RIP
ಸಂಕ್ಷಿಪ್ತ

(ಅವನು, ಅವಳು, ಯಾ ಅವರು) ಶಾಂತಿಯಿಂದಿರಲಿ (Latin requiescat in pace).

See also 2rip  3rip  4rip
1rip ರಿಪ್‍
ನಾಮವಾಚಕ
  1. ಕಳಪೆ ಕುದುರೆ; ಕಚ್ಚಾತಟ್ಟು; ಕೆಲಸಕ್ಕೆ ಬಾರದ ಕುದುರೆ.
  2. ಪೋಕರಿ; ಪುಂಡ.
  3. ದುರ್ವ್ಯಸನಿ; ವಿಷಯಲಂಪಟ(ವ್ಯಕ್ತಿ).
See also 1rip  3rip  4rip
2rip ರಿಪ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ ripped; ವರ್ತಮಾನ ಕೃದಂತ\ ripping).
ಸಕರ್ಮಕ ಕ್ರಿಯಾಪದ
  1. ತಟಕ್ಕನೆ ಕಿತ್ತುಹಾಕು; ಜೋರಾಗಿ , ಒರಟಾಗಿ–ಹರಿ, ಸಿಗಿ, ಕಿತ್ತುಹಾಕು, ಹರಿದುಹಾಕು: rip the boards off ಹಲಗೆಗಳನ್ನು ಜೋರಾಗಿ ಕಿತ್ತುಹಾಕು.
  2. ಉದ್ದಕ್ಕೆ ಕತ್ತರಿಸು; ಉದ್ದನಾಗಿ ಸೀಳುಮಾಡು, ಗೀಳಿಹಾಕು, ಬಗಿದು ಹಾಕು: had his belly ripped up ಅವನ ಹೊಟ್ಟೆ ಬಗಿಯಲ್ಪಟ್ಟಿತು.
  3. (ಮರ, ಬಂಡೆ ಮೊದಲಾದವನ್ನು) ಸೀಳು.
  4. (ಮರದ ಎಳೆಯನ್ನನುಸರಿಸಿ) ಗರಗಸದಿಂದ ಕೊಯ್ಯು.
  5. (ಹೆಂಚು, ಹಲಗೆ, ದಬ್ಬೆ ಮೊದಲಾದವನ್ನು) ಚಾವಣಿಯಿಂದ ತೆಗೆದುಹಾಕು, ಕಳಚಿಹಾಕು, ಬಿಚ್ಚು.
  6. ಕತ್ತರಿಸಿ ಬಿರುಕುಮಾಡು; ಗೀಳಿ ಕಂಡಿಮಾಡು; ಸೀಳುಮಾಡು.
  7. (ಗಾಯ, ಜಗಳ, ದುಃಖ, ಹಿಂದಿನ ಸಂಗತಿ ಮೊದಲಾದವನ್ನು) ಮತ್ತೆ ಕೆದಕು, ಕೆರಳಿಸು.
ಅಕರ್ಮಕ ಕ್ರಿಯಾಪದ
  1. ಜೋರಾಗಿ ಕಿತ್ತುಹೋಗು; ತಟ್ಟಕ್ಕನೆ ಸೀಳಿಹೋಗು: cheap cloth rips easily ಅಗ್ಗವಾದ ಬಟ್ಟೆಸುಲಭವಾಗಿ ಕಿತ್ತುಹೋಗುತ್ತದೆ.
  2. (ಹಡಗು) ಮುನ್ನುಗ್ಗು; ವೇಗವಾಗಿ ಸಾಗು (ರೂಪಕವಾಗಿ\ ಸಹ): let her rip ವೇಗವಾಗಿ ಸಾಗಲಿ, ಮುನ್ನುಗ್ಗಲಿ.
ಪದಗುಚ್ಛ
  1. let rip
    1. ಸಂಯಮವಿಲ್ಲದೆ ವರ್ತಿಸು, ಮುನ್ನುಗ್ಗು, ಮುಂದುವರಿ.
    2. ಜೋರಾಗಿ ಮಾತನಾಡು.
    3. (ಒಬ್ಬ ವ್ಯಕ್ತಿ ಯಾ ಒಂದು ವಸ್ತುವಿನ) ವೇಗಕ್ಕೆ ಅಡ್ಡ ಬರದಿರು; ವೇಗ ತಡೆಯದಿರು; ಮಧ್ಯೆ ಪ್ರವೇಶಿಸದಿರು;
  2. rip into (ವ್ಯಕ್ತಿಯ ಮೇಲೆ) ವಾಗ್ದಾಳಿ ಮಾಡು.
  3. rip off (ಆಡುಮಾತು)
    1. ವಂಚಿಸು; ದಗಾಹಾಕು.
    2. ಕದಿ; ಲಪಟಾಯಿಸು.
See also 1rip  2rip  4rip
3rip ರಿಪ್‍
ನಾಮವಾಚಕ
  1. ತಟಕ್ಕನೆ ಕಿತ್ತುಹಾಕುವುದು, ಹರಿದುಹಾಕುವಿಕೆ.
  2. ಉದ್ದನೆಯ ಕತ್ತರಿಕೆ, ಸೀಳಿಕೆ.
  3. ಉದ್ದನೆಯ ಕೊಯ್ತ, ಸೀಳು, ಹರುಕು, ಛಿದ್ರ.
See also 1rip  2rip  3rip
4rip ರಿಪ್‍
ನಾಮವಾಚಕ
  1. (ಕಡಲಿನ ಯಾ ನದಿಯ) ಕಲಕಿದ ನೀರ ಹರವು; ಪ್ರಕ್ಷುಬ್ಧ ಜಲ; ಚೆದರಿದ ನೀರಿನ ಹರವು.
  2. ಹೊರಳು ನೀರು; ತುಂಬಿ ಹೊರಬೀಳುವ ನೀರು.