Tory ಟೋ(ಟಾ)ರಿ
ನಾಮವಾಚಕ
(ಬಹುವಚನ Tories).
  1. (ಅಮೆರಿಕನ್‍ ಪ್ರಯೋಗ) = $^2$conservative(2).
  2. (ಚರಿತ್ರೆ) (ಇಂಗ್ಲೆಂಡಿನಲ್ಲಿ) ಟೋರಿ; ರೋಮನ್‍ ಕ್ಯಾಥೊಲಿಕ್‍ ಮತದ ಡ್ಯೂಕ್‍ ಆಹ್‍ ಯಾರ್ಕ್‍ ಯಾ ಎರಡನೆಯ ಜೇಮ್ಸ್‍ಗೆ ರಾಜ್ಯದ ಉತ್ತರಾಧಿಕಾರ ತಪ್ಪಿಸಿದ್ದು ಸರಿಯಲ್ಲವೆಂದು ಪ್ರತಿಭಟಿಸಿದ, 1689ರಿಂದ ಸ್ಟೂವರ್ಟ್‍ ಮನೆತನಕ್ಕೆ ಒಲಿದ, ಅರಮನೆ, ಗುರುಮನೆಗಳಲ್ಲಿ ವಿಶೇಷ ನಿಷ್ಠೆಯುಳ್ಳ, 1832ರ ರಿಹಾರ್ಮ್‍ ಬಿಲ್ಲನ್ನು ವಿರೋಧಿಸಿದ, ರಾಜಕೀಯ ಪಕ್ಷದವನು.
  3. (ಅಮೆರಿಕನ್‍ ಪ್ರಯೋಗ) (ಚರಿತ್ರೆ) ಅಮೆರಿಕನ್‍ ಕ್ರಾಂತಿಕಾಲದಲ್ಲಿನ ನಿಷ್ಠಾವಂತ ವಸಾಹತುವಾದಿ.