See also 2die
1die ಡೈ
ನಾಮವಾಚಕ
(ಬಹುವಚನ dice, dies).
  1. (ಬಹುವಚನ dice) ದಾಳ; ನೆತ್ತ; ಪಗಡೆ ದಾಳ; ಅದೃಷ್ಟವನ್ನೇ ಅವಲಂಬಿಸಿರುವ ಆಟಗಳಲ್ಲಿ ಬಳಸುವ, ಮುಖಗಳ ಮೇಲೆ ಸಾಮಾನ್ಯವಾಗಿ ಒಂದರಿಂದ ಆರರವರೆಗೆ ಚುಕ್ಕೆಗಳುಳ್ಳ, ಸಣ್ಣ ಘನಾಕೃತಿ.
  2. (ಬಹುವಚನ dice) ಪಗಡೆ (ಆಟ); ದಾಳಗಳಿಂದ ಆಡುವ ಆಟ.
  3. (ಬಹುವಚನ dice) ಅಡುಗೆಗೆ ಬಳಸುವ ಘನಾಕಾರದ ಸಣ್ಣಸಣ್ಣ ಮಾಂಸದ ತುಂಡುಗಳು.
  4. (ಬಹುವಚನ dies) (ವಾಸ್ತುಶಿಲ್ಪ) ಗದ್ದಿಗೆ ಕಲ್ಲು; ಸ್ತಂಭಪೀಠ; ಗದ್ದಿಗೆ ಮೊದಲಾದವುಗಳ ಬುಡದಿಂದ ತಳ ಕಪೋತದವರೆಗೆ ಇರುವ ಚದರ ಘನಾಕೃತಿಯ ಭಾಗ.
  5. (ಬಹುವಚನ dies) (ನಾಣ್ಯ, ಪದಕ, ಕಾಗದ, ಮೊದಲಾದವುಗಳ ಮೇಲೆ ಮುದ್ರೆಯೊತ್ತಲು ಲೋಹದಲ್ಲಿ ಕೆತ್ತಿ ಮಾಡಿದ) ಛಾಪ; ಅಚ್ಚು; ಠಸ್ಸೆ; ಮುದ್ರೆ: die sinker ರಸ್ತೆ ಕೆತ್ತನೆಗಾರ.
  6. (ಬಹುವಚನ ದಿಎ) ಅಚ್ಚು; ಹೊರಚೆಲ್ಲಿದ ಲೋಹ, ದಾರ, ಮೊದಲಾದವಕ್ಕೆ ಆಕಾರ ಕೊಡಲು ಬಳಸುವ ಟೊಳ್ಳಾದ ಅಚ್ಚು, ಮಾಲು.
ನುಡಿಗಟ್ಟು
  1. as stragiht (or true) as a die (ದಾಳದಂತೆ) ನಿಖರವಾಗಿ; ಯಥಾರ್ಥವಾಗಿ; ಪೂರ್ಣ ನಿಷ್ಠೆಯಿಂದ; ಪ್ರಾಮಾಣಿಕವಾಗಿ.
  2. no dice (ಆಡುಮಾತು) ಏನೂ ಪ್ರಯೋಜನವಿಲ್ಲ; ನಿಷ್ಪ್ರಯೋಜಕ; ವ್ಯರ್ಥ.
  3. the die is cast ದಾಳ ಬಿಟ್ಟು ಆಯಿತು; ಹಿಂದಕ್ಕೆ ಬರುವಂತಿಲ್ಲ; ಹೆಜ್ಜೆ ಇಟ್ಟಾಯಿತು.
  4. up on the die ಪಣವಾಗಿ ಒಡ್ಡಿ.