See also 2-id  3-id  4-id
1-id -ಇಡ್‍
ಉತ್ತರಪ್ರತ್ಯಯ

ಲ್ಯಾಟಿನ್‍ ಹಾಗೂ ಹ್ರೆಂಚ್‍ ಮೂಲಶಬ್ದಗಳಿಂದ ಗುಣವಾಚಕಗಳನ್ನು ರಚಿಸುವಲ್ಲಿ ಬಳಸುವ ಉತ್ತರಪ್ರತ್ಯಯ: (L. timidus) timid, (L. rapidus) rapid, (F. morbidus) morbid.

See also 1-id  3-id  4-id
2-id -ಇಡ್‍
ಉತ್ತರಪ್ರತ್ಯಯ

ಯಾವುದೇ ಒಂದು ವರ್ಗ ಯಾ ಗುಂಪಿಗೆ ಸೇರಿದ್ದು ಎಂಬರ್ಥದ ನಾಮವಾಚಕಗಳ ರಚನೆಯಲ್ಲಿ ಬಳಸುವ ಉತ್ತರಪ್ರತ್ಯಯ: ಸಸ್ಯವಿಜ್ಞಾನದಲ್ಲಿ amaryllid, orchid ಎಂಬುವು Amaryllideae, Orchidaceae ಎಂಬ ವಂಶಗಳಿಗೆ ಸೇರಿದವು ಎಂಬುದನ್ನು ಸೂಚಿಸುತ್ತವೆ.

See also 1-id  2-id  4-id
3-id -ಇಡ್‍
ಉತ್ತರಪ್ರತ್ಯಯ

ಮುಂದಿನ ಅರ್ಥಗಳನ್ನು ಸೂಚಿಸುವ ನಾಮವಾಚಕಗಳನ್ನು ರಚಿಸಲು ಬಳಸುವ ಉತ್ತರಪ್ರತ್ಯಯ:

  1. ಕುಲಗಳ ಹೆಸರನ್ನು ಸೂಚಿಸಲು Seleucid (Seleucus) ಸೆಲ್ಯೂಕಸ್‍ (ಸ್ಥಾಪಿಸಿದ) ವಂಶದವನು.
  2. (ಪ್ರಾಣಿವಿಜ್ಞಾನ) ವರ್ಗಗಳ ಹೆಸರನ್ನು ಸೂಚಿಸುವ ನಾಮವಾಚಕಗಳ ಮತ್ತು ಗುಣವಾಚಕಗಳ ಪ್ರತ್ಯಯವಾಗಿ: arachnid (Arachnida ಎಂಬ ವರ್ಗದ ಜೀವಿ).
  3. (ಖಗೋಳ ವಿಜ್ಞಾನ) ನಿರ್ದಿಷ್ಟ ಹೆಸರಿನ ಖಗೋಳ ರಾಶಿಗೆ ಸೇರಿದ ಉಲ್ಕೆ ಎಂಬರ್ಥದಲ್ಲಿ ಬಳಸುವ ಉತ್ತರಪ್ರತ್ಯಯ: Leonid ಸಿಂಹರಾಶಿಯಿಂದ ಹೊರಬೀಳುವ ಉಲ್ಕಾಪಾತಗಳ ಯಾ ಉಲ್ಕಾ ಸಮುದಾಯಗಳಿಗೆ ಸೇರಿದುದು.
  4. (ಖಗೋಳ ವಿಜ್ಞಾನ) ನಿರ್ದಿಷ್ಟ ಹೆಸರಿನ ಖಗೋಳರಾಶಿಗೆ ಸೇರಿದ ತಾರೆಯಂಥ ಬೇರೊಂದು ತಾರೆ: Cepheid.
See also 1-id  2-id  3-id
4-id -ಇಡ್‍
ಉತ್ತರಪ್ರತ್ಯಯ

(ಅಮೆರಿಕನ್‍ ಪ್ರಯೋಗ ಯಾ ಪ್ರಾಚೀನ ಪ್ರಯೋಗ) = -ide.