See also 1date  2date
3date ಡೇಟ್‍
ಸಕರ್ಮಕ ಕ್ರಿಯಾಪದ
  1. (ಪತ್ರ ಮೊದಲಾದವಕ್ಕೆ) ತಾರೀಖು ಹಾಕು; ತೇದಿ ಬರೆ.
  2. (ಒಂದು ಘಟನೆಯ, ವಸ್ತುವಿನ) ಕಾಲನಿರ್ದೇಶ ಮಾಡು; ಕಾಲ – ಹೇಳು, ಸೂಚಿಸು: pottery dated to 1500 B.C. ಕ್ರಿಸ್ತಪೂರ್ವ 1500 ಕ್ಕೆ ಸೇರಿದ್ದೆಂದು ಕಾಲನಿರ್ದೇಶ ಮಾಡಿದ ಮಣ್ಣಿನ ಪಾತ್ರೆಗಳು.
  3. (ಆಡುಮಾತು) ಹಳೆಯದಾಗಿಸು; ಪ್ರಾಚೀನವಾಗಿಸು; ಗತಕಾಲದ್ದಾಗಿಸು; ಹಿಂದಿನ ಕಾಲಕ್ಕೆ ಸೇರಿಸು: dated fashions ಗತಕಾಲದ ಮಾದರಿಗಳು; ಹಿಂದಿನ ಶೈಲಿಗಳು.
  4. (ಅಮೆರಿಕನ್‍ ಪ್ರಯೋಗ, ಆಡುಮಾತು) (ಗಂಡ ಹೆಣ್ಣುಗಳ ವಿಷಯದಲ್ಲಿ) ಪರಸ್ಪರ ವಿಹಾರಕಾಲ ನಿಶ್ಚಯಿಸು, ಗೊತ್ತುಮಾಡು.
ಅಕರ್ಮಕ ಕ್ರಿಯಾಪದ
  1. ಕಾಲಗಣನೆ ಮಾಡು; ಕಾಲವನ್ನು ಎಣಿಸು, ಗಣಿಸು.
  2. ದಿನಾಂಕ ಹೊಂದಿರು; ತೇದಿಯದಾಗಿರು; ತಾರೀಖನ್ನೊಳಗೊಂಡಿರು.
  3. (ಗೊತ್ತಾದ) ಕಾಲದಿಂದ ಪ್ರಾರಂಭವಾಗು: the Church dated as far back as the 14 th century ಹದಿನಾಲ್ಕನೆಯ ಶತಮಾನದಷ್ಟು ಹಿಂದೆ ಪ್ರಾರಂಭವಾದ ಚರ್ಚು.
  4. (ಕಲೆ, ಶೈಲಿ, ಮೊದಲಾದವು) ಕಾಲದ್ದಾಗಿರು; ಸಮಯದ್ದಾಗಿರು; ಒಂದು ಗೊತ್ತಾದ ಕಾಲಕ್ಕೆ ಯಾ ಹಿಂದಿನ ಕಾಲಕ್ಕೆ ಸಂಬಂಧಪಟ್ಟಂತೆ, ಸೇರಿರುವಂತೆ – ತೋರು, ಕಾಣು.
  5. (ಆಡುಮಾತು) ಹಳೆಯದಾಗು; ಗತಕಾಲದ್ದಾಗು; ಹಿಂದಿನ ಕಾಲಕ್ಕೆ ಸೇರು; ಬಳಕೆ ಯಾ ರೂಢಿ ತಪ್ಪು.
ಪದಗುಚ್ಛ
  1. date back to (ಗ್ರಂಥ, ಕಟ್ಟಡ, ಅಭಿಪ್ರಾಯ, ಮೊದಲಾದವುಗಳ ವಿಷಯದಲ್ಲಿ) ಅಷ್ಟು ಹಿಂದಕ್ಕೆ ಹೋಗು; ಅಷ್ಟು ಹಿಂದಿನ ಕಾಲದ್ದಾಗಿರು; ಹಿಂದಿನ ಆ ಕಾಲದಲ್ಲಿ ಅಸ್ತಿತ್ವ ಪಡೆದಿರು.
  2. date from (ಗ್ರಂಥ ಮೊದಲಾದವುಗಳ ವಿಷಯದಲ್ಲಿ) ಆ ಕಾಲದ್ದಾಗಿರು; ಆ ಕಾಲದಿಂದ ಬಂದಿರು; ಆ ಕಾಲದಿಂದ ಅಸ್ತಿತ್ವದಲ್ಲಿರು.
ನುಡಿಗಟ್ಟು