See also 1rip  3rip  4rip
2rip ರಿಪ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ ripped; ವರ್ತಮಾನ ಕೃದಂತ\ ripping).
ಸಕರ್ಮಕ ಕ್ರಿಯಾಪದ
  1. ತಟಕ್ಕನೆ ಕಿತ್ತುಹಾಕು; ಜೋರಾಗಿ , ಒರಟಾಗಿ–ಹರಿ, ಸಿಗಿ, ಕಿತ್ತುಹಾಕು, ಹರಿದುಹಾಕು: rip the boards off ಹಲಗೆಗಳನ್ನು ಜೋರಾಗಿ ಕಿತ್ತುಹಾಕು.
  2. ಉದ್ದಕ್ಕೆ ಕತ್ತರಿಸು; ಉದ್ದನಾಗಿ ಸೀಳುಮಾಡು, ಗೀಳಿಹಾಕು, ಬಗಿದು ಹಾಕು: had his belly ripped up ಅವನ ಹೊಟ್ಟೆ ಬಗಿಯಲ್ಪಟ್ಟಿತು.
  3. (ಮರ, ಬಂಡೆ ಮೊದಲಾದವನ್ನು) ಸೀಳು.
  4. (ಮರದ ಎಳೆಯನ್ನನುಸರಿಸಿ) ಗರಗಸದಿಂದ ಕೊಯ್ಯು.
  5. (ಹೆಂಚು, ಹಲಗೆ, ದಬ್ಬೆ ಮೊದಲಾದವನ್ನು) ಚಾವಣಿಯಿಂದ ತೆಗೆದುಹಾಕು, ಕಳಚಿಹಾಕು, ಬಿಚ್ಚು.
  6. ಕತ್ತರಿಸಿ ಬಿರುಕುಮಾಡು; ಗೀಳಿ ಕಂಡಿಮಾಡು; ಸೀಳುಮಾಡು.
  7. (ಗಾಯ, ಜಗಳ, ದುಃಖ, ಹಿಂದಿನ ಸಂಗತಿ ಮೊದಲಾದವನ್ನು) ಮತ್ತೆ ಕೆದಕು, ಕೆರಳಿಸು.
ಅಕರ್ಮಕ ಕ್ರಿಯಾಪದ
  1. ಜೋರಾಗಿ ಕಿತ್ತುಹೋಗು; ತಟ್ಟಕ್ಕನೆ ಸೀಳಿಹೋಗು: cheap cloth rips easily ಅಗ್ಗವಾದ ಬಟ್ಟೆಸುಲಭವಾಗಿ ಕಿತ್ತುಹೋಗುತ್ತದೆ.
  2. (ಹಡಗು) ಮುನ್ನುಗ್ಗು; ವೇಗವಾಗಿ ಸಾಗು (ರೂಪಕವಾಗಿ\ ಸಹ): let her rip ವೇಗವಾಗಿ ಸಾಗಲಿ, ಮುನ್ನುಗ್ಗಲಿ.
ಪದಗುಚ್ಛ
  1. let rip
    1. ಸಂಯಮವಿಲ್ಲದೆ ವರ್ತಿಸು, ಮುನ್ನುಗ್ಗು, ಮುಂದುವರಿ.
    2. ಜೋರಾಗಿ ಮಾತನಾಡು.
    3. (ಒಬ್ಬ ವ್ಯಕ್ತಿ ಯಾ ಒಂದು ವಸ್ತುವಿನ) ವೇಗಕ್ಕೆ ಅಡ್ಡ ಬರದಿರು; ವೇಗ ತಡೆಯದಿರು; ಮಧ್ಯೆ ಪ್ರವೇಶಿಸದಿರು;
  2. rip into (ವ್ಯಕ್ತಿಯ ಮೇಲೆ) ವಾಗ್ದಾಳಿ ಮಾಡು.
  3. rip off (ಆಡುಮಾತು)
    1. ವಂಚಿಸು; ದಗಾಹಾಕು.
    2. ಕದಿ; ಲಪಟಾಯಿಸು.