See also 2-ing  3-ing
1-ing -ಇಂಗ್‍
ಉತ್ತರಪ್ರತ್ಯಯ

ಕೃನ್ನಾಮಗಳನ್ನು ರೂಪಿಸುವ ಉತ್ತರಪ್ರತ್ಯಯ:

  1. ಕ್ರಿಯಾಪದವು ಸೂಚಿಸುವ ಕೆಲಸದ ಹೆಸರು: asking, driving, fighting, foreboding.
  2. ಕೆಲವೊಮ್ಮೆ ವೃತ್ತಿಯ ಹೆಸರು: banking, glass-blowing.
  3. ಘಟನೆಯನ್ನು ಸೂಚಿಸುವ ಪದ: wedding.
  4. ಕೊಟ್ಟ ಶಿಕ್ಷೆಯ ಹೆಸರು: thrashing, the wearing of the green.
  5. ಕ್ರಿಯಾಪದವು ಸೂಚಿಸುವ ಕ್ರಿಯೆಯಿಂದಾದ ವಸ್ತುವಿನ ಹೆಸರು: building, carving, filings.
  6. ಕ್ರಿಯಾಪದವು ಸೂಚಿಸುವ ಕೆಲಸವನ್ನು ಮಾಡಲು ಬಳಸುವ ವಸ್ತು: binding, ದಂತವೈದ್ಯನು ಬಳಸುವ filling.
  7. ನಾಮಪದದಿಂದಲೋ ಕ್ರಿಯಾಪದದಿಂದಲೋ ನಿಷ್ಪನ್ನವಾದ, ಸಾಮಗ್ರಿಯನ್ನು ನಿರ್ದೇಶಿಸುವ ಹೆಸರು: clothing, fencing, sacking, scaffolding.
  8. ಕ್ರಿಯೆಗೆ ಪಾತ್ರವಾಗಿರುವ ವಸ್ತುವಿನ ಹೆಸರು: darning, washing.
  9. ವಸ್ತುವೊಂದರ ಒಪ್ಪ, ಓರಣ ಯಾ ಜೋಡಣೆಗಳ ಹೆಸರು: colouring, feathering.
  10. ನಾಮಪದಗಳಿಂದ ರೂಪಿಸಿದ ತರಬೇತಿಯ ಹೆಸರು: soldering.
See also 1-ing  3-ing
2-ing -ಇಂಗ್‍
ಉತ್ತರಪ್ರತ್ಯಯ
  1. ಹಲವೊಮ್ಮೆ ಗುಣವಾಚಕವಾಗಿ ಪ್ರಯೋಗಿಸುವ ಕ್ರಿಯಾಪದಗಳ ವರ್ತಮಾನ ಕೃದಂತಗಳನ್ನು ರೂಪಿಸುವ ಉತ್ತರಪ್ರತ್ಯಯ: appalling, charming, diverting, heart-breaking.
  2. ಕೆಲವೊಮ್ಮೆ ‘ಸಂಭವನೀಯ’ ಎಂಬ ಅರ್ಥದಲ್ಲಿ ಬಳಸುವ ಉತ್ತರಪ್ರತ್ಯಯ: not a marrying man.
  3. “ಯಾವುದೇ ಕ್ರಿಯೆಗೆ ಒಳಗಾಗಲು ಯೋಗ್ಯವಾದ” ಎಂಬ ಭೂತಕೃದಂತದ ಅರ್ಥದಲ್ಲಿ ಬಳಸುವ ವರ್ತಮಾನ ಕೃದಂತಗಳು: cooking apple ಬೇಯಿಸಬಹುದಾದ ಸೇಬು. washing tie ಒಗೆಯಬಹುದಾದ ಟೈ.
  4. ಕೆಲವೊಮ್ಮೆ ಉಪಸರ್ಗ ಇಲ್ಲವೆ ಕ್ರಿಯಾವಿಶೇಷಣವಾಗಿ ಬಳಸುವ ಉತ್ತರಪ್ರತ್ಯಯ: barring, during, notwithstanding.
  5. ಕೆಲವೊಮ್ಮೆ ನಾಮಪದಗಳಿಂದ ರೂಪುಗೊಳ್ಳುವ ಪದಗಳು: hulking.
  6. ಕೆಲವೊಮ್ಮೆ ಗುಣವಾಚಕಗಳಿಂದ ರೂಪುಗೊಳ್ಳುವ ಪದಗಳು: balding, greying.
  7. ರೂಪದಲ್ಲಿ ಕೃದಂತವಾಗಿದ್ದು ಅರ್ಥದಲ್ಲಿ ಕೃನ್ನಾಮವಾಗಿರುವ ವರ್ತಮಾನ ಕೃದಂತ: he went hunting ಬೇಟೆಗಾಗಿ ಅವನು ಹೋದ.
  8. ಸಂಯುಕ್ತಪದದ ಪೂರ್ವಪದವನ್ನು ಬಲಪಡಿಸಲು ಉತ್ತರಪದಗಳಿಗೆ ಸೇರಿಸುವ ವರ್ತಮಾನ ಕೃದಂತಗಳು: heart-breaking, cheese-paring.
See also 1-ing  2-ing
3-ing -ಇಂಗ್‍
ಉತ್ತರಪ್ರತ್ಯಯ

ನಾಮಪದಗಳ ಅಂತ್ಯದಲ್ಲಿ ಸೇರುವ ಉತ್ತರಪ್ರತ್ಯಯವಾಗಿ ಒಬ್ಬನಿಗೆ, ಒಂದಕ್ಕೆ ಸೇರಿದ, ನಿರ್ದೇಶಿತ ಗುಣವುಳ್ಳ, ಲಕ್ಷಣವುಳ್ಳ ಎಂಬರ್ಥಗಳಲ್ಲಿ ಪ್ರಯೋಗ (ಗೋತ್ರೀಯ ನಾಮಗಳಲ್ಲೂ ಅಲ್ಪಾರ್ಥಕ ನಾಮವಾಚಿಗಳಲ್ಲೂ ಸಹ ಪ್ರಯೋಗ): Atheling, shilling, farthing, Riding, gelding, herring, whiting.