See also 2dot  3dot
1dot ಡಾಟ್‍
ನಾಮವಾಚಕ
  1. ಚುಕ್ಕೆ; ಬಿಂದು; ಬೊಟ್ಟು:
    1. ಪೂರ್ಣ ವಿರಾಮ ಸೂಚಿಸಲು ಹಾಕುವ, i ಮತ್ತು j ಗಳ ಮೇಲೆ ಹಾಕುವ, ಅಕ್ಷರದ ವಿಶೇಷ ಉಚ್ಚಾರ ಸೂಚಿಸಲು ಹಾಕುವ – ಚುಕ್ಕೆ.
    2. (ಸಂಗೀತ) ಸ್ವರದ ಯಾ ವಿರಾಮದ ದೀರ್ಘತೆ ಯಾ ಲಯವಿಚ್ಛೇದ ಸೂಚಿಸಲು ಹಾಕುವ ಚುಕ್ಕೆ.
  2. ದಶಮಾಂಶ ಬಿಂದು.
  3. ಪುಟಾಣಿ ವಸ್ತು.
  4. ಮಾರ್ಸ್‍ ಸಂಕೇತದಲ್ಲಿ ಬಳಸುವ ಎರಡು ಸಂಕೇತಗಳಲ್ಲಿ ಚಿಕ್ಕದು.
  5. ಲವ; ಲೇಶ; ರವಷ್ಟು; ಅಲ್ಪವಸ್ತು; ತುಸು; ಕೊಂಚ: a dot of butter ರವಷ್ಟು ಬೆಣ್ಣೆ.
ನುಡಿಗಟ್ಟು
  1. off one’s dot ಬುದ್ಧಿ ಕೆಟ್ಟ; ಐಲು ಹತ್ತಿದ.
  2. on the dot ನಿಗದಿಯಾದ ಕಾಲಕ್ಕೆ ಸರಿಯಾಗಿ; ವೇಳೆಗೆ ಸರಿಯಾಗಿ ಹೊತ್ತಿಗೆ ಸರಿಯಾಗಿ.
  3. the year dot (ಬ್ರಿಟಿಷ್‍ ಪ್ರಯೋಗ) (ಆಡುಮಾತು) ತುಂಬ ಹಿಂದೆ; ಬಹಳ ಹಿಂದೆ.