RAM
ಸಂಕ್ಷಿಪ್ತ
  1. (United Kingdomನಲ್ಲಿ) Royal Academy of Music.
  2. (ಕಂಪ್ಯೂಟರು) random-access memory.
See also 2ram  3ram
1ram ರ್ಯಾಮ್‍
ನಾಮವಾಚಕ
  1. ಟಗರು; ಹಿಡಮಾಡದ ಗಂಡುಕುರಿ.
  2. (ಖಗೋಳ ವಿಜ್ಞಾನ) (the Ram) ಮೇಷರಾಶಿ.
  3. = battering-ram.
    1. (ಶತ್ರುನೌಕೆಗಳ ಪಕ್ಕಗಳನ್ನು ತಿವಿದು ಒಡೆಯಲು ಮುಂಗೋಟಿನಲ್ಲಿ ಮೊನೆಯಾದ ಚಾಚು ಇರುವ) ತಿವಿಮೂತಿಯ ಸಮರನೌಕೆ.
    2. ಸಮರನೌಕೆಯ ತಿವಿಮೂತಿ.
  4. ಬೀಳು ಚಮ್ಮಟಿಗೆ; ದಸಿನೆಡುವ ಯಂತ್ರದ ರಾಟಣೆಗಳಿಂದ ವೇಗವಾಗಿ ದಸಿಯ ಮೇಲೆ ಇಳಿದು ಬೀಳುವ ಭಾರೀ ಚಮ್ಮಟಿಗೆ.
  5. ದಮ್ಮಸು; ದಮ್ಮಸು ಮಾಡುವ ಸಲಕರಣೆ.
  6. ನೀರೆತ್ತುಗ; ಜಲೋದ್ಧಾರಕ; ನೀರೆತ್ತುವ ಜಲಯಂತ್ರ.
  7. ನೀರೊತ್ತುಯಂತ್ರದ ಕೊಂತ.
  8. ಒತ್ತು ಪಂಪಿನ, ಮುಳುಗಿ ಏಳುವ ಆಡುಬೆಣೆ.
See also 1ram  3ram
2ram ರ್ಯಾಮ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ rammed; ವರ್ತಮಾನ ಕೃದಂತ ramming).
  1. (ಯಾವುದೇ ಭಾರವಾದ ಸಲಕರಣೆಯಿಂದ ನೆಲ ಮೊದಲಾದವನ್ನು) ಗಟ್ಟಿಸು; ಗಟ್ಟಿಮಾಡು; ಗಟ್ಟಣಿ ಮಾಡು; ದಮ್ಮಸುಮಾಡು.
  2. (ಕಂಬ, ಗಿಡ ಮೊದಲಾದವನ್ನು, ಬುಡದ ಸುತ್ತಲೂ) ನೆಲವನ್ನುಕುಟ್ಟಿ, ಜಡಿದು ಭದ್ರವಾಗಿ ನಿಲ್ಲಿಸು.
  3. (ದಸಿ ಮೊದಲಾದವನ್ನು, ನೆಲ ಮೊದಲಾದವಕ್ಕೆ) ಬಲವಾಗಿ ಬಡಿ; ಬಲವಾಗಿ ಬಡಿದು ನೆಡು.
  4. (ಒಬ್ಬನ ಮೇಲೆ ದೂರನ್ನು, ಆಪಾದನೆಯನ್ನು) ಬಲವಾಗಿ ಹೊರಿಸು; ದೃಢವಾಗಿ ಹೊರಿಸು.
  5. (ಬಂದೂಕಿಗೆ ಯಾ ಫಿರಂಗಿಗೆ, ಮದ್ದನ್ನು) ಗಜದಿಂದ ದಮ್ಮಸುಗಡ್ಡಿಯಿಂದ – ಗಿಡಿ, ಜಡಿ.
  6. ಒತ್ತಿ, ಅದುಮಿ, ತುರುಕು ಯಾ ಬಿಗಿಗೊಳಿಸು: rammed his clothes into his bag ತನ್ನ ಬಟ್ಟೆಗಳನ್ನು ಚೀಲದೊಳಕ್ಕೆ ಅದುಮಿ ತುರುಕಿದ. rammed his hat down on his head ಹ್ಯಾಟನ್ನು ತನ್ನ ತಲೆಯ ಮೇಲೆ ಅದುಮಿ ಬಿಗಿಮಾಡಿದ.
  7. (ಹೂರಣ ಮೊದಲಾದವನ್ನು) ತುರುಕು.
  8. (ಹಡಗು, ವಾಹನ ಮೊದಲಾದವುಗಳ ವಿಷಯದಲ್ಲಿ) ಬಿರುಸಾಗಿ ಬಡಿ, ತಾಕು.
  9. (ಯಾವುದೇ ಭಾರವಾದ ವಸ್ತುವನ್ನು, ಒಂದಕ್ಕೆ) ರಭಸದಿಂದ ತಾಕಿಸು; ಡಿಕ್ಕಿ ಹೊಡೆಸು: rammed his head against the wall ತನ್ನ ತಲೆಯನ್ನು ಗೋಡೆಗೆ ರಭಸದಿಂದ ಡಿಕ್ಕಿ ಹೊಡೆಸಿದ, ತಾಕಿಸಿಕೊಂಡ.
ಪದಗುಚ್ಛ
  1. ram home (ವಾದ, ಪಾಠ ಮೊದಲಾದವನ್ನು) ಪ್ರಭಾವಶಾಲಿಯಾಗಿ, ಪರಿಣಾಮಕಾರಿಯಾಗಿ ಒತ್ತಿಹೇಳು. rammed the argument home into him ಬಲವಾಗಿ ಒತ್ತಿಹೇಳಿ ಆ ವಾದವನ್ನು ಅವನ ಮನಸ್ಸಿನಲ್ಲಿ ನಾಟಿಸಿದೆ.
  2. ram (something) into one (ವಿಷಯವನ್ನು) ಒಬ್ಬನ ಮನಸ್ಸಿನಲ್ಲಿ ನಾಟಿಸು, ನಾಟು; ಮನಸ್ಸಿಗೆ ತುರುಕು: rammed the list into me by repetition ಮತ್ತೆಮತ್ತೆ ಹೇಳಿ ಆ ಪಟ್ಟಿಯನ್ನು ನನ್ನ ಮನಸ್ಸಿಗೆ ತುರುಕಿದ.
See also 1ram  2ram
3ram ರ್ಯಾಮ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ನೌಕಾಯಾನ) ದೋಣಿಯ ಇಡೀ ಉದ್ದ, ಪೂರ್ತಿ ಉದ್ದ.