See also 2advance  3advance
1advance ಅಡ್ವಾನ್ಸ್‍
ಸಕರ್ಮಕ ಕ್ರಿಯಾಪದ
  1. ಮುಂಬರಿಸು; ಮುಂದಕ್ಕೆ ತರು; ಮುಂದಕ್ಕೆ ಹೋಗುವಂತೆ ಮಾಡು.
  2. (ಯಾವುದೇ ವಿಷಯ, ಮಸೂದೆ, ಮೊದಲಾದವನ್ನು) ಮುಂದಿಡು; ಮಂಡಿಸು: he advanced his new theory before the scientists assembled ನೆರೆದಿದ್ದ ವಿಜ್ಞಾನಿಗಳ ಮುಂದೆ ಆತ ತನ್ನ ಹೊಸ ಸಿದ್ಧಾಂತವನ್ನು ಮಂಡಿಸಿದ.
  3. (ವ್ಯಕ್ತಿ, ಯೋಜನೆ, ಮೊದಲಾದವನ್ನು) ಮುಂತರು; ಮುಂದಕ್ಕೆ ತರು; ಏಳಿಗೆಗೆ, ಅಭಿವೃದ್ಧಿಗೆ ತರು.
  4. (ಹಕ್ಕುಗಳು, ಸಲಹೆಗಳು, ಮೊದಲಾದವನ್ನು) ಮುಂದಿಡು; ಮಂಡಿಸು.
  5. ಮುಂಚಿತಗೊಳಿಸು; ತ್ವರೆಪಡಿಸು; ಕ್ಷಿಪ್ರಗೊಳಿಸು; ಅನಂತರ ನಡೆಯಬೇಕಾದ ಕಾರ್ಯಕ್ರಮಗಳನ್ನು ಮುಂಚಿತವಾದ ತಾರೀಖಿಗೆ ಹಾಕು.
  6. (ಹಣ ಮೊದಲಾದವನ್ನು) ಮುಂಗಡವಾಗಿ ಕೊಡು.
  7. (ಹಣ ಮೊದಲಾದವನ್ನು) ಸಾಲವಾಗಿ ಕೊಡು.
  8. (ಬೆಲೆ, ದರವನ್ನು) ಹೆಚ್ಚಿಸು; ಏರಿಸು.
ಅಕರ್ಮಕ ಕ್ರಿಯಾಪದ
  1. ಮುಂದುವರಿ; ಮುಂದೆ ಸಾಗು.
  2. ಏಳಿಗೆ ಹೊಂದು; ಅಭಿವೃದ್ಧಿ ಹೊಂದು; ಉತ್ಕರ್ಷ ಹೊಂದು; ಪ್ರವರ್ಧಮಾನಕ್ಕೆ, ಉತ್ತಮಸ್ಥಿತಿಗೆ–ಬರು.
  3. (ಬೆಲೆ ದರ, ಮೊದಲಾದವುಗಳ ವಿಷಯದಲ್ಲಿ) ಏರು; ಹೆಚ್ಚು; ಹೆಚ್ಚಾಗು.