See also 1cut  3cut
2cut ಕಟ್‍
ಕ್ರಿಯಾಪದ
(ವರ್ತಮಾನ ಕೃದಂತ cutting, ಭೂತರೂಪ ಮತ್ತು ಭೂತಕೃದಂತ cut).
  1. (ರೂಪಕವಾಗಿ ಸಹ) (ಚೂರಿ ಮೊದಲಾದವುಗಳಿಂದ) ಗಾಯಪಡಿಸು; ಕತ್ತರಿಸು: the knife cut his finger ಚೂರಿ ಅವನ ಬೆರಳನ್ನು ಗಾಯಪಡಿಸಿತು. he cut his finger with a knife ಅವನು ಚಾಕುವಿನಿಂದ ಬೆರಳನ್ನು ಕತ್ತರಿಸಿಕೊಂಡ.
  2. (ಚೂಪಾದ ವಸ್ತುವಿನಿಂದ) ಇರಿ; ಚುಚ್ಚು; ಒಳಹೊಗು.
  3. (ಚಾವಟಿ ಮೊದಲಾದವುಗಳಿಂದ ಕತ್ತರಿಸಿ ಹೋಗುವಂತೆ) ಬಲವಾಗಿ ಹೊಡೆ; ಪೆಟ್ಟುಕೊಡು.
  4. ಕತ್ತರಿಸುವ ಮೂಲಕ ಸಡಿಲಿಸು, ತೆರೆ: cut loose ಕತ್ತರಿಸಿ ಅಳ್ಳಕ ಮಾಡು.
  5. (ರೂಪಕವಾಗಿ) ಇರಿ; ಒಳಹೊಗು; ಮನಸ್ಸನ್ನು–ಚುಚ್ಚು, ಕುಟುಕು, ಗಾಯಗೊಳಿಸು; (ಮರ್ಮ) ಭೇದಿಸು: cutting retort ಮನಸ್ಸನ್ನು ಚುಚ್ಚುವ ಉತ್ತರ. it cut him to the heart ಅದು ಅವನ ಹೃದಯವನ್ನು ಇರಿಯಿತು.
  6. (ಚಳಿ, ಗಾಳಿ,ಮೊದಲಾದವು) ಮೈಕಡಿ; ಕೊರೆ: cutting wind ಕೊರೆಯುವ, ಕಡಿಯುವ ಗಾಳಿ.
  7. (ಚೂರಿ, ಕೊಡಲಿ ಮೊದಲಾದವುಗಳಿಂದ ತುಂಡುಗಳಾಗುವಂತೆ) ಛೇದಿಸು; ಒಡೆ; ಸೀಳು; ಬಿರುಕು ಬಿಡಿಸು; ಕತ್ತರಿಸು: cut the wood ಸೌದೆಸೀಳು; ಕಟ್ಟಿಗೆ ಒಡೆ.
  8. ಅಡ್ಡಹಾಯಿ; ಛೇದಿಸು; ಕತ್ತರಿಸು: the two lines cut each other ಎರಡು ಗೆರೆಗಳು ಒಂದನ್ನೊಂದು ಅಡ್ಡಹಾಯುತ್ತವೆ.
  9. (ಕೂಲಿ, ಬೆಲೆ, ಕಾಲ ಮೊದಲಾದವನ್ನು) ಕಡಿಮೆ ಮಾಡು; ಕೋತಮಾಡು; ಇಳಿಸು; ತಗ್ಗಿಸು.
  10. (ಕೆಲಸ, ಮಾತು, ಮೊದಲಾದವನ್ನು) ನಿಲ್ಲಿಸು.
  11. (ಮಾಂಸ, ಬ್ರೆಡ್ಡು, ತರಕಾರಿ ಮೊದಲಾದವನ್ನು) ಹೆಚ್ಚು; ಕೊಯ್ಯಿ; ತುಂಡು ಮಾಡು; ಹೋಳಾಗಿ ಕತ್ತರಿಸು.
  12. (ಉಡುಗೆ, ಗಾಜು, ವಜ್ರ, ಒಡವೆ, ಪ್ರತಿಮೆ ಮೊದಲಾದವುಗಳಿಗೆ) ರೂಪು ಕೊಡು; ಆಕಾರ ಕೊಡು; ನಿರ್ದಿಷ್ಟ ರೂಪದಲ್ಲಿ ಕತ್ತರಿಸು; ಒಂದು ಆಕಾರ ಕೊಡು.
  13. (ಹಳ್ಳ, ಕಾಲುವೆ ಮೊದಲಾದವನ್ನು) ಕೊರೆ; ತೋಡು; ಅಗೆ: cut a trench ಕಂದಕ ತೋಡು.
  14. (ಇಸ್ಪೀಟಾಟದಲ್ಲಿ) ಕಟ್ಟು ವಿಭಾಗಿಸು; ಕಲಸಿ ಒಟ್ಟೊಟ್ಟಿಗಿರುವ ಮೊತ್ತದಿಂದ ಒಂದು ಭಾಗವನ್ನು ಎತ್ತಿಡು.
  15. (ಇಸ್ಪೀಟಾಟದಲ್ಲಿ) ಕಟ್ಟಿನಿಂದ ಎಲೆಯನ್ನು ಎಳೆದು ತೆಗೆ.
  16. (ಕ್ರಿಕೆಟ್‍ ಮೊದಲಾದ ಆಟಗಳಲ್ಲಿ) ಕೊಚ್ಚು; ಚೆಂಡು ಗಿರ್ರನೆ ತಿರುಗುವಂತೆ ಹೊಡೆ.
  17. (ಪರಿಚಯಸ್ಥನನ್ನು) ಉದ್ದೇಶಪೂರ್ವಕವಾಗಿ ಗುರುತಿಸದಿರು; ಗುರುತು ಸಿಕ್ಕಿಲ್ಲವೆಂಬಂತೆ ವರ್ತಿಸು.
  18. (ರೂಪಕವಾಗಿ)(ಸಂಪರ್ಕ, ಸಂಬಂಧ, ಸಂಸರ್ಗ ಮೊದಲಾದವನ್ನು) ಕಡಿದುಹಾಕು; ವಿಚ್ಛೇದಿಸು; ತಪ್ಪಿಸು; ಕಳೆ; ಬಿಡು; ಬಿಡಿಸು; ತೊರೆ; ದೂರ ಮಾಡು; ಬೇರ್ಪಡಿಸು: his friends cut him as he became more and more popular ಅವನು ಜನಪ್ರಿಯನಾದಂತೆಲ್ಲಾ ಸ್ನೇಹಿತರು ಅವನನ್ನು ದೂರ ಮಾಡಿದರು.
  19. (ಚಲನಚಿತ್ರ) ಹಿಂದೃಶ್ಯ ತೋರಿಸು; ಆಗಲೇ ತೋರಿಸಿದ ದೃಶ್ಯವನ್ನು ಮತ್ತೊಮ್ಮೆ ತೋರಿಸು.
  20. (ತರಗತಿ, ಭಾಷಣ ಮೊದಲಾದವಕ್ಕೆ) ತಪ್ಪಿಸಿಕೊ; ಗೈರುಹಾಜರಾಗು; ಚಕ್ಕರ್‍ ಕೊಡು: cut a class ತರಗತಿಗೆ ತಪ್ಪಿಸಿಕೊ.
  21. (ಮರ, ದಾರು, ಮೊದಲಾದವನ್ನು) ಕತ್ತರಿಸು; ಕೆಡವು; ಕಡಿ; ಕತ್ತರಿಸಿ ತುಂಡುಮಾಡು; ಕಡಿದುಹಾಕು; ಉರುಳಿಸು.
  22. (ಗೋಧಿ, ಪೈರು, ಹುಲ್ಲು ಮೊದಲಾದವನ್ನು) ಕೊಯ್ಯು; ಕಟಾವು ಮಾಡು; ಕೊಯ್ದು ಸಂಗ್ರಹಮಾಡು; ಕತ್ತರಿಸು.
  23. (ಹೂಗಳನ್ನು) ಕೀಳು; ಬಿಡಿಸು.
  24. (ಜಮೀನಿನ ವಿಷಯದಲ್ಲಿ) ಬೆಳೆ ಕೊಡು; ಕುಯಿಲು ನೀಡು: that field cuts ten tons ಆ ಹೊಲ ಹತ್ತು ಟನ್‍ ಬೆಳೆ ಕೊಡುತ್ತದೆ.
  25. (ಕೂದಲು, ಉಗುರು, ಪೊದೆ ಮೊದಲಾದವನ್ನು) ಕತ್ತರಿಸು; ತುಂಡರಿಸು; ಕತ್ತರಿಸಿ ಮೊಟಕಿಸು.
  26. (ಪುಸ್ತಕ, ಭಾಷಣ ಮೊದಲಾದವನ್ನು) ಸಂಕ್ಷೇಪಿಸು; ಸಂಗ್ರಹಿಸು; ಸಣ್ಣದುಮಾಡು; ಕೆಲವು ಭಾಗಗಳನ್ನು ಬಿಟ್ಟು ಸಂಪಾದಿಸು.
  27. (ಹಾಳೆಗಳನ್ನು ತೆಗೆಯಲು ಸುಲಭವಾಗುವಂತೆ) ಪುಸ್ತಕದ ಅಂಚುಗಳನ್ನು ಕತ್ತರಿಸಿ ನೀಟುಮಾಡು.
  28. (ಪುಸ್ತಕದ ಅಚ್ಚಾದ ಹಾಳೆಗಳು, ನಕ್ಷೆಗಳು, ಚಿತ್ರಗಳು ಮೊದಲಾದವನ್ನು) ರಟ್ಟುಹಾಕಲು ಸರಿಹೋಗುವಂತೆ ಕತ್ತರಿಸು.
  29. (ರೇಡಿಯೋ, ಟೆಲಿವಿಷನ್‍ ಮೊದಲಾದವುಗಳಲ್ಲಿ)
    1. (ಒಂದು ದೃಶ್ಯ ಮೊದಲಾದವುಗಳ) ಪ್ರಸಾರ ನಿಲ್ಲಿಸಿಬಿಡು.
    2. (ಕ್ಲುಪ್ತಕಾಲಕ್ಕೆ ಸರಿಯಾಗಿ ಮುಗಿಯುವಂತೆ) ಕಾರ್ಯಕ್ರಮದ ಭಾಗ ಯಾ ಭಾಗಗಳನ್ನು ಬಿಟ್ಟುಬಿಡು, ಕತ್ತರಿಸಿಬಿಡು.
  30. (ಗಾಜಿನ ತಯಾರಿಕೆಯಲ್ಲಿ) ಅರೆದು ಉಜ್ಜಿ ಚಿತ್ತಾರ ಬರಿಸು.
  31. ಹಲ್ಲು–ಬರು,ಹುಟ್ಟು; ಹಲ್ಲು ಒಸಡಿನಿಂದ ಹೊರಕ್ಕೆ ಬರುವಂತಾಗು: he is cutting teeth ಅವನಿಗೆ ಹಲ್ಲುಬರುತ್ತಿದೆ.
  32. (ಅಮೆರಿಕನ್‍ ಪ್ರಯೋಗ)(ಮದ್ಯ, ಶ್ಲೇಷ್ಮ ಮೊದಲಾದವನ್ನು) ತೆಳುವಾಗಿಸು; ನೀರುಮಾಡು; ತೆಳುಗೊಳಿಸು; ಕರಗಿಸು; ದ್ರವೀಕರಿಸು: cut the phlegm ಶ್ಲೇಷ್ಮ ಕತ್ತರಿಸು. cut wine ವೈನನ್ನು ತೆಳು ಮಾಡು.
  33. (ದ್ರವದ ಹರಿವು, ಯಂತ್ರದ ಚಲನೆ ಮೊದಲಾದವನ್ನು) ಬಂದುಮಾಡು; ನಿಲ್ಲಿಸು: cut off the water ನೀರು ನಿಲ್ಲಿಸು, ಬಂದುಮಾಡು. the pilot cut the engine ಚಾಲಕ ಎಂಜಿನನ್ನು ನಿಲ್ಲಿಸಿದ.
  34. (ಆಡುಮಾತು) ಸಾಕುಮಾಡು; ನಿಲ್ಲಿಸು: cut the kidding ಕೀಟಲೆ ನಿಲ್ಲಿಸು.
  35. (ಚಲನಚಿತ್ರ ತಯಾರಿಕೆಯಲ್ಲಿ)
    1. ಚಿತ್ರೀಕರಣವನ್ನು ಯಾ ಕ್ಯಾಮರ ಚಾಲನೆಯನ್ನು ನಿಲ್ಲಿಸು.
    2. ಸಂಪಾದನಕಾರ್ಯ ಮಾಡು; ಪರಿಷ್ಕರಿಸು; ತಿದ್ದು; ಸಂಸ್ಕರಿಸು; ಒಪ್ಪಿಗೆಯಾಗದ ಭಾಗವನ್ನು ಕತ್ತರಿಸಿ ಮಿಕ್ಕಿದ್ದನ್ನು ಜೋಡಿಸು.
    3. ದೃಶ್ಯಾಂತರ ಮಾಡು; ಒಂದು ಚಿತ್ರ ಯಾ ದೃಶ್ಯದಿಂದ ಇನ್ನೊಂದಕ್ಕೆ ಶೀಘ್ರವಾಗಿ ಹೋಗು.
  36. ಗ್ರಾಮಹೋನ್‍ ತಟ್ಟೆಯ ಮೇಲೆ, ಟೇಪಿನ ಮೇಲೆ ಭಾಷಣ, ಸಂಗೀತ, (ಮೊದಲಾದವನ್ನು) ಧ್ವನಿ ಮುದ್ರಿಸು; ರೆಕಾರ್ಡ್‍ ಮಾಡಿಕೊ.
  37. (ಮೋಟಾರು ಯಾ ಎಂಜಿನ್ನಿನ ವಿಷಯದಲ್ಲಿ) ವೇಗ ಇಳಿಸು ಯಾ ನಿಲ್ಲಿಸಿಬಿಡು.
  38. (ಮೋಟಾರಿನ ವಿಷಯದಲ್ಲಿ)
    1. ಮುಂದಿರುವ ವಾಹನವನ್ನು ಹಿಂದೆ ಹಾಕಿ ಅಡ್ಡಗಟ್ಟು.
    2. ಎದುರು ಬದುರಾಗಿ ಹೋಗುತ್ತಿರುವ ಎರಡು ಬಂಡಿಗಳ ಮಧ್ಯೆ ನುಸುಳಿ ಹೋಗು.
    3. ಮುಂದಿರುವ ವಾಹನವನ್ನು ಹಿಂದೆ ಹಾಕಿ ಹೋಗುವಾಗ ಎದುರು ದಿಕ್ಕಿನಲ್ಲಿ ಬರುತ್ತಿರುವ ವಾಹನಕ್ಕೆ ತಡೆಯೊಡ್ಡು, ಅಡ್ಡಿಮಾಡು.
  39. (ಮೋಟಾರಿನ ವಿಷಯದಲ್ಲಿ) ತಡೆಸಂಕೇತ ನಿರ್ಲಕ್ಷಿಸಿ ನುಗ್ಗು: cut the red lights ಕೆಂಪುದೀಪ ಹೊತ್ತಿದ್ದರೂ ನಿಲ್ಲದೆ ನುಗ್ಗಿದ.
  40. ಹಿಡಮಾಡು; ಶೀಲ ಮಾಡು; ಬೀಜ ಒಡೆ.
  41. (ಮೂತ್ರಕೋಶದ ಕಲ್ಲನ್ನು ತೆಗೆಯಲು) ಮೂತ್ರಕೋಶ ತೂತುಮಾಡು.
  42. (ಪ್ರದರ್ಶನಕ್ಕಿಟ್ಟಿರುವ ಪ್ರಾಣಿಯಲ್ಲಿನ ದೋಷಗಳಿಗಾಗಿ) ಅಂಕಗಳನ್ನು ಕಳೆ.
  43. (ಅಮೆರಿಕನ್‍ ಪ್ರಯೋಗ)(ಪ್ರಾಣಿಯನ್ನು) ಹಿಂಡು ತಪ್ಪಿಸು; ಮಂದೆಯಿಂದ ಬೇರೆ ಮಾಡು.
  44. (ಸಂಸ್ಥೆ ಮೊದಲಾದವುಗಳಿಂದ ವ್ಯಕ್ತಿಯನ್ನು) ವಜಾಮಾಡು; ತೆಗೆದುಹಾಕು: the leader cut out two men from the team ನಾಯಕ ಇಬ್ಬರನ್ನು ತಂಡದಿಂದ ತೆಗೆದುಹಾಕಿದ.
  45. (ರೈಲುಬೋಗಿಗಳು, ವಾಹನ, ಮೊದಲಾದವನ್ನು) ಕಳಚು; ಬೇರ್ಪಡಿಸು; ಬೇರೆ ಮಾಡು; ಪ್ರತ್ಯೇಕಿಸು.
  46. (ಮೋಟಾರು ಗಾಡಿ ಮೊದಲಾದವುಗಳ) ದಿಕ್ಕು ಬದಲಿಸು; ತಿರುಗಿಸು: the driver cut the wheels sharply ಚಾಲಕ ಗಾಡಿಯ ದಿಕ್ಕನ್ನು ಒಮ್ಮೆಲೇ ಬದಲಾಯಿಸಿದ (ಗಾಡಿಯನ್ನು ತಿರುಗಿಸಿದ).
  47. (ದರೋಡೆಯಲ್ಲಿ ಬಂದುದನ್ನು) ಪಾಲುಮಾಡು; ಹಂಚು.
  48. (ನೀರು ಮೊದಲಾದವು) ನೆಲವನ್ನು ಕೊರೆ.
  49. ಖಂಡಿಸು; ಕಟು ವಿಮರ್ಶೆ ಮಾಡು; ತೀಕ್ಷ್ಣವಾಗಿ ಟೀಕೆಮಾಡು.
  50. (ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ) ಕ್ಲೇಶವುಂಟುಮಾಡು; ದುಃಖಕ್ಕೀಡು ಮಾಡು.
  51. ಉಪ್ಪುಹಾಕಿ ಒತ್ತರಿಸು; (ಲೀನವಾಗಿರುವ ಪ್ರೋಟೀನು, ಸಾಬೂನು ಮೊದಲಾದವನ್ನು ) ಹೆಚ್ಚು ಉಪ್ಪು ಕರಗಿಸುವ ಮೂಲಕ–ಗರಣೆ ಗಟ್ಟಿಸು, ಹೆಪ್ಪುಗಟ್ಟಿಸು.
  52. (ಗಾಲ್‍) ಕೊಚ್ಚು; ಚೆಂಡಿಗೆ ಕೊಚ್ಚು ಹೊಡೆತ ಹೊಡೆ.
  53. ಕುಡಿದು ಅಮಲೇರು.
  54. (ಅಮೆರಿಕನ್‍ ಪ್ರಯೋಗ) ಬೆರಕೆಮಾಡು; ಅಶುದ್ಧಗೊಳಿಸು; ಸಾರಗುಂದಿಸು.
  55. ಕತ್ತರಿಸಿ ಸಡಿಲಗೊಳಿಸು; ಕತ್ತರಿಸಿ ತೆರಪು ಮೊದಲಾದವನ್ನು ಮಾಡು.
  56. ಮಾಡು; ನಿರ್ವಹಿಸು; ನೆರವೇರಿಸು; ಕಾಣಿಸಿಕೊ; ತೋರು; ಹಾಕು; ನಡೆದುಕೊ; ನಡೆಸು; ವರ್ತಿಸು: cut a caper ವಿಚಿತ್ರವಾಗಿ ವರ್ತಿಸು. cut a sorry figure ನಿಕೃಷ್ಟವಾಗಿ ಕಾಣಿಸಿಕೊ ಯಾ ನಡೆದುಕೊ. cut a joke ಹಾಸ್ಯ ಮಾಡು.
ಅಕರ್ಮಕ ಕ್ರಿಯಾಪದ
  1. ಇರಿ; ಚುಚ್ಚು; ಒಳಹೊಗು.
  2. ಕತ್ತರಿಸು; ಗಾಯಗೊಳಿಸು: the scissors cut well ಕತ್ತರಿ ಚೆನ್ನಾಗಿ ಕತ್ತರಿಸುತ್ತದೆ.
  3. (ಚಾವಟಿ, ತೆಳುವಾದ ಕಡ್ಡಿ ಮೊದಲಾದವುಗಳಿಂದ ಕತ್ತರಿಸಿ ಹೋಗುವಂತೆ) ಏಟಾಗು; ಪೆಟ್ಟಾಗು; ಪೆಟ್ಟುಮಾಡು; ಹೊಡೆತಬೀಳು: whip cuts deep ಚಾವಟಿ ಬಲವಾಗಿ ಪೆಟ್ಟು ಮಾಡುತ್ತದೆ.
  4. ಸುಲಭವಾಗಿ ಕತ್ತರಿಸುವಂತಿರು: butter cuts easily ಬೆಣ್ಣೆಯನ್ನು ಸುಲಭವಾಗಿ ಕತ್ತರಿಸಬಹುದು.
  5. ಕತ್ತರಿಸುವ ಕೆಲಸದಲ್ಲಿ ತೊಡಗಿರು: the tailor is busy cutting ದರ್ಜಿ ಕತ್ತರಿಸುವುದರಲ್ಲಿ ನಿರತನಾಗಿದ್ದಾನೆ.
  6. (ಚಲನಚಿತ್ರ, ಟೆಲಿವಿಷನ್‍) ಇದ್ದಕ್ಕಿದ್ದಂತೆಯೇ ದೃಶ್ಯಾಂತರಿಸು; ಒಂದು ದೃಶ್ಯದಿಂದ ಇನ್ನೊಂದಕ್ಕೆ ಜಿಗಿ, ಹಾರಿಹೋಗು.
  7. (ಅಶಿಷ್ಟ) ಓಡಿಹೋಗು; ಪಲಾಯನಮಾಡು.
  8. ಬಿರುಸಿನಿಂದ ಹೋಗು; ಶೀಘ್ರವಾಗಿ, ಅವಸರವಸರವಾಗಿ, ಸರಸರನೆ–ಹೋಗು.
  9. (ಯಾವುದೇ ಒಂದರ ಮೂಲಕ ಯಾ ಅಡ್ಡವಾಗಿ) ತೂರು; ನುಸುಳು; ಹಾಯು; ಹಾದುಹೋಗು; ಮುಖ್ಯವಾಗಿ ದೂರ ಕಡಿಮೆಮಾಡಲು ನುಗ್ಗಿಕೊಂಡು ಹೋಗು.
  10. ಮನನೋಯಿಸು; ಎದೆಚುಚ್ಚು; ಮನಸ್ಸನ್ನು–ಇರಿ, ಚುಚ್ಚು, ಗಾಯಗೊಳಿಸು, ಭೇದಿಸು: his criticism cut deep ಅವನ ಟೀಕೆ ತುಂಬ ಮನನೋಯಿಸಿತು.
  11. ಥಟ್ಟನೆ ಸರಕ್ಕನೆ–ತಿರುಗು, ಹೊರಳು, ವಿಚಲಿಸು; ಇದ್ದಕ್ಕಿದ್ದಂತೆಯೇ ದಿಕ್ಕು ಬದಲಿಸು: we cut to the left to avoid hitting the child ಮಗುವಿಗೆ ತಗಲುವುದನ್ನು ತಪ್ಪಿಸುವುದಕ್ಕಾಗಿ ನಾವು ಥಟ್ಟನೆ ಎಡಕ್ಕೆ ತಿರುಗಿದೆವು.
  12. (ಎಂಜಿನ್ನು ಯಾ ಯಂತ್ರದ ವಿಷಯದಲ್ಲಿ) ನಿಲ್ಲು; ನಿಂತು ಹೋಗು; ಬಂದ್‍ ಆಗು; ಕೆಲಸ ನಿಲ್ಲಿಸು.
  13. (ಪ್ರಾಣಿ, ಮನುಷ್ಯ ಮೊದಲಾದವಕ್ಕೆ ಚಾವಟಿಯಿಂದಲೋ ಎಂಬಂತೆ) ಚಟ್ಟನೆ ಬಾರಿಸು; ಏಟುಕೊಡು; ಬಲವಾಗಿ ಹೊಡೆ; ಪೆಟ್ಟುಕೊಡು.
  14. ಅಡ್ಡಹಾಯು; ಕತ್ತರಿಸು: two lines cut ಎರಡು ಗೆರೆಗಳು ಕತ್ತರಿಸುತ್ತವೆ.
  15. ಹಲ್ಲು–ಬರು, ಹುಟ್ಟು: the teeth are cutting ಹಲ್ಲುಗಳು ಬರುತ್ತಿವೆ.
  16. (ಇಸ್ಪೀಟಾಟದಲ್ಲಿ ಎಲೆಯನ್ನು ಕಟ್ಟಿನಿಂದ) ಥಟ್ಟನೆ ತೆಗೆ.
  17. (ಕುದುರೆಯ ವಿಷಯದಲ್ಲಿ) ಒಂದು ಕಾಲನ್ನು ಮತ್ತೊಂದಕ್ಕೆ ಹೊಡೆ , ತಾಗಿಸು.
  18. (ಕ್ರಿಕೆಟ್‍) (ಚೆಂಡಿನ ವಿಷಯದಲ್ಲಿ) ಹೊರಳು; ನೆಲಕ್ಕೆ ತಾಗಿದ ಮೇಲೆ ಆದ ಥಟ್ಟನೆಯ ತಿರುಗು.
  19. (ಚಲನಚಿತ್ರ) ಪರಿಷ್ಕರಿಸು; ತಿದ್ದು; ಬೇಡದ ಭಾಗವನ್ನು ಕತ್ತರಿಸಿ ಮರುಜೋಡಿಸಿ ಸಂಪಾದಿಸು.
  20. (ಚಲನಚಿತ್ರ) ಚಿತ್ರೀಕರಣ ನಿಂತು ಹೋಗು; ಕ್ಯಾಮರಗಳು ಬಂದಾಗು.
  21. ಕೊರೆ; ಬಿಗಿ; ಹಿಡಿ: coat cuts at the armpits ಕೋಟು ಕಂಕುಳಲ್ಲಿ ಬಿಗಿಯುತ್ತದೆ.
ಪದಗುಚ್ಛ
  1. cut across
    1. ಅಡ್ಡಹಾಯಿ; ಒಳದಾರಿ ಹಿಡಿ; ಕಡಿಮೆ ದೂರದ ನೇರದಾರಿಯಲ್ಲಿ ಹೋಗು.
    2. (ರೂಪಕವಾಗಿ) (ಸಾಮಾನ್ಯ ಮಿತಿಯನ್ನು) ಮೀರು; ದಾಟು; ದಾಟಿಹೋಗು.
  2. cut adrift ಸಂಬಂಧ ಕಳೆದುಕೊ; ಸಂಪರ್ಕ ಕಡಿದುಕೊ; ಸ್ವತಂತ್ರನಾಗು; ದೂರವಾಗು.
  3. cut a figure (ನಿರ್ದಿಷ್ಟ ರೀತಿಯ) ಪ್ರಭಾವ, ಪರಿಣಾಮ–ಬೀರು.
  4. cut and run
    1. ಥಟ್ಟನೆ ಓಡಿಹೋಗು; ಕಂಬಿಕೀಳು; ಪಲಾಯನ ಮಾಡು.
    2. ನೌಕೆ ಅಪಾಯಕ್ಕೆ ಗುರಿಯಾದಾಗ ಲಂಗರನ್ನು ಕತ್ತರಿಸಿ ಯಾನವನ್ನು ಆರಂಭಿಸು.
  5. cut away
    1. ಓಡಿಹೋಗು.
    2. ಮರ, ದಾರು ಮೊದಲಾದವನ್ನು ಪೂರ್ತಿ ಕತ್ತರಿಸಿ ತೆಗೆದುಹಾಕು.
  6. cut down (ರೂಪಕವಾಗಿ) (ಖರ್ಚು ಮೊದಲಾದುವನ್ನು)
    1. ಕಡಿಮೆ ಮಾಡು; ಕೋತ ಮಾಡು; ವೆಚ್ಚ–ಇಳಿಸು, ತಗ್ಗಿಸು.
    2. (ಮರ ಮೊದಲಾದವನ್ನು) ಕಡಿದು ಬೀಳಿಸು; ಹೊಡೆದು ಕೆಡಹು; ತುಂಡರಿಸು; ಕತ್ತರಿಸಿ ಹಾಕು.
    3. (ಕತ್ತಿ, ರೋಗ, ಬಿರುಗಾಳಿ ಮೊದಲಾದವು) ನಾಶಮಾಡು; ಹಾನಿಯುಂಟುಮಾಡು; ಸಾಯಿಸು; ಕೊಲ್ಲು.
    4. ಉಡುಪನ್ನು ಸಣ್ಣದು ಮಾಡು, ಕಿರಿದಾಗಿಸು ಯಾ ಪುನಃ ಹೊಲಿ ಯಾ ತಯಾರಿಸು.
  7. cut in
    1. ಥಟ್ಟನೆ–ಒಳಹೊಗು, ನುಸುಳು, ಸೇರಿಕೊ, ನುಗ್ಗು.
    2. (ಇಸ್ಪೀಟು ಆಟದಲ್ಲಿ ಎಲೆಯನ್ನು ಹಂಚಿ) ಆಟದಿಂದ ಹೊರಬಿದ್ದವನ ಸ್ಥಾನದಲ್ಲಿ ಆಟಕ್ಕೆ ಸೇರಿಕೊ.
    3. (ಮಾತುಕತೆಯ) ಮಧ್ಯೆ ಪ್ರವೇಶಿಸು; ನಡುವೆ ಬಾಯಿಹಾಕು.
    4. ಬೇರೊಬ್ಬನ ನೃತ್ಯಸಂಗಾತಿಯನ್ನು ಹಿಡಿ, ಆರಿಸಿಕೊ; ಒಂದು ನರ್ತನಜೋಡಿಯನ್ನು ಬೇರ್ಪಡಿಸಿ ಆ ಹೆಂಗಸನ್ನು ತನ್ನ ನೃತ್ಯಸಂಗಾತಿಯನ್ನಾಗಿ ಮಾಡಿಕೊ.
    5. ಮುಂದೆ ಇರುವ ವಾಹನವನ್ನು ಹಿಂದೆ ಹಾಕಿ ಬಹಳ ಬೇಗ ಅದರ ಮುಂದೆ ಬಂದು ಆ ವಾಹನಕ್ಕೆ–ತಡೆಯೊಡ್ಡು, ಅಡಚಣೆಯುಂಟುಮಾಡು.
    6. (ವಿದ್ಯುನ್ಮಂಡಲದಲ್ಲಿ ವಿದ್ಯುತ್‍ ಸಲಕರಣೆಯನ್ನು) ಜೋಡಿಸು; ಸೇರಿಸು; ಸಂಂಧ ಕಲ್ಪಿಸು.
    7. (ವ್ಯಕ್ತಿಗೆ) ಲಾಭ ಮೊದಲಾದವುಗಳಲ್ಲಿ ಪಾಲು ಕೊಡು.
  8. cut of
    1. ಕತ್ತರಿಸಿಬಿಡು; ಕತ್ತರಿಸಿ ಹಾಕು; ಕಡಿದು ಬೇರ್ಪಡಿಸು.
    2. ಥಟ್ಟನೆ ಕೊನೆಗೊಳಿಸು; ಹಠಾತ್ತಾಗಿ ಮುಗಿಸು; ಇದ್ದಕ್ಕಿದ್ದಂತೆ ಅಂತ್ಯಗೊಳಿಸು.
    3. ಹಠಾತ್ತಾಗಿ (ಮುಖ್ಯವಾಗಿ ಕಾಲಕ್ಕೆ ಮೊದಲೇ) ಸಾಯಿಸು, ಮರಣ ತರು.
    4. (ಸರಬರಾಜು, ಸಂಪರ್ಕಗಳಿಗೆ) ಅಡ್ಡಿಪಡಿಸು; ತಡೆಯೊಡ್ಡು; (ಅವನ್ನು) ತಡೆ.
    5. (ಪ್ರವಾಹವನ್ನು, ಹರಿವನ್ನು) ನಿಲ್ಲಿಸು; ತಡೆ.
    6. (ಪ್ರವೇಶ, ಪ್ರಾಪ್ತಿ,ಮೊದಲಾದವುಗಳಿಂದ) ಹೊರಗಿಡು; ತಪ್ಪಿಸು: cut off with a shilling ವಾರಸು ತಪ್ಪಿಸು; ಉತ್ತರಾಧಿಕಾರ ತಪ್ಪಿಸು; ಅಸಂತುಷ್ಟಿ ಮೊದಲಾದವನ್ನು ವ್ಯಕ್ತಪಡಿಸಲು ವ್ಯಕ್ತಿಗೆ ಆಸ್ತಿಯ ಒಂದು ಜುಜುಬಿ ಷಿಲಿಂಗನ್ನು ಬಿಟ್ಟುಹೋಗುವುದರ ಮೂಲಕ ಹಕ್ಕು ತಪ್ಪಿಸು.
  9. cut out
    1. (ಪತ್ರಿಕೆ ಮೊದಲಾದವುಗಳಿಂದ ಲೇಖನ ಮೊದಲಾದವನ್ನು) ಕತ್ತರಿಸಿಕೊ; ಕತ್ತರಿಸಿ ತೆಗೆ; ತೆಗೆದುಹಾಕು.
    2. (ಅಶಿಷ್ಟ) (ಯಾವುದೇ ಕೆಲಸವನ್ನು ಯಾ ಯಾವುದನ್ನೇ ಉಪಯೋಗಿಸುವುದನ್ನು) ನಿಲ್ಲಿಸು; ಸಾಕು ಮಾಡು.
    3. (ಪುಸ್ತಕ, ಭಾಷಣ ಮೊದಲಾದವುಗಳಲ್ಲಿ ವಿವರ, ಭಾಗ ಮೊದಲಾದವುಗಳನ್ನು) ಬಿಟ್ಟುಬಿಡು; ತೆಗೆದುಹಾಕು; ಕತ್ತರಿಸು.
    4. (ರೂಪಕವಾಗಿ) (ಪ್ರತಿಸ್ಪರ್ಧಿಯನ್ನು) ಮೀರು; ಮೀರಿಸು; ಹಿಂದಕ್ಕೆ ಹಾಕು; ಮೇಲುಗೈ ಹೊಂದು.
    5. (ರೂಪಕವಾಗಿ) (ಪ್ರತಿಸ್ಪರ್ಧಿಯನ್ನು) ಉರುಳಿಸು; (ಅವನ ಸ್ಥಾನ) ಆಕ್ರಮಿಸು.
    6. (ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ) (ಒಂದು ಕೆಲಸ, ಸ್ಥಾನ ಮೊದಲಾದವುಗಳಿಗೆ) ಸ್ವಭಾವತಃ ಯೋಗ್ಯವಾಗಿರು; ಅರ್ಹವಾಗಿರು; ತಕ್ಕವನಾಗಿರು; ತಕ್ಕದ್ದಾಗಿರು: he was cut out to be a teacher ಸ್ವಭಾವದಿಂದಲೇ ಅವನು ಉಪಾಧ್ಯಾಯವೃತ್ತಿಗೆ ಅರ್ಹನಾಗಿದ್ದಾನೆ.
    7. (ರೂಪಕವಾಗಿ ಸಹ) (ಕೆಲಸಕ್ಕೆ) ರೂಪಿಸು; ವ್ಯವಸ್ಥೆ ಮಾಡು; ಯೋಜನೆ ಮಾಡು; ಸಿದ್ಧಪಡಿಸು: have one’s work cut out for him ಒಬ್ಬನಿಗೆ ಯೋಗ್ಯವಾದ ಕೆಲಸ ರೂಪಿತವಾಗಿರು.
    8. (ಕತ್ತರಿಸಿ) (ಉಡುಪಿಗೆ) ರೂಪು, ಆಕಾರ–ಕೊಡು, ಅಳವಡಿಸು.
    9. (ಮೋಟಾರುವಾಹನ ಮೊದಲಾದವುಗಳ ವಿಷಯದಲ್ಲಿ) ಹೋಗುತ್ತಿರುವ ಹಾದಿಯಿಂದ ಇದ್ದಕ್ಕಿದ್ದಂತೆಯೇ ಪಕ್ಕಕ್ಕೆ ಬರು, ತಿರುಗು.
    10. (ಅಮೆರಿಕನ್‍ ಪ್ರಯೋಗ) (ಪ್ರಾಣಿಯನ್ನು) ಗುಂಪಿನಿಂದ ಬೇರ್ಪಡಿಸು; ಪ್ರತ್ಯೇಕಿಸು; ಮಂದೆ, ಹಿಂಡು–ತಪ್ಪಿಸು.
    11. ತೋಡು; ಅಗೆದು ಹೊರದೆಗೆ; ಭೂಶೋಧನೆ ಮಾಡು.
    12. ಕೊರೆ; ಕೆತ್ತು; ರೂಪಿಸು; ಸವೆಸುವುದರಿಂದ ಆಕಾರ ಕೊಡು: valleys cut out by swift rivers ವೇಗವಾಗಿ ಹರಿಯುವ ನದಿಗಳಿಂದ ತೋಡಲ್ಪಟ್ಟ ಕಣಿವೆಗಳು.
    13. (ಅಶಿಷ್ಟ) ಇದ್ದಕ್ಕಿದ್ದಂತೆ, ಥಟ್ಟನೆ–ಹೊರಟುಹೋಗು.
    14. ಕಾರ್ಯ ಮಾಡದಿರು; ಕೆಲಸ ನಿಲ್ಲಿಸು; ಸ್ಥಗಿತಗೊಳ್ಳು; ನಿಷ್ಕ್ರಿಯವಾಗು.
    15. (ಯಾವುದಾದರೂ ಕೆಲಸವನ್ನು) ನಿಲ್ಲುವಂತೆ ಮಾಡು; ಸ್ಥಗಿತಗೊಳಿಸು; ಕಾರ್ಯ ಮಾಡದಿರುವಂತೆ ಮಾಡು.
    16. (ತಪ್ಪಿಸಿಕೊಳ್ಳಲು ಅವಕಾಶ ಕೊಡದೆ) ಶತ್ರುವಿನ ಹಡಗನ್ನು–ವಶಪಡಿಸಿಕೊ, ಹಿಡಿದುಕೊ, ಆಕ್ರಮಿಸು.
    17. (ಇಸ್ಪೀಟಾಟದಲ್ಲಿ) ತಪ್ಪು ಎಲೆಯನ್ನು ತೆಗೆಯುವುದರಿಂದ ಆಟದಿಂದ ಹೊರಬೀಳು.
  10. cut short
    1. ತಡೆ; ಅಡ್ಡಬರು; ನಡುವೆ, ಮಧ್ಯೆ–ಬರು.
    2. (ರೂಪಕವಾಗಿ ಸಹ) ಮೋಟುಗೊಳಿಸು; ಕತ್ತರಿಸಿ ಚಿಕ್ಕದು ಮಾಡು.
    3. ಮೊಟಕುಗೊಳಿಸು; (ಕಾಲಕ್ಕೆ ಮೊದಲೇ) ನಿಲ್ಲಿಸು; ಮುಗಿಸು; ಕೊನೆಗೊಳಿಸು; ಅಂತ್ಯಗೊಳಿಸು; ಮುಕ್ತಾಯಮಾಡು: illness cut short his career ಕಾಯಿಲೆ ಅವನ ವೃತ್ತಿಜೀವನವನ್ನು ಕೊನೆಗೊಳಿಸಿತು.
  11. cut (the) record (ಓಟದ ಪಂದ್ಯ ಮೊದಲಾದವುಗಳಲ್ಲಿ ಹಿಂದಿನ) ದಾಖಲೆ ಮುರಿ; ಮೀರಿಸು; ದಾಖಲೆ ಮುರಿದು ವಿಕ್ರಮ ಸಾಧಿಸು.
  12. cut under (ವ್ಯಾಪಾರದಲ್ಲಿ) ಇತರರಿಗಿಂತ ಕಡಿಮೆ ಬೆಲೆಯಲ್ಲಿ ಮಾರು.
  13. cut up
    1. ತುಂಡರಿಸು; ಚೂರುಚೂರಾಗಿ ಕತ್ತರಿಸು; ತುಂಡುತುಂಡು ಮಾಡು; ಸೀಳುಸೀಳು ಮಾಡು;
    2. ಪೂರ್ತಿಯಾಗಿ ನಾಶಮಾಡು; ಹಾಳು ಮಾಡು; ನಿರ್ಮೂಲಮಾಡು.
    3. (ರೂಪಕವಾಗಿ) ಕಟುವಾಗಿ ಟೀಕಿಸು; ನಿಷ್ಠುರವಾಗಿ ವಿಮರ್ಶೆ ಮಾಡು.
    4. (ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ) ಮನಸ್ಸನ್ನು ಕೊರೆ; ಕುಟುಕು; ವ್ಯಥೆಗೊಳಿಸು.
    5. (ಅಮೆರಿಕನ್‍ ಪ್ರಯೋಗ) ತಮಾಷೆಯಾಗಿ, ಸ್ವಚ್ಛಂದವಾಗಿ, ಅಡೆತಡೆಯಿಲ್ಲದೆ–ವರ್ತಿಸು, ನಡೆದುಕೊ.
  14. will not cut (ಚಾಕು ಮೊದಲಾದವುಗಳ ವಿಷಯದಲ್ಲಿ) ಮೊಂಡಾಗಿರು; ಕತ್ತರಿಸದಿರು.
ನುಡಿಗಟ್ಟು
  1. cut a 2caper.
  2. cut a dash ದುಂದು ಮಾಡಿ ಎಲ್ಲರ ಕಣ್ಣನ್ನೂ ಸೆಳೆ.
  3. cut a feather (ಹಡಗಿನ ವಿಷಯದಲ್ಲಿ) ಕಡಲ ನೀರು ಬಗೆದು ಎರಡು ಪಕ್ಕದಲ್ಲೂ ಗರಿಗಳಾಕಾರದ ನೊರೆ ಎಬ್ಬಿಸು.
  4. cut a loss ನಷ್ಟದ ವ್ಯಾಪಾರ, ಉದ್ಯಮ, ಯೋಜನೆ, ಮೊದಲಾದವನ್ನು ಸಕಾಲದಲ್ಲಿ ಯಾ ಬಹಳ ನಷ್ಟವಾಗುವುದಕ್ಕೆ ಮೊದಲು ಬಿಟ್ಟುಬಿಡು.
  5. cut a rusty ಬುದ್ಧಿವಂತನಾಗಿರು, ಕಣ್ಣಿಗೆ ಬೀಳುವಂತಿರು ಯಾ ಗಮನ ಸೆಳೆಯುವಂತಿರು.
  6. cut (a) corner (ವಿವರಗಳಿಗೆ, ನಿಯಮಗಳಿಗೆ ಗಮನ ಕೊಡದೆ) ಆದಷ್ಟು ಅಗ್ಗವಾಗಿ ಯಾ ಸುಲಭವಾಗಿ ಮತ್ತು ಬೇಗನೆ ಕೆಲಸ ಮಾಡು.
  7. cut down to $^1$size.
  8. cut flush (ಪುಸ್ತಕದ ಅಂಚುಗಳನ್ನು, ರಟ್ಟುಗಳನ್ನು) ಹತ್ತ ಕತ್ತರಿಸು; ಒಂದೇ ಗಾತ್ರಕ್ಕೆ ಬರುವಂತೆ ಕತ್ತರಿಸು.
  9. cut (it) fine
    1. (ಆಡುಮಾತು) (ಮುಖ್ಯವಾಗಿ ಕಾಲದ ವಿಷಯದಲ್ಲಿ) ಅತಿಲೆಕ್ಕಾಚಾರ ಮಾಡು; ಆಚೆ ಈಚೆ ಕೈ ಆಡಿಸಲು ಅವಕಾಶವಿಲ್ಲದಷ್ಟು ನಿಖರವಾಗಿರು.
    2. ಬಹಳ ಲೆಕ್ಕಾಚಾರದಿಂದಿರು.
  10. cut loose
    1. (ಹಿಡಿತ, ಸಂಪರ್ಕ, ಬಂಧನಗಳಿಂದ) ಬಿಡಿಸು; ಬಿಡಿಸಿಕೊ.
    2. (ಪ್ರಭಾವ, ನಿಯಂತ್ರಣ, ಹತೋಟಿ, ದಾಸ್ಯ, ಪರಾಧೀನತೆಗಳಿಂದ) ಬಿಡಿಸಿಕೊ; ಕಳಚಿಕೊ; ಸ್ವತಂತ್ರವಾಗು.
    3. ಹಿಡಿತವಿಲ್ಲದೆ ವರ್ತಿಸು; ಇಚ್ಛೆ ಬಂದಂತೆ ಆಡು; ಸಿಕ್ಕಿದಂತೆ ಆಡು; ಹುಚ್ಚಾಪಟ್ಟೆ ವರ್ತಿಸು.
  11. cut one dead ನೋಡಿದರೂ ನೋಡದಂತೆ ವರ್ತಿಸು; ಗುರುತಿದ್ದರೂ ಇಲ್ಲದವನಂತೆ ನಡೆದುಕೊ; ಅಪರಿಚಿತನಂತೆ ನಡೆದುಕೊ.
  12. cut (one’s) coat according to (one’s) cloth.
  13. cut one’s eye ಓರಿಗಣ್ಣಿನಿಂದ ನೋಡು; ಕಡೆಗಣ್ಣಿನಿಂದ ದೃಷ್ಟಿಬೀರು.
  14. cut one’s eye-teeth (or wisdom teeth) ಬುದ್ಧಿಕಲಿ; ಬುದ್ಧಿ–ಬರು, ಬೆಳೆ: ಸೂಕ್ಷ್ಮ ತಿಳಿವಳಿಕೆ, ಜ್ಞಾನ–ಪಡೆ; ವಿವೇಕ ಸಂಪಾದಿಸು.
  15. cut one’s losses = ನುಡಿಗಟ್ಟು \((4)\).
  16. cut one’s lucky (ಆಡುಮಾತು) ಓಡಿಹೋಗು; ತಪ್ಪಿಸಿಕೊಂಡು ಹೋಗು; ಓಟಕೀಳು; ಪಲಾಯನ ಮಾಡು; ಕಂಬಿ ಕೀಳು.
  17. cut one’s stick = ನುಡಿಗಟ್ಟು \((16)\).
  18. cut one’s teeth (or eye-teeth) on
    1. (ಉದ್ಯೋಗ ಮೊದಲಾದವನ್ನು) ಆರಂಭಿಸು; ಕೆಲಸ ಕಲಿ; ಕೆಲಸ ಮಾಡತೊಡಗು.
    2. ಅನುಭವ ಗಳಿಸು; ಕೌಶಲ ಸಂಪಾದಿಸು.
    3. ಚಿಕ್ಕವನಾಗಿರುವಾಗಲೇ ಕಲಿಯತೊಡಗು.
  19. cut one’s throat ಕುತ್ತಿಗೆ ಕೊಯ್ಯಿ; (ಸರಿಪಡಿಸಲಾಗದಷ್ಟು) ಹಾನಿಯುಂಟುಮಾಡು; ನಾಶಮಾಡು; ಹಾಳುಮಾಡು.
  20. cuts both ways
    1. ಒಳ್ಳೆಯ ಹಾಗೂ ಕೆಟ್ಟ ಎರಡೂ ಪರಿಣಾಮಗಳಿಂದ ಕೂಡಿರುತ್ತದೆ: this action cuts both ways
    2. ಈ ಕಾರ್ಯಕ್ರಮದಿಂದ ಅನುಕೂಲವೂ ಇದೆ, ಅನನುಕೂಲವು ಇದೆ.
    3. ಎರಡೂ ಕಡೆಗೆ ಸಹಾಯಕವಾಗಿದೆ, ಪೋಷಕವಾಗಿದೆ: the argument cuts both ways ವಾದ ಎರಡೂ ಕಡೆಗೆ ತಟ್ಟುತ್ತದೆ, ಸಹಾಯಕವಾಗಿದೆ.
  21. cuts no ice (ಅಶಿಷ್ಟ)
    1. ಪ್ರಯೋಜನಕಾರಿಯಾಗದಿರು; ಪ್ರಭಾವ ಬೀರದಿರು; ಪ್ರಾಮುಖ್ಯವಿಲ್ಲದಿರು.
    2. ಏನನ್ನೂ ಸಾಧಿಸದಿರು; ವ್ಯರ್ಥವಾಗು.
  22. cut stick = ನುಡಿಗಟ್ಟು \((16)\).
  23. cut the buck ಚುರುಕಾಗಿ, ಚೆನ್ನಾಗಿ, ದಕ್ಷತೆಯಿಂದ–ಕೆಲಸ ಮಾಡು.
  24. cut the Gordian knot ಕಗ್ಗಂಟು ಬಿಡಿಸು; ಬಿಡಿಸಲಾಗದ ಸಮಸ್ಯೆಯನ್ನು ಬಲಪ್ರಯೋಗದಿಂದ ಯಾ ನಿಯಮಗಳನ್ನು ಮುರಿದು ಪರಿಹರಿಸು, ಬಿಡಿಸು.
  25. cut the ground from under ಆಧಾರವಿಲ್ಲದಂತೆ ಮಾಡು; ನಿರಾಧಾರಗೊಳಿಸು; ಬುನಾದಿಯನ್ನೇ ಆಲುಗಾಡಿಸು; ವಾದ, ಯೋಜನೆ ಮೊದಲಾದವುಗಳನ್ನು ಮೊದಲೇ ಊಹಿಸಿ ನಾಶಗೊಳಿಸು.
  26. cut the knot ಗಂಟನ್ನು ಕತ್ತರಿಸು; (ಸಮಯಕ್ಕೆ ತಕ್ಕ ಚಾತುರ್ಯದಿಂದ, ಯುಕ್ತಿಯಿಂದ, ಅಕ್ರಮವಾದರೂ ಸಮರ್ಥವಾಗಿ) ಸಮಸ್ಯೆಯನ್ನು ಬಿಡಿಸು, ಪರಿಹರಿಸು.
  27. cut the mustard (ಅಶಿಷ್ಟ) ಯಶಸ್ವಿಯಾಗಲು ಅಗತ್ಯವಾದ ಮಟ್ಟ ಯಾ ದಕ್ಷತೆ–ಗಳಿಸು, ಸಂಪಾದಿಸು.
  28. cut the muster = ನುಡಿಗಟ್ಟು \((27)\).
  29. cut to pieces (ಶತ್ರು ಮೊದಲಾದವರನ್ನು) ತಲೆಯೆತ್ತದಂತೆ ಮಾಡು; ಮಟ್ಟಹಾಕು; ಸದೆಬಡಿ; ಬಲಿಹಾಕು; ನಿರ್ಮೂಲ ಮಾಡು.
  30. cut to the bone ಆದಷ್ಟು ಕಡಿಮೆ ಮಾಡು; ಅನಗತ್ಯ, ಹೆಚ್ಚಾದದ್ದು ಎಂಬುದನ್ನೆಲ್ಲಾ ತೆಗೆದುಹಾಕಿ ಕನಿಷ್ಠ ಮಾತ್ರಕ್ಕೆ ಇಳಿಸು.
  31. cut to the quick ಮನನೋಯಿಸು; ಚುಚ್ಚು.
  32. cut up bad, nasty, rough ಅಸಂತೋಷ ತೋರಿಸು; ಅಸಮಾಧಾನಗೊಳ್ಳು; ಬೇಸರ ತೋರಿಸು.
  33. cut up touches ಲಘು ಹರಟೆ ಹೊಡೆ; ಹರಟೆ ಹೊಡೆ; ಅದು, ಇದು ಮಾತಾಡು; ಲೋಕಾಭಿರಾಮವಾಗಿ ಮಾತಾಡು.
  34. cut up well (ಅಶಿಷ್ಟ) ಭಾರಿ ಆಸ್ತಿ ಯಾ ಸಂಪತ್ತನ್ನು ಬಿಟ್ಟು ಹೋಗು.
  35. cut ice ತೂಕ, ಪ್ರಭಾವ ಯಾ ಪ್ರಾಮುಖ್ಯ ಹೊಂದಿರು.