1Olympain
ಅಲಿಂಪಿಅನ್
ಗುಣವಾಚಕ
- ಒಲಿಂಪಸ್ ಪರ್ವತದ; ಸಾಂಪ್ರದಾಯಿಕವಾಗಿ ಗ್ರೀಕ್ ದೇವತೆಗಳ ಆವಾಸವಾಗಿರುವ, ಈಶಾನ್ಯ ಗ್ರೀಸಿನಲ್ಲಿರುವ ಒಲಿಂಪಸ್ ಪರ್ವತದ ಯಾ ಅದಕ್ಕೆ ಸಂಬಂಧಿಸಿದ.
- ಸ್ವರ್ಗದ; ದೇವ ಲೋಕದ.
- ದೇವ–ಸದೃಶ, ಸಮಾನ; ದೇವತೆಯಂಥ; ದಿವ್ಯ: Olympian beauty ದಿವ್ಯ ಸೌಂದರ್ಯ.
- (ನಡವಳಿಕೆ ಮೊದಲಾದವುಗಳ ವಿಷಯದಲ್ಲಿ) ಘನಗಂಭೀರ; ಮಹೋದಾತ್ತ; ಶ್ರೇಷ್ಠತೆಯ; ದೊಡ್ಡಸ್ತಿಕೆಯ; ಮೇಲಂತಸ್ತಿನ; ಅನುಗ್ರಹ ತೋರುವಂಥ: Olympian attitude ಅನುಗ್ರಹ ತೋರುವ ದೃಷ್ಟಿ.
- ದಕ್ಷಿಣ ಗ್ರೀಸ್ನಲ್ಲಿರುವ ಪ್ರಾಚೀನ ಒಲಿಂಪಿಯ ಪ್ರದೇಶದ ಯಾ ಅದಕ್ಕೆ ಸಂಬಂಧಿಸಿದ.
- = 1Olympic.