See also 1hound
2hound ಹೌಂಡ್‍
ಸಕರ್ಮಕ ಕ್ರಿಯಾಪದ
  1. (ಬೇಟೆನಾಯಿಯೊಡನೆ ಯಾ ಅದರೊಡನೆ ಹೇಗೋ ಹಾಗೆ) ಬೆನ್ನಟ್ಟು ಯಾ ಬೇಟೆಯಾಡು.
  2. (ಬೇಟೆ ನಾಯಿಯನ್ನು ಯಾ ಬೇಟೆ ಮೊದಲಾದವುಗಳ ಮೇಲೆ) ಛೂಬಿಡು.
  3. (ರೂಪಕವಾಗಿ) (ವ್ಯಕ್ತಿಯನ್ನು) ಒಬ್ಬನ ಯಾ ಒಂದರ ಮೇಲೆ ಛೂ ಬಿಡು; ಒಬ್ಬನನ್ನು ಯಾ ಒಂದನ್ನು ಅಟ್ಟಿಸಿಕೊಂಡು ಹೋಗುವಂತೆ ಮಾಡು: hound the rabble upon them as tyrants ಪ್ರಜಾಪೀಡಕರು ಎಂಬುದಕ್ಕಾಗಿ ಅವರ ಮೇಲೆ ಪುಂಡ ಪೋಕರಿಗಳನ್ನು ಎತ್ತಿಕಟ್ಟು.
  4. (ವ್ಯಕ್ತಿಯನ್ನು ಒಬ್ಬನ) ಮೇಲೆ – ಬೀಳಿಸು, ಎರಗಿಸು, ಎತ್ತಿಕಟ್ಟು.
  5. ಕಾಡು; ವಿರಾಮ ಕೊಡದೆ – ಬೆನ್ನು ಹತ್ತು, ಹಿಂಬಾಲಿಸು, ಪೀಡಿಸು: hounded by the creditors ಪುರಸೊತ್ತು ಕೊಡದ ಸಾಲಗಾರರ ತಗಾದೆಗೊಳಗಾಗಿ.