See also 2Germanic
1Germanic ಜರ್ಮ್ಯಾನಿಕ್‍
ಗುಣವಾಚಕ
  1. (ಚರಿತ್ರೆ) ಜರ್ಮನರ: Germanic Confederation ಜರ್ಮನರ ಒಕ್ಕೂಟ. Germanic Empire ಜರ್ಮನರ ಚಕ್ರಾಧಿಪತ್ಯ.
  2. ಸ್ಕ್ಯಾಂಡಿನೇವಿಯನ್ನರ, ಆಂಗ್ಲೋಸ್ಯಾಕ್ಸನರ ಯಾ ಜರ್ಮನರ.
  3. ಸ್ಕ್ಯಾಂಡಿನೇವಿಯನರ, ಆಂಗ್ಲೋಸ್ಯಾಕ್ಸನರ, ಯಾ ಜರ್ಮನರ ಪುರಾತನ ಭಾಷೆಯ.
  4. ಜರ್ಮನ್‍ ಲಕ್ಷಣಗಳುಳ್ಳ.
ಪದಗುಚ್ಛ
  1. East Germanic ಗಾಥಿಕ್‍ ಮತ್ತು ಈಗ ಹೆಚ್ಚು ಕಡಿಮೆ ಅಳಿದುಹೋಗಿರುವ ಬರ್ಗಂಡಿಯನ್‍, ವ್ಯಾಂಡಲ್‍, ಮೊದಲಾದ ಭಾಷೆಗಳು.
  2. North Germanic ಸ್ಕ್ಯಾಂಡಿನೇವಿಯನ್‍ ಭಾಷೆ.
  3. West Germanic ಹೈ ಮತ್ತು ಲೋ ಜರ್ಮನ್‍, ಇಂಗ್ಲಿಷ್‍, ಹ್ರಿಸಿಯನ್‍, ಡಚ್‍, ಮೊದಲಾದ ಭಾಷಾವರ್ಗ.
See also 1Germanic
2Germanic ಜರ್ಮ್ಯಾನಿಕ್‍
ನಾಮವಾಚಕ

ಜರ್ಮ್ಯಾನಿಕ್‍ ಭಾಷೆಗಳು; ಇಂಗ್ಲಿಷ್‍, ಜರ್ಮನ್‍, ಡಚ್‍, ಆಹ್ರಿಕನ್ಸ್‍, ಹ್ಲೆಮಿಷ್‍, ಹ್ರಿಸಿಯನ್‍, ಗಾಥಿಕ್‍, ಸ್ಕ್ಯಾಂಡಿನೇವಿಯನ್‍, ಮೊದಲಾದ ಪುರಾತನ ಭಾಷೆಗಳು.