See also 1-ing  3-ing
2-ing -ಇಂಗ್‍
ಉತ್ತರಪ್ರತ್ಯಯ
  1. ಹಲವೊಮ್ಮೆ ಗುಣವಾಚಕವಾಗಿ ಪ್ರಯೋಗಿಸುವ ಕ್ರಿಯಾಪದಗಳ ವರ್ತಮಾನ ಕೃದಂತಗಳನ್ನು ರೂಪಿಸುವ ಉತ್ತರಪ್ರತ್ಯಯ: appalling, charming, diverting, heart-breaking.
  2. ಕೆಲವೊಮ್ಮೆ ‘ಸಂಭವನೀಯ’ ಎಂಬ ಅರ್ಥದಲ್ಲಿ ಬಳಸುವ ಉತ್ತರಪ್ರತ್ಯಯ: not a marrying man.
  3. “ಯಾವುದೇ ಕ್ರಿಯೆಗೆ ಒಳಗಾಗಲು ಯೋಗ್ಯವಾದ” ಎಂಬ ಭೂತಕೃದಂತದ ಅರ್ಥದಲ್ಲಿ ಬಳಸುವ ವರ್ತಮಾನ ಕೃದಂತಗಳು: cooking apple ಬೇಯಿಸಬಹುದಾದ ಸೇಬು. washing tie ಒಗೆಯಬಹುದಾದ ಟೈ.
  4. ಕೆಲವೊಮ್ಮೆ ಉಪಸರ್ಗ ಇಲ್ಲವೆ ಕ್ರಿಯಾವಿಶೇಷಣವಾಗಿ ಬಳಸುವ ಉತ್ತರಪ್ರತ್ಯಯ: barring, during, notwithstanding.
  5. ಕೆಲವೊಮ್ಮೆ ನಾಮಪದಗಳಿಂದ ರೂಪುಗೊಳ್ಳುವ ಪದಗಳು: hulking.
  6. ಕೆಲವೊಮ್ಮೆ ಗುಣವಾಚಕಗಳಿಂದ ರೂಪುಗೊಳ್ಳುವ ಪದಗಳು: balding, greying.
  7. ರೂಪದಲ್ಲಿ ಕೃದಂತವಾಗಿದ್ದು ಅರ್ಥದಲ್ಲಿ ಕೃನ್ನಾಮವಾಗಿರುವ ವರ್ತಮಾನ ಕೃದಂತ: he went hunting ಬೇಟೆಗಾಗಿ ಅವನು ಹೋದ.
  8. ಸಂಯುಕ್ತಪದದ ಪೂರ್ವಪದವನ್ನು ಬಲಪಡಿಸಲು ಉತ್ತರಪದಗಳಿಗೆ ಸೇರಿಸುವ ವರ್ತಮಾನ ಕೃದಂತಗಳು: heart-breaking, cheese-paring.