See also 1better  2better  4better  5better
3better ಬೆಟರ್‍
ನಾಮವಾಚಕ
  1. ಹೆಚ್ಚು ಒಳ್ಳೆಯದು; ಉತ್ತಮ(ವಾದದ್ದು): ಉತ್ತಮಸ್ಥಿತಿಗೆ ಬದಲಾವಣೆ.
  2. (ತನಗಿಂತ) ಹೆಚ್ಚು ಕುಶ(ನಾದವನು); ಕುಶಲತರನಾದವನು: one’s better ಒಬ್ಬನಿಗಿಂತಲೂ ಹೆಚ್ಚು ಕುಶಲ.
  3. (ಬಹುವಚನದಲ್ಲಿ) (ತನಗಿಂತ) ಹಿರಿಯರು; ದೊಡ್ಡವರು; ಮೇಲಿನವರು; ಮೇಲ್ಪಟ್ಟವರು; ಮೇಲಿನ ಅಂತಸ್ತಿನವರು: one’s betters (ಒಬ್ಬನಿಗೆ) ಹಿರಿಯರು; ದೊಡ್ಡವರು.
ಪದಗುಚ್ಛ

and better ಮತ್ತೂ ಹೆಚ್ಚು; ಮೇಲೂ: until nine and better ಒಂಬತ್ತರವರೆಗೂ, ಅದರ ಮೇಲೂ.

ನುಡಿಗಟ್ಟು
  1. get the better of (ಒಬ್ಬನಿಗಿಂತ) ಮೇಲುಗೈಯಾಗು; ಒಬ್ಬನನ್ನು ಮೀರು; ಮೇಲಾಗು; ಸೋಲಿಸು: the boxer got the better of his opponent at last ಜಟ್ಟಿಯು ಕೊನೆಗೆ ತನ್ನ ಎದುರಾಳಿಗಿಂತ ಮೇಲುಗೈಯಾದ, ಎದುರಾಳಿಯನ್ನು ಸೋಲಿಸಿದ.
  2. the better the day, the better the deed (ಸ್ಯಾಬತ್‍ ವ್ರತಭಂಗ ಮಾಡಿದನೆಂಬ ಆಕ್ಷೇಪಕ್ಕೆ ಪ್ರತ್ಯುತ್ತರ ಹೇಳುವಲ್ಲಿ) ದಿನವು ಎಷ್ಟೆಷ್ಟು ಶ್ರೇಷ್ಠವೋ ಮಾಡುವ ಕಾರ್ಯವೂ ಅಷ್ಟಷ್ಟೇ ಶ್ರೇಷ್ಠ.
  3. think (all) the better of (ವಸ್ತುವಿನ, ವ್ಯಕ್ತಿಯ ಬಗ್ಗೆ) ಒಳ್ಳೆಯ ಭಾವನೆ ಹೊಂದಿರು; ಉತ್ತಮ ಅಭಿಪ್ರಾಯ ಹೊಂದಿರು; ಸದಭಿಪ್ರಾಯ ಹೊಂದಿರು.