2air
ಏರ್
ನಾಮವಾಚಕ
- ಗಾಳಿ; ಎಲರು; ವಾಯು.
- ವಾಯುಮಂಡಲ; ವಿಮಾನ ಮೊದಲಾದವುಗಳಿಂದ (ಮುಖ್ಯವಾಗಿ ಯುದ್ಧ ರೀತಿಯ) ಕಾರ್ಯಾಚರಣೆ ನಡೆಸುವ ವಾಯು ಪ್ರದೇಶ.
- ವಾತಾವರಣ (ರೂಪಕವಾಗಿ ಸಹ).
- ಆಕಾಶ; ಬಾನು: birds of the air ಆಕಾಶದ ಹಕ್ಕಿಗಳು.
- ಮೆಲುಗಾಳಿ; ಮಂದಮಾರುತ.
- ರೇಡಿಯೋ, ಆಕಾಶವಾಣಿ ಯಾ ಟೆಲಿವಿಷನ್.
- ತೋರಿಕೆ; ಭಾವ; ಲಕ್ಷಣ: an air of absurdity ಅಸಂಗತತೆಯ ಭಾವ.
- ನಡೆವಳಿ; ನಡತೆ; ವರ್ತನೆ; ಠೀವಿ; ರೀತಿ: triumphant air ವಿಜಯದ ಠೀವಿ.
- ಆತ್ಮವಿಶ್ವಾಸ; ಧೈರ್ಯ: does things with an air ಧೈರ್ಯವಾಗಿ ಕೆಲಸಗಳನ್ನು ಮಾಡುತ್ತಾನೆ.
- (ಬಹುವಚನದಲ್ಲಿ) ಪ್ರತಿಷ್ಠೆ; ಜಂಬ; ಗಮ್ಮತ್ತು; ಠೀವಿ; (ತೋರ್ಕೆಯ) ದೊಡ್ಡಸ್ತಿಕೆ: gave himself air ಇಲ್ಲದ ದೊಡ್ಡಸ್ತಿಕೆ ತೋರಿಸಿದ.
- (ಸಂಗೀತ) ರಾಗ; ಧಾಟಿ; ಮಟ್ಟು; ಮುಖ್ಯವಾಗಿ ಪಾಶ್ಚಾತ್ಯ ಸಂಗೀತ ಪದ್ಧತಿಯಲ್ಲಿ ತಾರಸ್ವರದ ಹಾಡಿನ ಮಟ್ಟು.
ನುಡಿಗಟ್ಟು
- beat the air ಗಾಳಿ ಗುದ್ದು; ವ್ಯರ್ಥಪ್ರಯತ್ನ ಮಾಡು.
- by air ವಿಮಾನದಲ್ಲಿ; ವಿಮಾನದ ಮೂಲಕ.
- castles in the air ಗಾಳಿ ಗೋಪುರಗಳು; ಕಾರ್ಯಸಾಧ್ಯವಲ್ಲದ ಕಲ್ಪನೆಗಳು.
- $^3$clear the air.
- give (person) the air (ಅಮೆರಿಕನ್ ಪ್ರಯೋಗ) (ಅಶಿಷ್ಟ) ವಜಾಮಾಡು.
- hot air ಜಂಬ; ಬಡಾಯಿ.
- in the air.
- (ಅಭಿಪ್ರಾಯ, ಭಾವನೆ, ಮೊದಲಾದವುಗಳ ವಿಷಯದಲ್ಲಿ) ಹರಡಿರುವ; ಹಬ್ಬಿರುವ.
- (ಯೋಜನೆ ಮೊದಲಾದವುಗಳ ವಿಷಯದಲ್ಲಿ) ಗಾಳಿಸುದ್ದಿಯಾಗಿ; ಅನಿಶ್ಚಿತವಾಗಿ; ಸಂದಿಗ್ಧವಾಗಿ.
- into thin air ಸಂಪೂರ್ಣ ಕಣ್ಮರೆಯಾಗಿ; ಅದೃಶ್ಯವಾಗಿ.
- on the air ಆಕಾಶವಾಣಿಯಲ್ಲಿ ಯಾ ರೇಡಿಯೋದಲ್ಲಿ ಪ್ರಸಾರವಾಗುತ್ತ.
- open air ಬಯಲು; ಬಟ್ಟಬಯಲು.
- take the air ಹೊರಕ್ಕೆ ಹೊರಡು; ಗಾಳಿಸೇವನೆಗೆ ಹೊರಡು.
- tread up(on) air ಮೈಯುಬ್ಬಿರು; ಆನಂದಪರವಶನಾಗಿರು.