ICE
ಸಂಕ್ಷಿಪ್ತ
  1. (ಬ್ರಿಟಿಷ್‍ ಪ್ರಯೋಗ) Institution of Civil Engineers.
  2. internal-combustion engine.
See also 2ice
1ice ಐಸ್‍
ನಾಮವಾಚಕ
  1. ಐಸು; ನೀರ್ಗಲ್ಲು; ನೀರ್ಗಡ್ಡೆ; ಮಂಜುಗಡ್ಡೆ; ಘನೀಭವಿಸಿದ ನೀರು.
  2. ನೀರಿನ ಮೇಲೆ ತೇಲುವ ಮಂಜುಗಡ್ಡೆಯ ಹಾಳೆ.
  3. ಮಂಜುಗಡ್ಡೆ ಮಿಠಾಯಿ ಯಾ ಅದರ ತುಂಡು, ಮುಖ್ಯವಾಗಿ(ಬ್ರಿಟಿಷ್‍ ಪ್ರಯೋಗ) ಐಸ್‍ಕ್ರೀಮ್‍ ಯಾ ಐಸ್‍ ಪೇಡ.
  4. (ಅಶಿಷ್ಟ) ವಜ್ರಗಳು.
ಪದಗುಚ್ಛ

dry ice ಘನ ಇಂಗಾಲದ ಡೈಆಕ್ಸೈಡು.

ನುಡಿಗಟ್ಟು
  1. break the ice
    1. ಆರಂಭ ಮಾಡು; ಶುರು ಮಾಡು.
    2. ಬಿಗುಮಾನವನ್ನು ಬಿಡು; ಶ್ರೀಮದ್ಗಾಂಭೀರ್ಯವನ್ನು ತೊರೆ.
  2. $^2$cuts no ice.
  3. on ice
    1. (ಆಟ, ವಿನೋದ, ಮೊದಲಾದವುಗಳ ವಿಷಯದಲ್ಲಿ) (ಹಿಮತಲದ ಮೇಲೆ) ಜಾರುಗರು, ಸ್ಕೇಟರುಗಳು-ಮಾಡಿದ.
    2. (ಆಡುಮಾತು) ತಾತ್ಕಾಲಿಕವಾಗಿ-ಸ್ಥಗಿತಗೊಳಿಸಿರುವ, ನಿಲುಗಡೆಯಲ್ಲಿ(ಟ್ಟಿ)ರುವ, ತಡೆಹಿಡಿದಿರುವ.
    3. (ಆಡುಮಾತು) ಖಡಾಖಂಡಿತವಾದ; ಖಚಿತವಾದ.
  4. on thin ice ಅತಿಸೂಕ್ಷ್ಮ ಪರಿಸ್ಥಿತಿಯಲ್ಲಿ; ಅಭದ್ರ ಸ್ಥಿತಿಯಲ್ಲಿ; ಅಪಾಯದಲ್ಲಿ: you are on thin ice with that argument ಆ ವಾದವನ್ನು ಹಿಡಿದರೆ ನಿನ್ನ ಸ್ಥಿತಿ ಅಭದ್ರ.
See also 1ice
2ice ಐಸ್‍
ಸಕರ್ಮಕ ಕ್ರಿಯಾಪದ
  1. (ನೀರನ್ನು ಯಾ ನೀರನ್ನು ಗಡ್ಡೆಕಟ್ಟಿಸುವಂತೆ ಯಾವುದನ್ನೇ) ಗಡ್ಡೆಕಟ್ಟಿಸು; ಹೆಪ್ಪುಗಟ್ಟಿಸು; ಘನೀಕರಿಸು.
  2. ನೀರ್ಗಲ್ಲಿನಿಂದ (ಯಾ ನೀರ್ಗಲ್ಲಿನಿಂದ ಹೇಗೋ ಹಾಗೆ) – ಹರವು, ಮುಚ್ಚು, ಆವರಿಸು.
  3. (ಪಾನೀಯಗಳನ್ನು ಮಂಜುಗಡ್ಡೆಯಲ್ಲಿಟ್ಟು, ಮಂಜುಗಡ್ಡೆ ಹಾಕಿ) ತಣ್ಣಗೆ ಮಾಡು; ತಂಪಿಸು; ತಂಪಾಗಿಸು; ಶೀತಗೊಳಿಸು.
  4. (ಕೇಕ್‍ ಮೊದಲಾದ ಭಕ್ಷ್ಯಗಳ ಮೇಲೆ)
    1. ಸಕ್ಕರೆಯ ಪಾಕ ಹರವು, ಸವರು, ಲೇಪಿಸು.
    2. (ಅವುಗಳನ್ನು) ಸಕ್ಕರೆ ಪಾಕದಿಂದ ಅಲಂಕರಿಸು.
ಅಕರ್ಮಕ ಕ್ರಿಯಾಪದ
  1. (ನೀರಿನ ವಿಷಯದಲ್ಲಿ) ಗಡ್ಡೆಯಾಗು; ಗಡ್ಡೆಗಟ್ಟು; ಹೆರೆ; ಘನೀಭವಿಸು: the sherbet is icing in the refrigerator ಶರಬತ್ತು ಶೀತಕದಲ್ಲಿ ಹೆಪ್ಪುಗಟ್ಟಿಕೊಳ್ಳುತ್ತಿದೆ.
  2. ಹಿಮದಿಂದ-ಆವೃತವಾಗು, ಮುಚ್ಚಿಹೋಗು: the wind-shield has iced up ಗಾಳಿತಡೆ ಹಿಮದಿಂದ ಮುಚ್ಚಿಹೋಗಿದೆ.