See also 2move
1move
ನಾಮವಾಚಕ
  1. ಚಲನೆ; ಒಂದು ಜಾಗದಿಂದ ಇನ್ನೊಂದಕ್ಕೆ ಚಲಿಸುವುದು, ಹೋಗುವುದು.
  2. (ವಸತಿ, ವ್ಯಾಪಾರ ಸ್ಥಳ, ಮೊದಲಾದವುಗಳ) ಸ್ಥಳ ಬದಲಾವಣೆ.
  3. (ಯಾವುದೇ ಕಾರ್ಯ ಯಾ ಉದ್ೇಶದ ಸಾಧನೆಗಾಗಿ) (ಇಟ್ಟ) ಹೆಜ್ಜೆ; (ಮಾಡಿದ) ಪ್ರಯತ್ನ.
  4. ಚಲನೆ; (ಚದುರಂಗ ಮತ್ತು ಇತರ ಆಟಗಳಲ್ಲಿ) ಕಾಯಿ ನಡೆಸುವುದು.
  5. (ಆಟಗಾರನ) ಕಾಯಿ ನಡೆಸುವ ಸರದಿ; ಚಲನೆ ಸರದಿ.
ಪದಗುಚ್ಛ
  1. get a move on (ಆಡುಮಾತು)
    1. ಅವಸರ ಮಾಡು; ತ್ವರೆ ಮಾಡು.
    2. ಚುರುಕಾಗು; ಚಟುವಟಿಕೆಯಿಂದ ಕೆಲಸ ಮಾಡು.
    3. ಶುರು ಮಾಡು; ಪ್ರಾರಂಭಿಸು.
  2. make a move
    1. ಹೊರಡು (ಮುಖ್ಯವಾಗಿ ಊಟದ ಮೇಜು ಮೊದಲಾದವನ್ನು ಬಿಟ್ಟು ಎದ್ದು ಹೊರಡು).
    2. ಕಾರ್ಯ ಆರಂಭಿಸು; ಕಾರ್ಯಪ್ರವೃತ್ತನಾಗು.
  3. on the move
    1. ಸುತ್ತಾಡುತ್ತಾ; ಸಂಚರಿಸುತ್ತ; ಪ್ರಯಾಣ ಮಾಡುತ್ತ; ಸ್ಥಳದಿಂದ ಸ್ಥಳಕ್ಕೆ ಹೋಗುತ್ತಾ.
    2. ಕೆಲಸ ಮಾಡುತ್ತಾ; ಕಾರ್ಯಪ್ರವೃತ್ತವಾಗಿ: on the move from morning till night ಹಗಲಿಡೀ, ದಿನವೆಲ್ಲಾ, ಬೆಳಗಿನಿಂದ ರಾತ್ರಿಯವರೆಗೂ – ಕೆಲಸ ಮಾಡುತ್ತಿರುವ.
    3. ಮುಂದುವರಿಯುತ್ತಿರುವ; ಮುನ್ನಡೆಯ; ಪ್ರಗತಿ ಹೊಂದುತ್ತಿರುವ; ಅಭಿವೃದ್ಧಿಯಾಗುತ್ತಿರುವ: an industry that is on the move ಅಭಿವೃದ್ಧಿಯಾಗುತ್ತಿರುವ ಕೈಗಾರಿಕೆ, ಉದ್ಯಮ.