See also 2Olympian
1Olympain ಅಲಿಂಪಿಅನ್‍
ಗುಣವಾಚಕ
  1. ಒಲಿಂಪಸ್‍ ಪರ್ವತದ; ಸಾಂಪ್ರದಾಯಿಕವಾಗಿ ಗ್ರೀಕ್‍ ದೇವತೆಗಳ ಆವಾಸವಾಗಿರುವ, ಈಶಾನ್ಯ ಗ್ರೀಸಿನಲ್ಲಿರುವ ಒಲಿಂಪಸ್‍ ಪರ್ವತದ ಯಾ ಅದಕ್ಕೆ ಸಂಬಂಧಿಸಿದ.
  2. ಸ್ವರ್ಗದ; ದೇವ ಲೋಕದ.
  3. ದೇವ–ಸದೃಶ, ಸಮಾನ; ದೇವತೆಯಂಥ; ದಿವ್ಯ: Olympian beauty ದಿವ್ಯ ಸೌಂದರ್ಯ.
  4. (ನಡವಳಿಕೆ ಮೊದಲಾದವುಗಳ ವಿಷಯದಲ್ಲಿ) ಘನಗಂಭೀರ; ಮಹೋದಾತ್ತ; ಶ್ರೇಷ್ಠತೆಯ; ದೊಡ್ಡಸ್ತಿಕೆಯ; ಮೇಲಂತಸ್ತಿನ; ಅನುಗ್ರಹ ತೋರುವಂಥ: Olympian attitude ಅನುಗ್ರಹ ತೋರುವ ದೃಷ್ಟಿ.
  5. ದಕ್ಷಿಣ ಗ್ರೀಸ್‍ನಲ್ಲಿರುವ ಪ್ರಾಚೀನ ಒಲಿಂಪಿಯ ಪ್ರದೇಶದ ಯಾ ಅದಕ್ಕೆ ಸಂಬಂಧಿಸಿದ.
  6. = 1Olympic.
See also 1Olympian
2Olympain ಅಲಿಂಪಿಅನ್‍
ನಾಮವಾಚಕ
  1. ಒಲಿಂಪಿಯನ್‍; ಒಲಂಪಿಯವಾಸಿ; ಪುರಾತನ ಗ್ರೀಸ್‍ನ ಒಲಿಂಪಸ್‍ ಪರ್ವತದ ಮೇಲೆ ವಾಸಿಸುತ್ತಿರುವರೆಂದು ನಂಬಲಾಗಿರುವ ಹನ್ನೆರಡು ಮಹಾದೇವತೆಗಳಲ್ಲಿ ಒಬ್ಬ.
  2. ದೇವತಾಪುರುಷ; ಅತಿಮಾನುಷ ಶಾಂತಿ ಮತ್ತು ನಿರ್ಲಿಪ್ತತೆ ಉಳ್ಳ ಯಾ ಮಹಾ ಸಾಧನೆಗಳನ್ನು ಮಾಡಿರುವ ವ್ಯಕ್ತಿ.