See also 1gauntlet
2gauntlet ಗಾಂಟ್‍ಲಿಟ್‍
ನಾಮವಾಚಕ
  1. ತಪ್ಪಿತಸ್ಥ ವಿದ್ಯಾರ್ಥಿಗೆ ಶಾಲೆಯಲ್ಲಿ, ತಪ್ಪಿತಸ್ಥ ಸೈನಿಕನಿಗೆ ಭೂ ಯಾ ನೌಕಾ ಸೇನೆಯಲ್ಲಿ ವಿಧಿಸುವ, ಎದುರು ಬದುರು ಸಾಲಿನಲ್ಲಿ ದೊಣ್ಣೆ ಹಿಡಿದು ನಿಂತಿರುವವರ ಏಟುಗಳಿಗೆ ಗುರಿಯಾಗಿ, ನಡುವೆ ಹಾದುಹೋಗುವ ಒಂದು ಶಿಕ್ಷೆ.
  2. ವಿಷಮ ಪರೀಕ್ಷೆ; ತೀವ್ರ ಪರಿಸ್ಥಿತಿ.
ಪದಗುಚ್ಛ

run the gauntlet

  1. ಏಟಿನ ಹಾದಿಯಲ್ಲಿ ಸಾಗು; ದಂಡನಪಥವನ್ನು ಹಾಯು; ಸೇನೆಯ, ನೌಕಾಸೇನೆಯ, ವಿದ್ಯಾಶಾಲೆಯ ಶಿಕ್ಷೆ ಅನುಭವಿಸಲು ಇಕ್ಕೆಲಗಳಿಂದಲೂ ದೊಣ್ಣೆಗಳು, ಹಗ್ಗಗಳು, ಮೊದಲಾದವುಗಳಿಂದ ಬಡಿಯುವ ಜನಗಳ ಎರಡು ಸಾಲುಗಳ ನಡುವೆ – ನಡೆ, ಸಾಗು, ಓಡು.
  2. (ರೂಪಕವಾಗಿ) ಇಕ್ಕುಳಕ್ಕೆ ಸಿಕ್ಕು; ಎರಡೂ ಕಡೆಯ ಏಟಿಗೆ, ಹೊಡೆತಕ್ಕೆ ಸಿಕ್ಕು; ಉಭಯತ್ರ ಟೀಕೆಗೆ, ಖಂಡನೆಗೆ, ಅಪಾಯಕ್ಕೆ ಸಿಕ್ಕಿಕೊ; ಉಭಯಾಘಾತಕ್ಕೆ ಗುರಿಯಾಗು.