See also 1die
2die ಡೈ
ಅಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ dying ಉಚ್ಚಾರಣೆ ಡೈಇಂಗ್‍, ಭೂತರೂಪ ಮತ್ತು ಭೂತಕೃದಂತ died).
  1. ಸಾಯಿ; ಮಡಿ; ಅಳಿ; ದೇಹ ಬಿಡು; ಪ್ರಾಣ ಬಿಡು; ಪ್ರಾಣ – ತೆರು, ಕೊಡು; ಕಾಲವಾಗು; ತೀರಿಕೊಳ್ಳು; ತೀರಿಕೊ; ಮೃತನಾಗು; ಮರಣ ಹೊಂದು; ನಿಧನ ಹೊಂದು.
  2. (ಬೈಬ್‍ಲ್‍) ಸಂಕಟ ಪಡು; ಮರಣಯಾತನೆ ಅನುಭವಿಸು; ಸಾವಿನಲ್ಲಿ ಹೇಗೋ ಹಾಗೆ ಪರಿತಪಿಸು: I die daily ನಾನು ಪ್ರತಿದಿನವೂ ಮರಣಯಾತನೆ ಅನುಭವಿಸುತ್ತೇನೆ.
  3. ಆತ್ಮ ನಾಶ ಹೊಂದು.
  4. (ಸಸ್ಯ ಮೊದಲಾದವುಗಳ ವಿಷಯದಲ್ಲಿ) ಅಳಿ; ಬಾಡಿಹೋಗು; ಬತ್ತಿ ಹೋಗು; ಒಣಗಿ ಹೋಗು; ಸತ್ತು ಹೋಗು; ಜೀವಸತ್ತ್ವ ಕಳೆದುಕೊ: die back ತುದಿಯಿಂದ ಬಾಡು; ಸಸಿ ಯಾ ಮರವು (ಮುಖ್ಯವಾಗಿ ರೋಗದಿಂದಾಗಿ) ತುದಿಯಿಂದ ಆರಂಭಿಸಿ ಬೇರಿನವರೆಗೆ ಹಿಮ್ಮುಖವಾಗಿ ಸಾಯುವುದು.
  5. (ಜ್ವಾಲೆ) ನಂದು; ನಂದಿಹೋಗು; ಆರಿಹೋಗು.
  6. (ಶಬ್ದ) ನಿಲ್ಲು; ಅಡಗು; ಕ್ಷೀಣವಾಗು; ಅಡಗಿಹೋಗು.
  7. (ಕೀರ್ತಿ ಮೊದಲಾದವು) ಕೊನೆಗಾಣು; ಅಂತ್ಯವಾಗು; ಮುಗಿ; ಕಂದು; ಮಾಸಿಹೋಗು; ಕಣ್ಮರೆಯಾಗು; ಮರೆತುಹೋಗು; ಅಳಿಸಿಹೋಗು; ನೆನಪಿಲ್ಲದಂತಾಗು.
  8. ನಿಂತುಹೋಗು; ಸ್ತಬ್ಧವಾಗು; ನಿಶ್ಚಲವಾಗು; ಸ್ಥಗಿತಗೊಳ್ಳು: the motor died ಮೋಟಾರು ಯಂತ್ರ ನಿಂತು ಹೋಯಿತು.
ಪದಗುಚ್ಛ
  1. die a beggar ಭಿಕಾರಿಯಾಗಿ ಸಾಯಿ.
  2. die a glorious death ಘನವಾದ ಸಾವುಪಡೆ.
  3. die a martyr ಹುತಾತ್ಮನಾಗಿ ಮಡಿ.
  4. die (of) laughing ನಕ್ಕುನಕ್ಕು ಸಾಯಿ; ಹೊಟ್ಟೆ ಹುಣ್ಣಾಗುವಷ್ಟು ನಗು; ಸುಸ್ತಾಗುವಷ್ಟು ನಗು.
  5. die the death
    1. (ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) ಮರಣದಂಡನೆಗೆ ಗುರಿಯಾಗು; ಕೊಲೆಗೀಡಾಗು; ಕೊಲ್ಲಲ್ಪಡು.
    2. ಸಾಯು; ಸಾವಿಗೀಡಾಗು.
ನುಡಿಗಟ್ಟು
  1. be dying for (ಮಾಡಲು) ತುಂಬ ತವಕಪಡು; ಬಹು ಕಾತರದಿಂದಿರು.
  2. die a dog’s death ನಾಯಿಯಂತೆ ಸಾಯಿ; ದುಸ್ಥಿತಿಯಲ್ಲಿ ಸಾಯಿ.
  3. die down ಕ್ರಮೇಣ ಅಡಗು; ಕ್ರಮವಾಗಿ – ತಗ್ಗು, ನಿಶ್ಚಲವಾಗಿ, ಜಡವಾಗು.
  4. die game ಹೋರಾಡುತ್ತಾ ಸಾಯಿ; ಧೀರತನದಿಂದ ಮಡಿ; ಧೈರ್ಯವಾಗಿ ಸಾವನ್ನೆದುರಿಸು.
  5. die in harness ಕೆಲಸ ಮಾಡುತ್ತಿದ್ದಾಗ ಸಾಯಿ; ಉದ್ಯೋಗನಿರತನಾಗಿರುವಾಗ ಮಡಿ.
  6. die in one’s bed ಸ್ವಾಭಾವಿಕ ಮರಣ ಪಡೆ; ಹಾಸಿಗೆಯಲ್ಲಿ ಸಾಯಿ; ವಯಸ್ಸಾಗಿ ಯಾ ರೋಗ ಬಂದು ಸಾಯಿ.
  7. die in one’s boots (or shoes) ದುರ್ಮರಣ ಹೊಂದು; ಹಿಂಸೆಗೆ ಗುರಿಯಾಗಿ ಸಾಯಿ.
  8. die in the last ditch (ಯಾವುದಾದರೊಂದನ್ನು ರಕ್ಷಿಸಲು ಆಶೆ ಬಿಟ್ಟು)ಕೊನೆಯವರೆಗೆ ಹೋರಾಡುತ್ತಾ ಸಾಯಿ; ಕಟ್ಟ ಕಡೆಯವರೆಗೂ ಹೋರಾಡಿ ಮಡಿ.
  9. die off (ಗುಂಪಿನ ವಿಷಯದಲ್ಲಿ) ಒಂದೊಂದಾಗಿ ಅಳಿ; ಒಂದಾದ ಮೇಲೆ ಒಂದು ಸಾಯಿ: the leaves of this plant are dying off ಈ ಗಿಡದ ಎಲೆಗಳು ಒಂದಾದಮೇಲೊಂದು ಸಾಯುತ್ತಿವೆ.
  10. die on the vine ವಿಫಲಗೊಳ್ಳು; ಅಯಶಸ್ವಿಯಾಗು; ನಿಷ್ಫಲವಾಗು; ಉದ್ದೇಶಿತ ಪರಿಣಾಮನೀಡದಿರು; ಇಚ್ಛಿತ ಫಲಿತಾಂಶ ಉಂಟಾಗದಿರು: he had sound ideas but they usually died on the vine ಅವನ ಅಲೋಚನೆಗಳು ಚೆನ್ನಾಗಿದ್ದುವು, ಆದರೆ ಅವು ಸಾಮಾನ್ಯವಾಗಿ ವಿಫಲಗೊಂಡವು.
  11. die out ಸಾಯು; ಕೊನೆಗೊಳ್ಳು; ಅಳಿ; ನಿರ್ನಾಮವಾಗು: many old customs are gradually dying out ಕೆಲವು ಹಳೆಯ ಸಂಪ್ರದಾಯಗಳು ಕ್ರಮೇಣ ಅಳಿದುಹೋಗುತ್ತಿವೆ.
  12. dies with person ವ್ಯಕ್ತಿಯೊಂದಿಗೆ ಅಳಿಯುತ್ತದೆ; ಅದನ್ನು ವ್ಯಕ್ತಿ ಪ್ರಕಟಿಸದೆ ಸಾಯುತ್ತಾನೆ. secret died with him ರಹಸ್ಯ ಅವನೊಂದಿಗೆ ಅಳಿಯಿತು, ಕಣ್ಮರೆಯಾಯಿತು.
  13. die unto (ಪಾಪದ) ದಾಸ್ಯದಿಂದ ತಪ್ಪಿಸಿಕೊ, ಮುಕ್ತನಾಗು.
  14. never say die ಧೈರ್ಯಗೆಡದಿರು; ಎದೆಗುಂದದಿರು; ಹತಾಶನಾಗದಿರು.
  15. be dying of (boredom etc.) (ಬೇಸರ ಮೊದಲಾದವುಗಳಿಂದ) ಬಹಳ ಕಿರಿಕಿರಿಪಡು; ಕ್ಲೇಶಪಡು.
  16. die hard ಸೆಣಸುತ್ತಾ ಮಡಿ; ಹೋರಾಡುತ್ತಾ ಸಾಯು.