See also 2may
1may ಮೇ
ಸಹಾಯಕ ಕ್ರಿಯಾಪದ

(ಪ್ರಾಚೀನ ಪ್ರಯೋಗ ಏಕವಚನ may, ಭೂತರೂಪ might). ಸಂಭವ, ಸಾಧ್ಯತೆ, ಅನುಜ್ಞೆ, ಸಂದೇಹ, ಕೋರಿಕೆ, ಮೊದಲಾದವನ್ನು ಸೂಚಿಸುವಲ್ಲಿ ಪ್ರಯೋಗ.

  1. (ಸಂಭವ ಸೂಚಿಸುವಾಗ): it may be true ಅದು ನಿಜವಿದ್ದೀತು; ಅದು ನಿಜವಿರಬಹುದು (ಆದರೆ ಹಾಗಿರಲು ಸಾಧ್ಯವಿಲ್ಲ). it may not be ಅದು ಹಾಗಿರಲಾರದು (ಪ್ರಾಯಶಃ ಹಾಗಿಲ್ಲ).
  2. (ಅನುಜ್ಞೆ ಸೂಚಿಸುವಲ್ಲಿ): you may go ನೀನು ಹೋಗಬಹುದು. you may call at the bank ನೀನು ಬ್ಯಾಂಕಿನ ಬಳಿ ಹೋಗು (ಎಂದು ನನ್ನ ಸೂಚನೆ). you might have offered help ನೀನು ಸಹಾಯ ಮಾಡಬಹುದಾಗಿತ್ತು (ಆದರೆ ಮಾಡಲಿಲ್ಲ).
  3. (ಆಶಯ ಮೊದಲಾದವನ್ನು ಸೂಚಿಸುವಲ್ಲಿ): I hope he may succeed ಅವನು ಜಯಿಸಲೆಂದು ಯಾ ಅವನಿಗೆ ಜಯವಾಗಲೆಂದು ಆಶಿಸುತ್ತೇನೆ, ನಂಬುತ್ತೇನೆ. may you live to repent it ನೀನು ಅದಕ್ಕಾಗಿ ಪಶ್ಚಾತ್ತಾಪಡುವಂತಾಗಲಿ.
  4. (ಸಂದೇಹ, ವ್ಯಂಗ್ಯ, ಅನಿಶ್ಚಯ, ಮೊದಲಾದವನ್ನು ಸೂಚಿಸುವ ಪ್ರಶ್ನಾರ್ಥಕ ವಾಕ್ಯಗಳಲ್ಲಿ); who may you be? ನೀನು ಯಾರಾಗಿರಬಹುದು?
ಪದಗುಚ್ಛ
  1. be that as it may ಅದು ಹೇಗಾದರೂ, ಹೇಗೆ ಬೇಕಾದರೂ ಇರಲಿ; ಅದು ಹಾಗಿರಬಹುದು, ಇಲ್ಲದಿರಬಹುದು (ಬೇರೆ ಅಂಶಗಳು ಇವೆಯೆಂಬುದರ ಸೂಚನೆ).
  2. might-have-been ಸಂಭವ; ಆಗಬಹುದಾಗಿದ್ದುದು.
  3. that is as may be = ಪದಗುಚ್ಛ\((1)\).