See also 2-en  3-en  4-en  5-en  6-en
1-en -ಅನ್‍
ಉತ್ತರಪ್ರತ್ಯಯ
  1. ಸಬಲ ಕ್ರಿಯಾಪದಗಳ ಭೂತಕೃದಂತರೂಪಗಳನ್ನು ರಚಿಸುವ ಉತ್ತರಪ್ರತ್ಯಯ: spoken.
  2. ಹಲವು ವೇಳೆ ಗತಪ್ರಯೋಗ ಯಾ ಪ್ರಾಚೀನ ಪ್ರಯೋಗ: gotten, graven (ಬಹುವೇಳೆ ಇದಕ್ಕೆ ಬದಲು -ed ಆದೇಶವಾಗುತ್ತದೆ. ಉದಾಹರಣೆಗೆ shapenಗೆ ಬದಲು shaped).
  3. ಕೆಲವೊಮ್ಮೆ ಗುಣವಾಚಕದ ಅರ್ಥದಲ್ಲಿ ಮಾತ್ರ ಬಳಕೆಯಲ್ಲಿರುವ ಉತ್ತರಪ್ರತ್ಯಯ: drunken; lorn(-en ನಲ್ಲಿಯ e ಲೋಪವಾಗಿ -n ಎಂಬ ರೂಪ ಉಳಿಯುವುದುಂಟು).
See also 1-en  3-en  4-en  5-en  6-en
2-en -ಎನ್‍, -ಇನ್‍
ಉತ್ತರಪ್ರತ್ಯಯ

ಅಲ್ಪಾರ್ಥಕ ನಾಮವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ: chicken, maiden.

See also 1-en  2-en  4-en  5-en  6-en
3-en -ಎನ್‍, -ಇನ್‍
ಉತ್ತರಪ್ರತ್ಯಯ
  1. ಸ್ತ್ರೀವಾಚಕದ ಉತ್ತರಪ್ರತ್ಯಯ, ಈಗ vixen ಎಂಬ ಪದದಲ್ಲಿ ಮಾತ್ರ ಉಳಿದಿದೆ.
  2. ಭಾವನಾಮಗಳನ್ನು ರಚಿಸುವ ಉತ್ತರಪ್ರತ್ಯಯ: burden.
See also 1-en  2-en  3-en  5-en  6-en
4-en -ಎನ್‍, -ಇನ್‍
ಉತ್ತರಪ್ರತ್ಯಯ

ಬಹುವಚನ ರೂಪಗಳನ್ನು ರಚಿಸುವ ಉತ್ತರಪ್ರತ್ಯಯ: oxen, brethren, children.

See also 1-en  2-en  3-en  4-en  6-en
5-en -ಎನ್‍, -ಅನ್‍
ಉತ್ತರಪ್ರತ್ಯಯ

ಸಾಮಗ್ರಿಗಳ ಹೆಸರಾದ ನಾಮವಾಚಕಗಳ ಗುಣವಾಚಕಗಳನ್ನು ರಚಿಸುವ ಉತ್ತರಪ್ರತ್ಯಯ: wooden, woollen, (ರೂಪಕವಾಗಿ) golden.

See also 1-en  2-en  3-en  4-en  5-en
6-en -ಎನ್‍, -ಅನ್‍
ಉತ್ತರಪ್ರತ್ಯಯ
  1. ಗುಣವಾಚಕಗಳಿಂದ ‘ಆಗು ಯಾ ಮಾಡು’ ಎಂಬರ್ಥದ ಕ್ರಿಯಾಪದಗಳನ್ನು ರಚಿಸುವ ಉತ್ತರಪ್ರತ್ಯಯ: deepen, moisten.
  2. ನಾಮವಾಚಕಗಳಿಂದ ‘ಆಗು ಯಾ ಮಾಡು’ ಎಂಬರ್ಥದ ಕ್ರಿಯಾಪದಗಳನ್ನು ರಚಿಸುವ ಉತ್ತರಪ್ರತ್ಯಯ: happen, hearten, heighten, listen.