See also 1seed
2seed ಸೀಡ್‍
ಸಕರ್ಮಕ ಕ್ರಿಯಾಪದ
  1. ಬೀ(ವನ್ನು) – ನೆಡು, ಬಿತ್ತು, ನಾಟು, ಹಾಕು, ಹುಗಿ.
  2. ಬೀ(ವನ್ನು) ಚೆಲ್ಲು, ಎರಚು.
  3. (ಬೀಜವನ್ನು ಚೆಲ್ಲಿದಂತೆ, ಎರಚಿದಂತೆ, ಯಾವುದನ್ನೇ) ಚೆಲ್ಲು; ಎರಚು.
  4. (ಸ್ಫಟಿಕೀಕರಣ ವನ್ನು ಉಂಟುಮಾಡುವುದಕ್ಕಾಗಿ, ದ್ರಾವಣದಲ್ಲಿ) ಹರಳನ್ನು ಯಾ ಯಾವುದೇ ಕಣವನ್ನು – ಇಡು, ಹಾಕು.
  5. (ಮುಖ್ಯವಾಗಿ ಮೋಡ ಕರಗಿ ಮಳೆ ಬೀಳುವಂತೆ ಮಾಡಲು, ಮೋಡದ ರಾಶಿಗೆ) ಜಲಕಣಗಳನ್ನು ಎರಚು, ಸಿಂಪಡಿಸು.
  6. (ಹಣ್ಣು ಮೊದಲಾದವುಗಳಿಂದ) ಬೀಜವನ್ನು – ತೆಗೆ(ದು ಹಾಕು), ಬಿಡಿಸು.
  7. (ಆಟದ ಪಂದ್ಯಗಳಲ್ಲಿ)
    1. ಕ್ರಮಾಂಕ ನಿರ್ಧರಿಸು; (ಪ್ರಬಲ ಸ್ಪರ್ಧಿಗಳು ಮೊದಲಿನ ಸುತ್ತುಗಳಲ್ಲಿ ಎದುರಾಗದಂತೆ ಪಂದ್ಯಾವಳಿಯ ಸೂಳುಪಟ್ಟಿಯಲ್ಲಿ) ಬಲಿಷ್ಠ ಸ್ಪರ್ಧಿಗೆ ಸ್ಥಾನವೊಂದನ್ನು ನೀಡು, ನಿಗದಿಪಡಿಸು: is seeded seventh ಏಳನೆಯ ಕ್ರಮಾಂಕ ಸ್ಥಾನ ಪಡೆದಿದ್ದಾನೆ.
    2. ಈ ರೀತಿ (ಪಂದ್ಯಾವಳಿಯ ಅನುಕ್ರಮವನ್ನು) ಏರ್ಪಡಿಸು; ಕ್ರಮಾಂಕ ವ್ಯವಸ್ಥೆ ಮಾಡು.
ಅಕರ್ಮಕ ಕ್ರಿಯಾಪದ
  1. ಬೀಜ – ಬಿಡು, ಉತ್ಪಾದಿಸು.
  2. ಬೀಜ – ಬಿಡು, ಉದುರು. ಬೀಜ ಬಿತ್ತು; ಬಿತ್ತನೆ ಮಾಡು.
  3. = 1seed ಪದಗುಚ್ಛ(1a).