year ಯಿಯರ್‍, ಯರ್‍
ನಾಮವಾಚಕ
  1. ವರ್ಷ; (ಸಂ)ವತ್ಸರ; ಅಬ್ದ:
    1. ಸೌರ(ಮಾನ)ವರ್ಷ; ವಿಷುವದ್ವರ್ಷ; ಭೂಮಿ ಸೂರ್ಯನ ಸುತ್ತಲೂ ಒಮ್ಮೆ ಸುತ್ತಿಬರಲು ತೆಗೆದುಕೊಳ್ಳುವ 365 ದಿನ, 5 ಘಂಟೆ, 48 ನಿಮಿಷ, 46 ಸೆಕೆಂಡುಗಳ ಅವಧಿ: (astronomical year, equinoctial year, natural year, solar year, tropical year ಎಂದೂ ಪ್ರಯೋಗ)
    2. ವ್ಯಾವಹಾರಿಕ ವರ್ಷ; ಜನವರಿ 1ರಿಂದ ಡಿಸೆಂಬರ್‍ 31ರವರೆಗಿನ 365 ದಿನಗಳ ಅವಧಿ (calendar year, civil year, common year ಎಂದೂ ಪ್ರಯೋಗ) ಯಾ 366 ದಿನಗಳ ಅವಧಿ (leap year ಎಂದೂ ಪ್ರಯೋಗ).
    3. ಯಾವುದೇ ತಾರೀಖಿನಿಂದ ಪ್ರಾರಂಭವಾಗಿ 365 ದಿನಗಳು ಪೂರೈಸುವ ಅವಧಿ: four years ago ನಾಲ್ಕು ವರ್ಷಗಳ ಹಿಂದೆ.
    4. ಒಂದು ನಿರ್ದಿಷ್ಟ ಕ್ರಿಯೆ, ಕಾರ್ಯಕ್ರಮ ಯಾ ಚಟುವಟಿಕೆಗಳಿಗಾಗಿ ನಿಗದಿಪಡಿಸಿರುವ ಅವಧಿ: school year ಶಾಲಾವರ್ಷ; ಶೈಕ್ಷಣಿಕ ವರ್ಷ; ಶಾಲೆಯಲ್ಲಿ ಪಾಠಪ್ರವಚನ ನಡೆಯುವ ಅವಧಿ. tax year ತೆರಿಗೆ ವರ್ಷ. financial year ಆರ್ಥಿಕವರ್ಷ; ವಿತ್ತವರ್ಷ; ಹಣಕಾಸಿನ ವರ್ಷ; ತೆರಿಗೆ, ಲೆಕ್ಕಾಚಾರ, ಮೊದಲಾದವುಗಳಿಗಾಗಿ ಬ್ರಿಟನ್ನಿನಲ್ಲಿ ಏಪ್ರಿಲ್‍ 1ರಿಂದ ಯಾ ಅಮೆರಿಕದಲ್ಲಿ ಜನವರಿ 1ರಿಂದ ಯಾ ಜುಲೈ 1ರಿಂದ ಪ್ರಾರಂಭವಾಗುವ ವರ್ಷ.
  2. (ಬಹುವಚನದಲ್ಲಿ) ವಯಸ್ಸು ಯಾ ಜೀವಿತ ಕಾಲ: young for his years ಅವನಿಗೆ ಆಗಿರುವ ವಯಸ್ಸಿಗಿಂತಲೂ ಚಿಕ್ಕವನಾಗಿ ಕಾಣುತ್ತಾನೆ.
  3. (ಸಾಮಾನ್ಯವಾಗಿ ಬಹುವಚನದಲ್ಲಿ) (ಆಡುಮಾತು) ಬಹಳ ವರ್ಷ(ಗಳು); ಅತಿ ದೀರ್ಘ ಕಾಲ: it took years to get served ಇದು ಉಪಯೋಗಕ್ಕೆ ಬರಬೇಕಾದರೆ ದೀರ್ಘಕಾಲ ತೆಗೆದುಕೊಂಡಿತು.
  4. ಒಂದೇ ಶೈಕ್ಷಣಿಕ ವರ್ಷದಲ್ಲಿ ಶಾಲಾಕಾಲೇಜುಗಳನ್ನು ಸೇರುವ ವಿದ್ಯಾರ್ಥಿಗಳ ತಂಡ, ವರ್ಗ.
ಪದಗುಚ್ಛ
  1. a year and a day (ಕೆಲವು ಕಾನೂನು ವ್ಯವಹಾರಗಳಲ್ಲಿ ಒಂದು ವರ್ಷ ಪೂರ್ಣವಾಗಿದೆ ಎಂಬಉದನ್ನು ಸೂಚಿಸಲು ನಿಗದಿಮಾಡುವ) ಒಂದು ವರ್ಷ ಮತ್ತು ಒಂದು ದಿನ.
  2. a year(from) today etc. ಇಂದಿನಿಂದ, ಇವತ್ತಿನಿಂದ ಒಂದು ವರ್ಷದ ತರುವಾಯ.
  3. Christian (or Church or Ecclesiastical) year (ಕ್ರಿಸ್ತನ ಜನ್ಮದಿನದಿಂದ ಎಣಿಸುವ) ಕ್ರೈಸ್ತವರ್ಷ; ಕ್ರಿಸ್ತಶಕ.
  4. (getting on) in years ವಯಸ್ಸಾಗುತ್ತಿರುವ.
  5. in the year of our Lord ಕ್ರಿಸ್ತಶಕ$\ldots$ನೇ ವರ್ಷದಲ್ಲಿ.
  6. of the year ವರ್ಷದ; ಆ ವರ್ಷದ ಅತ್ಯಂತ ಶ್ರೇಷ್ಠ (ವ್ಯಕ್ತಿ ಮೊದಲಾದವರೆಂದು) ಆರಿಸಲಾದ: sportsman of the year ವರ್ಷದ ಕ್ರೀಡಾಪಟು.
  7. year by year ವರ್ಷೇ ವರ್ಷೇ; ವರ್ಷದ ನಂತರ ವರ್ಷ; ಪ್ರತಿವರ್ಷ.
  8. year of grace ಕ್ರಿಸ್ತಶಕದ ವರ್ಷ.
  9. the year $^1$dot (ಬ್ರಿಟಿಷ್‍ ಪ್ರಯೋಗ) (ಆಡುಮಾತು) ತುಂಬಾ ಹಿಂದೆ; ಬಹಳ ಹಿಂದೆ.
  10. year in, year out ವರ್ಷಗಟ್ಟಳೆ; ವರ್ಷಾನುಗಟ್ಟಳೆ; ಅನೇಕ ವರ್ಷಗಳು ನಿರಂತರವಾಗಿ, ಒಂದೇ ಸಮನೆ.