See also 1right  2right  3right  5right
4right ರೈಟ್‍
ಕ್ರಿಯಾವಿಶೇಷಣ
  1. ನೇರವಾಗಿ; ನೆಟ್ಟಗೆ: go right on ನೇರವಾಗಿ ಮುಂದೆ ಹೋಗು. went right at him ಅವನ ಮೇಲೆ ನೆಟ್ಟಗೆ ಕೈಮಾಡಿದ.
  2. ಸರ್ರನೆ; ಕೂಡಲೇ; ತಡಮಾಡದೆ: it sank right to the bottom ಸರ್ರನೆ ತಳಕ್ಕೆ ಮುಳುಗಿತು.
  3. ಪೂರ್ತಿಯಾಗಿ; ಪೂರಾ: he turned right round ಪೂರ್ತಿಯಾಗಿ ಸುತ್ತು ತಿರುಗಿದನು.
  4. ಸರಿಯಾಗಿ: right in the middle ಸರಿಯಾಗಿ ಮಧ್ಯದಲ್ಲಿ.
  5. (ಪ್ರಾಚೀನ ಪ್ರಯೋಗ) ಬಹಳ; ಬಹು; ತುಂಬ; ಅತ್ಯಂತ: know right well ಬಹಳ ಚೆನ್ನಾಗಿ ಗೊತ್ತು. was right glad to see ನೋಡಲು ಅತ್ಯಂತ ಸಂತೋಷವಾಯಿತು.
  6. ನ್ಯಾಯವಾಗಿ; ಯುಕ್ತವಾಗಿ: whether they act right or wrong ಅವರು ನ್ಯಾಯವಾಗಿ ಅಥವ ಅನ್ಯಾಯವಾಗಿ ನಡೆದುಕೊಳ್ಳುವರೋ.
  7. ತಕ್ಕಂತೆ; ಸರಿಯಾಗಿ; ತಪ್ಪಿಲ್ಲದೆ: do the sum right ಲೆಕ್ಕವನ್ನು ಸರಿಯಾಗಿ ಮಾಡು.
  8. ನಿಜವಾಗಿ; ಸತ್ಯವಾಗಿ: if I remember right ನನ್ನ ನೆನಪು ನಿಜವಾಗಿದ್ದರೆ.
  9. ತೃಪ್ತಿಕರವಾಗಿ: nothing goes right with me ನನ್ನ ವಿಷಯ ಯಾವುದೂ ತೃಪ್ತಿಕರವಾಗಿ ಸಾಗುತ್ತಿಲ್ಲ.
  10. ಬಲಗಡೆ: looks neither right nor left ಬಲಗಡೆಗಾಗಲಿ ಎಡಗಡೆಗಾಗಲಿ ನೋಡುವುದಿಲ್ಲ.
ಪದಗುಚ್ಛ
  1. eyes right! (ಸೈನಿಕರು ಸಾಲಾಗಿ ನಿಲ್ಲುವಾಗ ಕೊಡುವ ಆಜ್ಞೆ) ಕಣ್ಣು ಬಲಗಡೆಗೆ (ತಿರುಗಿಸಿ).
  2. right away (or ಅಮೆರಿಕನ್‍ ಪ್ರಯೋಗ off) ಕೂಡಲೇ; ಒಡನೆಯೇ; ತತ್‍ಕ್ಷಣವೇ; ಈಗಿಂದೀಗಲೇ.
  3. right on! ಉತ್ಸಾಹಪೂರ್ಣ ಒಪ್ಪಿಗೆ, ಉತ್ತೇಜನ ನೀಡುವಲ್ಲಿ ಪ್ರಯೋಗ
  4. right, left and center ಎಲ್ಲಾ ಕಡೆಯಿಂದ; ಸುತ್ತಲೂ.