See also 2advance  3advance
1advance ಅಡ್ವಾನ್ಸ್‍
ಸಕರ್ಮಕ ಕ್ರಿಯಾಪದ
  1. ಮುಂಬರಿಸು; ಮುಂದಕ್ಕೆ ತರು; ಮುಂದಕ್ಕೆ ಹೋಗುವಂತೆ ಮಾಡು.
  2. (ಯಾವುದೇ ವಿಷಯ, ಮಸೂದೆ, ಮೊದಲಾದವನ್ನು) ಮುಂದಿಡು; ಮಂಡಿಸು: he advanced his new theory before the scientists assembled ನೆರೆದಿದ್ದ ವಿಜ್ಞಾನಿಗಳ ಮುಂದೆ ಆತ ತನ್ನ ಹೊಸ ಸಿದ್ಧಾಂತವನ್ನು ಮಂಡಿಸಿದ.
  3. (ವ್ಯಕ್ತಿ, ಯೋಜನೆ, ಮೊದಲಾದವನ್ನು) ಮುಂತರು; ಮುಂದಕ್ಕೆ ತರು; ಏಳಿಗೆಗೆ, ಅಭಿವೃದ್ಧಿಗೆ ತರು.
  4. (ಹಕ್ಕುಗಳು, ಸಲಹೆಗಳು, ಮೊದಲಾದವನ್ನು) ಮುಂದಿಡು; ಮಂಡಿಸು.
  5. ಮುಂಚಿತಗೊಳಿಸು; ತ್ವರೆಪಡಿಸು; ಕ್ಷಿಪ್ರಗೊಳಿಸು; ಅನಂತರ ನಡೆಯಬೇಕಾದ ಕಾರ್ಯಕ್ರಮಗಳನ್ನು ಮುಂಚಿತವಾದ ತಾರೀಖಿಗೆ ಹಾಕು.
  6. (ಹಣ ಮೊದಲಾದವನ್ನು) ಮುಂಗಡವಾಗಿ ಕೊಡು.
  7. (ಹಣ ಮೊದಲಾದವನ್ನು) ಸಾಲವಾಗಿ ಕೊಡು.
  8. (ಬೆಲೆ, ದರವನ್ನು) ಹೆಚ್ಚಿಸು; ಏರಿಸು.
ಅಕರ್ಮಕ ಕ್ರಿಯಾಪದ
  1. ಮುಂದುವರಿ; ಮುಂದೆ ಸಾಗು.
  2. ಏಳಿಗೆ ಹೊಂದು; ಅಭಿವೃದ್ಧಿ ಹೊಂದು; ಉತ್ಕರ್ಷ ಹೊಂದು; ಪ್ರವರ್ಧಮಾನಕ್ಕೆ, ಉತ್ತಮಸ್ಥಿತಿಗೆ–ಬರು.
  3. (ಬೆಲೆ ದರ, ಮೊದಲಾದವುಗಳ ವಿಷಯದಲ್ಲಿ) ಏರು; ಹೆಚ್ಚು; ಹೆಚ್ಚಾಗು.
See also 1advance  3advance
2advance ಅಡ್ವಾನ್ಸ್‍
ನಾಮವಾಚಕ
  1. ಮುಂದುವರಿಯುವಿಕೆ; ಮುಂದುವರಿಯುವುದು; ಮುಂದೆ ಸಾಗುವುದು.
  2. ಮುಂದಿರುವುದು; ಮುಂಚೆ ಯಾ ಮುಂದೆ ಇರುವ ಸ್ಥಿತಿ.
  3. ಮುಂದುವರಿಯುವಿಕೆ; ಪ್ರಗತಿ; ಉನ್ನತಿ; ಅಭಿವೃದ್ಧಿ; ಏಳಿಗೆ; ಉತ್ಕರ್ಷ.
  4. (ಸಾಮಾನ್ಯವಾಗಿ ಬಹುವಚನದಲ್ಲಿ) ಅನುನಯ; ಸ್ನೇಹಸಂಧಾನ; ಒಲಿಸಿಕೊಳ್ಳುವ ಪ್ರಯತ್ನ; ಪರಿಚಯ ಯಾ ಸ್ನೇಹ ಗಳಿಸಿಕೊಳ್ಳಲು, ಒಪ್ಪಂದ ಮೊದಲಾದವನ್ನು ಮಾಡಿಕೊಳ್ಳಲು, ನಡೆಸುವ ಪ್ರಯತ್ನ.
  5. (ಸಾಮಾನ್ಯವಾಗಿ ಬಹುವಚನದಲ್ಲಿ) ಪ್ರಣಯ; ಪ್ರೇಮ ಸಂಧಾನ; ಅನುರಾಗವನ್ನು ಪಡೆದುಕೊಳ್ಳುವ ಪ್ರಯತ್ನ.
  6. (ಬೆಲೆಯ ವಿಷಯದಲ್ಲಿ) ಏರಿಕೆ; ಹೆಚ್ಚಳ; ವೃದ್ಧಿ.
  7. ಮುಂಗಡ; ಅಗಾವು; ಸಂಚಕಾರ; ಪೂರ್ವಭಾವಿಯಾಗಿಕೊಟ್ಟ ಹಣ ಮೊದಲಾದವು.
  8. ಕಡ; ಸಾಲ; ದೇಣಿ; ಉದ್ದರಿ.
ಪದಗುಚ್ಛ

in advance

  1. (ಕಾಲದ ವಿಷಯದಲ್ಲಿ) ಮುಂಚಿನ; ಮೊದಲಿನ; ಪೂರ್ವಭಾವಿಯಾಗಿ.
  2. (ಸ್ಥಳದ ವಿಷಯದಲ್ಲಿ) ಮುಂದಿನ; ಮುಂದಿರುವ; ಅಗ್ರದಲ್ಲಿರುವ.
See also 1advance  2advance
3advance ಅಡ್ವಾನ್ಸ್‍
ಗುಣವಾಚಕ

ಮುಂಚಿನ; ಮುನ್ನ; ಪೂರ್ವಭಾವಿಯಾದ; ಮುಂಚಿತವಾಗಿ–ಬಂದ, ಕೊಟ್ಟ, ಪ್ರಾಪ್ತವಾದ, ತಲುಪಿದ: advance messenger ಮುಂದೂತ; ಮುಂಚಿತವಾಗಿ ಬಂದ ಯಾ ಕಳುಹಿಸಿದ ದೂತ.