See also 1gear
2gear ಗಿಅರ್‍
ಸಕರ್ಮಕ ಕ್ರಿಯಾಪದ
  1. (ಭಾರ ಎಳೆಯುವ ಪ್ರಾಣಿಗೆ) ಜತ್ತಿಗೆ ಹಾಕು; ಸಜ್ಜು ಸರಂಜಾಮು ತೊಡಿಸು, ಅಳವಡಿಸು.
  2. (ಯಂತ್ರಕ್ಕೆ) ಚಾಲಕದೊಡನೆ ಕೂಡಿಸು, ಸಂಬಂಧ ಉಂಟುಮಾಡು.
  3. (ಯಂತ್ರಕ್ಕೆ) ಚಾಲಕ ಹವಣಿಸು; ಗೇರು ಜೋಡಿಸು.
  4. (ಒಂದು ಕೈಗಾರಿಕೆಯನ್ನೋ ಕಾರ್ಖಾನೆಯನ್ನೋ ಇನ್ನೊಂದು ಕೈಗಾರಿಕೆಗೆ ಯಾ ಕಾರ್ಖಾನೆಗೆ ಯಾ ಕಾರ್ಯನೀತಿಗೆ) ಅಧೀನಗೊಳಿಸು; ಅನುಬಂಧಿಯನ್ನಾಗಿ ಮಾಡು.
  5. (ಹಲ್ಲುಚಕ್ರದ ವಿಷಯದಲ್ಲಿ ಯಂತ್ರಭಾಗವನ್ನು) ಹಲ್ಲುಚಕ್ರದ ಮೇಲೆ ಸರಿಯಾಗಿ ಕೂರುವಂತೆ ಮಾಡು, ಜೋಡಿಸು.
  6. (ಪರಿಸ್ಥಿತಿ ಮೊದಲಾದವುಗಳಿಗೆ) ಸರಿ ಹೊಂದಿಸು: gear the economy to wartime requirements ಯುದ್ಧಕಾಲದ ಅಗತ್ಯಗಳಿಗೆ ಅನುಗುಣವಾಗಿ ಅರ್ಥವ್ಯವಸ್ಥೆಯನ್ನು ಸರಿಹೊಂದಿಸು.
ಅಕರ್ಮಕ ಕ್ರಿಯಾಪದ
  1. (ಯಂತ್ರಭಾಗ) ಹಲ್ಲುಚಕ್ರದ ಮೇಲೆ ಸರಿಯಾಗಿ ಕೂರು.
  2. ಸುಗಮವಾಗಿ ಕೆಲಸ ಮಾಡು; ಹೊಂದಿಕೊಂಡು ಕೆಲಸಮಾಡು.
ಪದಗುಚ್ಛ
  1. gear down ವೇಗವನ್ನು ತಗ್ಗಿಸು.
  2. gear up ವೇಗ ಹೆಚ್ಚಿಸು.