See also 2ram  3ram
1ram ರ್ಯಾಮ್‍
ನಾಮವಾಚಕ
  1. ಟಗರು; ಹಿಡಮಾಡದ ಗಂಡುಕುರಿ.
  2. (ಖಗೋಳ ವಿಜ್ಞಾನ) (the Ram) ಮೇಷರಾಶಿ.
  3. = battering-ram.
    1. (ಶತ್ರುನೌಕೆಗಳ ಪಕ್ಕಗಳನ್ನು ತಿವಿದು ಒಡೆಯಲು ಮುಂಗೋಟಿನಲ್ಲಿ ಮೊನೆಯಾದ ಚಾಚು ಇರುವ) ತಿವಿಮೂತಿಯ ಸಮರನೌಕೆ.
    2. ಸಮರನೌಕೆಯ ತಿವಿಮೂತಿ.
  4. ಬೀಳು ಚಮ್ಮಟಿಗೆ; ದಸಿನೆಡುವ ಯಂತ್ರದ ರಾಟಣೆಗಳಿಂದ ವೇಗವಾಗಿ ದಸಿಯ ಮೇಲೆ ಇಳಿದು ಬೀಳುವ ಭಾರೀ ಚಮ್ಮಟಿಗೆ.
  5. ದಮ್ಮಸು; ದಮ್ಮಸು ಮಾಡುವ ಸಲಕರಣೆ.
  6. ನೀರೆತ್ತುಗ; ಜಲೋದ್ಧಾರಕ; ನೀರೆತ್ತುವ ಜಲಯಂತ್ರ.
  7. ನೀರೊತ್ತುಯಂತ್ರದ ಕೊಂತ.
  8. ಒತ್ತು ಪಂಪಿನ, ಮುಳುಗಿ ಏಳುವ ಆಡುಬೆಣೆ.