See also 2ace
1ace ಏಸ್‍
ನಾಮವಾಚಕ
  1. ಪಗಡೆ; (ಪಗಡೆ ದಾಳದ) ಒಂದು.
  2. (ಇಸ್ಟೀಟಾಟಗಳಲ್ಲಿ) ಹಾಸು; ಎಕ್ಕ; ಒಂದಂಕದ ಎಲೆ. Figure: ace
  3. ಏಸ್‍:
    1. ಟೆನಿಸ್‍ ಮೊದಲಾದ ಆಟಗಳಲ್ಲಿ ಒಂದು ಪಾಯಿಂಟು.
    2. (ಟೆನಿಸ್‍ನಲ್ಲಿ) ಎದುರಾಳಿಯು ತೆಗೆದುಕೊಳ್ಳಲಾಗದ ಸರ್ವಿಸ್‍.
    3. ಗಾಲ್‍ನಲ್ಲಿ ಒಂದೇ ಏಟಿಗೆ ಪಡೆದ ಅಂಕ.
  4. ನಿಪುಣ ವೈಮಾನಿಕ; ಯುದ್ಧದಲ್ಲಿ ಅನೇಕ ವಿಮಾನಗಳನ್ನು ಉರುಳಿಸಿದ ವಿಮಾನಚಾಲಕ.
  5. (ಯಾವುದೇ ಕ್ಷೇತ್ರದಲ್ಲಿ) ನಿಪುಣ; ಪ್ರವೀಣ; ಶ್ರೇಷ್ಠ: a hockey ace ಹಾಕಿ ನಿಪುಣ.
  6. ಕೂದಲೆಳೆಯಷ್ಟು; ಅಣು; ಲವ; ಅತ್ಯಂತ ಸ್ವಲ್ಪ; ಅಲ್ಪ: it was withing an ace of collapse ಅದು ಸ್ವಲ್ಪದರಲ್ಲಿ, ಕೂದಲೆಳೆಯಷ್ಟರಲ್ಲಿ ಕುಸಿಯುವುದರಲ್ಲಿತ್ತು.
ನುಡಿಗಟ್ಟು
  1. ace in the hole (ಅಮೆರಿಕನ್‍ ಪ್ರಯೋಗ) = ನುಡಿಗಟ್ಟು\((2)\).
  2. ace up one’s sleeve (ಬ್ರಿಟಿಷ್‍ ಪ್ರಯೋಗ) ಪರಿಣಾಮಕಾರಿಯಾದುದನ್ನು ಬೇಕಾದಾಗ ಬಳಸುವಂತೆ ಗುಪ್ತವಾಗಿಟ್ಟುಕೊಂಡಿರುವ; ಕೈಗಾವಲಾಗಿ ಇಟ್ಟುಕೊಂಡಿರುವ.
  3. play one’s ace ತನ್ನ ಜಾಣತನವನ್ನೆಲ್ಲ ತೋರಿಸು; ತನ್ನ ಉಪಾಯಗಳನ್ನೆಲ್ಲ ಪ್ರಯೋಗಿಸು; ತನ್ನ ಶಕ್ತಿಸಾಮರ್ಥ್ಯಗಳನ್ನೆಲ್ಲ ವಿನಿಯೋಗಿಸು.
  4. within an ace of ಇನ್ನೇನು ಆಯಿತು; ಹತ್ತಿರ ಹತ್ತಿರ: I was within an ace of being trampled to death ತುಳಿತಕ್ಕೆ ಸಿಕ್ಕಿ ಇನ್ನೇನು (ಹತ್ತಿರ ಹತ್ತಿರ) ಸಾಯುವುದರಲ್ಲಿದ್ದೆ.
See also 1ace
2ace ಏಸ್‍
ಗುಣವಾಚಕ

ಉತ್ಕೃಷ್ಟ; ಉನ್ನತ ಮಟ್ಟದ; ಅತ್ಯುತ್ತಮ; ಶ್ರೇಷ್ಠ: an ace player ಅತ್ಯುತ್ತಮ ಆಟಗಾರ.