See also 2Adam
1Adam ಆಡಮ್‍
ನಾಮವಾಚಕ

(ಬೈಬ್‍ಲ್‍) ಆಡಮ್‍; ಆದಿಮಾನವ; ಪ್ರಥಮ ಮಾನವ; ಆದಿಯಲ್ಲಿ ಸೃಷ್ಟಿಯಾದ ಮನುಷ್ಯ; ಮನುಷ್ಯವರ್ಗದ ಆದಿಪುರುಷ.

ನುಡಿಗಟ್ಟು
  1. I do not know him from Adam ನನಗೆ ಅವನ ಗುರುತೇ ಇಲ್ಲ; ಅವನು ಹೇಗಿದ್ದಾನೆಂಬುದೇ ನನಗೆ ತಿಳಿಯದು.
  2. old Adam
    1. ಮನುಷ್ಯನಲ್ಲಿ ಸಹಜವಾಗಿರುವ ಪಾಪ–ಪ್ರವೃತ್ತಿ, ಬುದ್ಧಿ, ಸ್ವಭಾವ.
    2. ಪ್ರಾಕೃತ ಬುದ್ಧಿ; ಅನಾಗರಿಕ ಬುದ್ಧಿ: the old Adam in him ಅವನಲ್ಲಿಯ ಪಾಪಪ್ರವೃತ್ತಿ ಯಾ ಪ್ರಾಕೃತ ಬುದ್ಧಿ.
  3. Adam’s ale or wine (ಕುಡಿಯುವ) ನೀರು.
See also 1Adam
2Adam ಆಡಮ್‍
ಗುಣವಾಚಕ

(ಹಿಂದೆ ಬಹುವಚನ) (ವಾಸ್ತುಶಿಲ್ಪ) ಆಡಮೀಯ; 18ನೆಯ ಶತಮಾನದ ರಾಬರ್ಟ್‍ ಮತ್ತು ಜೇಮ್ಸ್‍ ಆಡಂ ಎಂಬ ಸ್ಕಾಟ್‍ ಸಹೋದರರು ಸೃಷ್ಟಿಸಿದ ಅಲಂಕಾರ ಶೈಲಿಯ.