See also 2shape
1shape ಷೇಪ್‍
ಕ್ರಿಯಾಪದ

(ಪ್ರಾಚೀನ ಪ್ರಯೋಗ, ಭೂತಕೃದಂತ shapen).

ಸಕರ್ಮಕ ಕ್ರಿಯಾಪದ
  1. ಸೃಷ್ಟಿಸು; ನಿರ್ಮಿಸು; ರೂಪಿಸು; ರಚಿಸು.
  2. ರೂಪಿಸು; ರೂಪಕೊಡು; ನಿರ್ದಿಷ್ಟ ರೂಪಾಕೃತಿ ಕೊಡು; ಬೇಕಾದ ರೂಪಕ್ಕೆ ಯಾ ಆಕಾರಕ್ಕೆ ತರು.
  3. ಹೊಂದಿಸು; ಹೊಂದಾವಣೆಗೆ ತರು; ಇನ್ನೊಂದಕ್ಕೆ ಹೊಂದುವಂತೆ ಮಾಡು.
  4. ಯೋಜಿಸು; ಚಿಂತಿಸು; ಕಲ್ಪಿಸು; ಉಪಾಯ, ವಿಧಾನ – ಯೋಚಿಸಿ ಏರ್ಪಾಡು ಮಾಡು.
  5. (ತನ್ನ ಜೀವನ, ತಾನು ಅನುಸರಿಸಬೇಕಾದ ಮಾರ್ಗ, ಮೊದಲಾದವನ್ನು) ನಿರ್ದೇಶಿಸು; ನಿರ್ಧರಿಸು.
  6. (ಮನಸ್ಸಿನಲ್ಲೇ) ಕಲ್ಪಿಸಿಕೊ; ರೂಪಿಸಿಕೊ; ಚಿತ್ರಿಸಿಕೊ.
ಅಕರ್ಮಕ ಕ್ರಿಯಾಪದ
  1. (ಯಾವುದೇ) ರೂಪ ತಾಳು; ಆಕಾರ – ಪಡೆ, ಹೊಂದು.
  2. ಮುನ್‍ಸೂಚಿಸು; ಮುಂದೆ ತಾಳುವ ರೂಪದ ಯಾ ಬೆಳವಣಿಗೆಯ ಕುರುಹನ್ನು ಮುಂದಾಗಿ ಸೂಚಿಸು.
ಪದಗುಚ್ಛ
  1. shape up
    1. (ನಿರ್ದಿಷ್ಟ) ರೂಪ – ತಳೆ, ತಾಳು, ಹೊಂದು.
    2. ಆಶಾದಾಯಕವಾಗಿರು; ಭರವಸೆ ತೋರಿಸು; ಒಳ್ಳೆಯ ಪ್ರಗತಿ – ಸಾಧಿಸು, ತೋರಿಸು.
  2. shape up well ಆಶಾದಾಯಕ ವಾಗಿರು; ಒಳ್ಳೆಯ ಸ್ಥಿತಿಗೆ ಬರುವ ಸೂಚನೆ ಕೊಡು, ತೋರಿಸು.