See also 1hand
2hand ಹ್ಯಾಂಡ್‍
ಸಕರ್ಮಕ ಕ್ರಿಯಾಪದ
  1. (ಗಾಡಿ ಮೊದಲಾದವನ್ನು ಏರಲು, ಇಳಿಯಲು ಒಬ್ಬನಿಗೆ) ಕೈನೀಡು; ಕೈನೀಡಿ ನೆರವಾಗು; ಕೈಚಾಚಿ ಸಹಾಯ ಮಾಡು.
  2. (ನೌಕಾಯಾನ) ಹಾಯಿಪಟವನ್ನು ಇಳಿಸು, ಸುತ್ತು.
  3. (ಕೈಯಿಂದ ಯಾ ಬೇರೆ ರೀತಿಯಲ್ಲಿ) ಕೊಡು; ಒಪ್ಪಿಸು; ಹಸ್ತಾಂತರಿಸು; ವರ್ಗಾಯಿಸು: hand over to person ಯಾರಿಗಾದರೂ ವಹಿಸಿಕೊಡು. hand down (or on) to succeeding generations ಮುಂದಿನ ಪೀಳಿಗೆಗಳಿಗೆ ಒಪ್ಪಿಸಿಕೊಡು, ಕೊಟ್ಟು ಹೋಗು. hand in at an office ಕಚೇರಿಗೆ ತಲುಪಿಸು, ಒಪ್ಪಿಸು, ಕೊಡು.
  4. (ಊಟ ಮಾಡುವಾಗ) ತಿನಿಸನ್ನು ಇನ್ನೊಬ್ಬರಿಗೆ ಎತ್ತಿಕೊಡು.
ನುಡಿಗಟ್ಟು
  1. hand it to (ಆಡುಮಾತು) (ಒಬ್ಬ ವ್ಯಕ್ತಿಯ) ಯೋಗ್ಯತೆಯನ್ನು, ಗುಣವನ್ನು, ಮೇಲುಗೈತನವನ್ನು – ಒಪ್ಪಿಕೊ.
  2. hand off (ರಗ್ಬಿ ಕಾಲ್ಚೆಂಡಾಟ) ಕೈಯಿಂದ (ಎದುರಾಳಿಯನ್ನು) ತಳ್ಳಿಬಿಡು, ನೂಕಿಬಿಡು.