪ್ರಸಾರವಾಗುತ್ತ.
  10. open air ಬಯಲು; ಬಟ್ಟಬಯಲು.
  11. take the air ಹೊರಕ್ಕೆ ಹೊರಡು; ಗಾಳಿಸೇವನೆಗೆ ಹೊರಡು.
  12. tread up(on) air ಮೈಯುಬ್ಬಿರು; ಆನಂದಪರವಶನಾಗಿರು.