See also 1fence
2fence ಹೆನ್ಸ್‍
ಸಕರ್ಮಕ ಕ್ರಿಯಾಪದ
  1. ಮರೆ ಮಾಡು; ಆಶ್ರಯ ಕೊಡು; ರಕ್ಷಣೆನೀಡು.
  2. ನಿವಾರಿಸು; ದೂರಮಾಡು; ಹತ್ತಿರ ಸೇರದಂತೆ ಮಾಡು; ಆಚೆಗೆ ಅಟ್ಟು; ದೂರ ಓಡಿಸು.
  3. ಬೇಲಿಹಾಕು; ಬೇಲಿಯಂತೆ ಆವರಣಹಾಕು; ಕೋಟೆ ಕಟ್ಟು.
  4. ಕಳವು ಮಾಲಿನ ವ್ಯಾಪಾರ ಮಾಡು ( ಅಕರ್ಮಕ ಕ್ರಿಯಾಪದ ಸಹ).
ಅಕರ್ಮಕ ಕ್ರಿಯಾಪದ
  1. ಕತ್ತಿವರಿಸೆ ಅಭ್ಯಾಸಮಾಡು; ಖಡ್ಗವಿದ್ಯೆ ಕಲಿ.
  2. (ಕುದುರೆಯ ವಿಷಯದಲ್ಲಿ) ಬೇಲಿ ಜಿಗಿ, ಹಾರು.
ಪದಗುಚ್ಛ

fenced cities ಕೋಟೆಯೊಳಗಣ ನಗರಗಳು; ಸುರಕ್ಷಿತ ನಗರಗಳು.

ನುಡಿಗಟ್ಟು

fence with question or questioner ಪ್ರಶ್ನೆಗೆ ಯಾ ಪ್ರಶ್ನೆ ಕೇಳುವವನಿಗೆ ಉತ್ತರ ಕೊಡದೆ ನುಣುಚಿಕೊ, ತಪ್ಪಿಸಿಕೊ, ಜಾರಿಕೊ.