speak ಸ್ಪೀಕ್‍
ಕ್ರಿಯಾಪದ

(ಭೂತರೂಪ spoke, (ಪ್ರಾಚೀನ ಪ್ರಯೋಗ) spake; ಭೂತಕೃದಂತ spoken,(ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) spoke).

ಸಕರ್ಮಕ ಕ್ರಿಯಾಪದ
  1. (ಮಾತುಗಳನ್ನು, ಶಬ್ದಗಳನ್ನು) ಆಡು; ಹೇಳು; ಎನ್ನು; ಒರೆ; ಉಸುರು; ಉಚ್ಚರಿಸು.
  2. (ತನ್ನ ಅಭಿಪ್ರಾಯವನ್ನು, ನಿಜಾಂಶವನ್ನು) ಹೇಳು; ಹೇಳಿ ತಿಳಿಸು; ಹೊರಗೆಡಹು; ವ್ಯಕ್ತಪಡಿಸು; ಶ್ರುತಪಡಿಸು.
  3. (ಹೆಸರಿಸಿದ) ಭಾಷೆಯನ್ನು ಮಾತಾಡು; ಆಡು: I cannot speak French ನಾನು ಹ್ರೆಂಚ್‍ ಭಾಷೆಯನ್ನು ಆಡಲಾರೆ, ಮಾತಾಡಲಾರೆ.
  4. (ಹಡಗನ್ನು) ಕೂಗಿ ಕರೆದು – ಸಂಕೇತ ಕೊಡು, ಸಮಾಚಾರ ತಿಳಿಸು.
  5. (ಪ್ರಾಚೀನ ಪ್ರಯೋಗ) (ವ್ಯಕ್ತಿಯ ನಡವಳಿಕೆ, ಸಂದರ್ಭ, ಮೊದಲಾದವುಗಳ ವಿಷಯದಲ್ಲಿ) ಇಂಥವನೆಂದು ಯಾ ಇಂಥದೆಂದು – ಹೇಳು, ಸೂಚಿಸು, ತೋರಿಸು, ಪ್ರಕಟಿಸು: his conduct speaks him generous ಅವನು ಉದಾರಿ ಎಂಬಉದನ್ನು ಅವನ ನಡವಳಿಕೆಯೇ ಹೇಳುತ್ತದೆ, ತೋರಿಸುತ್ತದೆ.
  6. (ಪ್ರಾಚೀನ ಪ್ರಯೋಗ) (ಯಾವುದಕ್ಕೇ) ಕುರುಹಾಗಿರು; ಸಾಕ್ಷಿಯಾಗಿರು: the loud laugh that speaks the vacant mind ಚಿಂತೆಯಿಲ್ಲದ, ನಿರಾಳವಾದ, ಮನಸ್ಸಿಗೆ ಕುರುಹಾದ ಕೇಕೆ, ಗಟ್ಟಿಯಾದ ನಗು.
ಅಕರ್ಮಕ ಕ್ರಿಯಾಪದ
  1. ಮಾತಾಡು; ನುಡಿ; ಉಸುರು: he is unable to speak after his stroke ಅವನಿಗೆ ಲಕ್ವಾ ಹೊಡೆದ ಬಳಿಕ, ಪಾರ್ಶ್ವವಾಯು ತಗುಲಿದ ಬಳಿಕ, ಮಾತಾಡಲು ಅಶಕ್ತನಾಗಿದ್ದಾನೆ. I wish you would speak distinctly ನೀನು ಸ್ಪಷ್ಟವಾಗಿ ಮಾತಾಡಿದರೆ ಚೆನ್ನಾಗಿರುತ್ತದೆ. Hello, (this is) Narayan speaking (ಟೆಲಿಹೋನ್‍) ಹಲೋ, ಮಾತನಾಡುತ್ತಿರುವವನು ನಾನು, ನಾರಾಯಣ್‍.
  2. (ವ್ಯಕ್ತಿಯೊಡನೆ) ಮಾತಾಡು; ಸಂಭಾಷಿಸು; ಸಂವಾದ ನಡೆಸು: I will speak to the Director about this matter ಈ ವಿಷಯವಾಗಿ ನಿರ್ದೇಶಕರೊಡನೆ ಮಾತಾಡುತ್ತೇನೆ.
  3. (ಯಾವುದೇ ವಿಷಯವನ್ನು ಬರಹ ಮೊದಲಾದ ರೂಪದಲ್ಲಿ) ಹೇಳು; ತಿಳಿಸು; ಪ್ರಸ್ತಾಪಿಸು: speaks of it in his novel ತನ್ನ ಕಾದಂಬರಿಯಲ್ಲಿ ಅದನ್ನು ಪ್ರಸ್ತಾಪಿಸುತ್ತಾನೆ.
  4. (ಸಭೆ, ನ್ಯಾಯಾಧಿಪತಿ, ನ್ಯಾಯವಿಚಾರಣಾ ಮಂಡಲಿ, ಮೊದಲಾದವುಗಳ ಎದುರಿನಲ್ಲಿ, ಸಮ್ಮುಖದಲ್ಲಿ) ಮಾತಾಡು; ಭಾಷಣ ಮಾಡು: spoke for an hour ಒಂದು ಘಂಟೆಯ ಕಾಲ ಮಾತಾಡಿದ, ಭಾಷಣ ಮಾಡಿದ.
  5. ಯಾವುದರದೇ ಪರವಾಗಿ ಯಾ ಯಾವುದನ್ನೇ ಸಮರ್ಥಿಸುತ್ತಾ ಮಾತಾಡು: I shall speak for the resolution ನಾನು ಮಸೂದೆಯ ಪರವಾಗಿ ಮಾತನಾಡುತ್ತೇನೆ, ಮಸೂದೆಯನ್ನು ಸಮರ್ಥಿಸುತ್ತೇನೆ. he has a good speaking voice ಅವನಿಗೆ ಭಾಷಣಕ್ಕೆ ಅನುಕೂಲವಾದ ಧ್ವನಿ ಇದೆ.
  6. (ಬೇಟೆನಾಯಿಯ ವಿಷಯದಲ್ಲಿ) ಊಳು; ಊಳಿಡು; ಬಗುಳು.
  7. (ಸಂಗೀತ ವಾದ್ಯಗಳ ವಿಷಯದಲ್ಲಿ) ನಾದ ಮಾಡು; ದನಿ ಕೊಡು.
  8. (ಬಂದೂಕು ಮೊದಲಾದವುಗಳ ವಿಷಯದಲ್ಲಿ) ಸದ್ದು ಮಾಡು; ಸದ್ದಾಗು.
  9. (ಆಡುಮಾತು) ತೆಗಳು; ದೂಷಿಸು: spoke to them about their lateness ಅವರ ಛಾನಸದ ಬಗ್ಗೆ ದೂಷಿಸದ.
  10. ಮಾತಿನ ಯಾ ಬರಹದ ಮೂಲಕ (ಬೇರೊಬ್ಬ ವ್ಯಕ್ತಿ ಮೊದಲಾದವರ) ಭಾವನೆ, ಅಭಿಪ್ರಾಯ, ಅನಿಸಿಕೆಗಳನ್ನು – ತಿಳಿಸು, ಹೇಳು, ಅಭಿವ್ಯಕ್ತಿಗೊಳಿಸು, ವ್ಯಕ್ತಪಡಿಸು: speaks for our generation ನಮ್ಮ ತಲೆಮಾರಿನವರ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾನೆ.
  11. (ಕಾವ್ಯಪ್ರಯೋಗ) ಭಾವ ಮೊದಲಾದವನ್ನು ತಿಳಿಸು; ಪ್ರಭಾವ ಬೀರು; ಮುಟ್ಟು; ತಟ್ಟು: the sunset spoke to her ಸೂರ್ಯಾಸ್ತ ಅವಳನ್ನು ತಟ್ಟಿತು. Nature spoke to Lucy ಪ್ರಕೃತಿ ಲೂಸಿಗೆ ತಿಳಿಸಿತು (ಲೂಸಿಯ ಮೇಲೆ ಪರಿಣಾಮ ಬೀರಿತು).
ಪದಗುಚ್ಛ
  1. ill-spoken ಕೆಟ್ಟ ಮಾತುಗಳನ್ನಾಡುವ; ದುರ್ಭಾಷಿಯಾದ.
  2. not (or nothing) to speak of ಹೇಳಿಕೊಳ್ಳುವಂಥದೇನೂ ಇಲ್ಲ; ಹೇಳಿಕೊಳ್ಳುವಂಥ (ದೊಡ್ಡ) ವಿಷಯವೇನೂ ಅಲ್ಲ; ಲೆಕ್ಕಕ್ಕೆ ತೆಗೆದು ಕೊಳ್ಳುವ ವಿಷಯವೇನೂ ಅಲ್ಲ; ಹೇಳುವಂಥದ್ದು (ವಾಸ್ತವಿಕವಾಗಿ) ಏನೂ ಇಲ್ಲ; ಹೇಳಬಹುದಾದ ವಿಶೇಷವೇನೂ ಇಲ್ಲ.
  3. smooth-spoken ನಯವಾಗಿ ಮಾತನಾಡುವ; ಮೃದುಭಾಷಿಯಾದ.
  4. so to 1say (or speak).
  5. speak for
    1. ಒಬ್ಬನ ಪರವಾಗಿ ಮಾತನಾಡು; ಒಬ್ಬನ ವಕ್ತಾರನಾಗಿರು; ಒಬ್ಬನ ಭಾವ-ಭಾವನೆಗಳನ್ನು, ಇಂಗಿತ ಮನೋರಥ ಗಳನ್ನು (ಬೇರೊಬ್ಬರಿಗೆ) ಹೇಳು, ತಿಳಿಯಪಡಿಸು.
    2. = bespeak.
  6. speak for itself ಸ್ವತಃ ಸಾಕ್ಷಿಯಾಗಿರು; ಬೇರೆ ಸಾಕ್ಷಿ ಬೇಕಾಗಿಲ್ಲದಿರು: the course pursued by him speaks for itself ಆತ ಹಿಡಿದಿರುವ ಹಾದಿ ಸ್ವತಃ ಸಾಕ್ಷಿಯಾಗಿದೆ.
  7. speak for oneself
    1. ತನ್ನ ಸ್ವಂತ ಅಭಿಪ್ರಾಯ ಮಾತ್ರ – ತಿಳಿಸು, ಹೇಳು, ಕೊಡು.
    2. ಇತರರ ಅಭಿಪ್ರಾಯಗಳನ್ನು ಪ್ರತಿನಿಧಿಸಲು ತೊಡಗಬೇಡ:I can only speak for myself; I am not concerned with other’s views ನಾನು ನನ್ನ ಸ್ವಂತ ಅಭಿಪ್ರಾಯವನ್ನು ಮಾತ್ರ ಹೇಳಬಲ್ಲೆ; ಇತರರ ಅಭಿಪ್ರಾಯದ ಗೊಡವೆ ನನಗೆ ಬೇಕಿಲ್ಲ.
  8. speak one’s mind ಮನಸ್ಸಿನಲ್ಲಿದ್ದದ್ದನ್ನು ಮುಚ್ಚುಮರೆ ಯಿಲ್ಲದೆ, ಸ್ಪಷ್ಟವಾಗಿ, ನಿರ್ದಾಕ್ಷಿಣ್ಯವಾಗಿ – ಹೇಳಿಬಿಡು; ಅಭಿಪ್ರಾಯವನ್ನು ತಿಳಿಸಲು, ಹೇಳಲು ಹಿಂತೆಗೆಯಬೇಡ, ದಾಕ್ಷಿಣ್ಯಪಡಬೇಡ.
  9. speak out
    1. ಗಟ್ಟಿಯಾಗಿ ಬಾಯಿಬಿಟ್ಟು – ಹೇಳು; ಸ್ಪಷ್ಟವಾಗಿ ಹೇಳು.
    2. = ಪದಗುಚ್ಛ\((6)\).
    3. ಸ್ವಂತ ಅಭಿಪ್ರಾಯ ತಿಳಿಸು.
  10. speak one $^5$fair.
  11. speak to
    1. ಒಬ್ಬನೊಡನೆ ಮಾತಾಡು, ಸಂಭಾಷಿಸು.
    2. ಒಂದು ವಿಷಯಕ್ಕೆ ಸಾಕ್ಷಿಯಾಗಿ ಮಾತಾಡು: I can speak to his having been there ಅವನು ಅಲ್ಲಿದ್ದ ಎಂಬಉದಕ್ಕೆ ಸಾಕ್ಷಿಯಾಗಿ ನಾನು ಮಾತಾಡಬಲ್ಲೆ.
    3. ಒಂದು ವಿಷಯವನ್ನು ಕುರಿತು ಮಾತಾಡು, ಹೇಳು: I will speak to that point later ಆ ವಿಷಯವನ್ನು, ಅಂಶವನ್ನು ಕುರಿತು ಆಮೇಲೆ ಹೇಳುತ್ತೇನೆ, ಮಾತಾಡುತ್ತೇನೆ.
    4. (ಆಡುಮಾತು) ಛೀಮಾರಿ ಮಾಡು, ತರಾಟೆಗೆ ತೆಗೆದುಕೊ: has he been misbehaving? I will speak to him about it ಅವನು ಅಯೋಗ್ಯವಾಗಿ ನಡೆದುಕೊಳ್ಳುತ್ತಿದ್ದಾನೆಯೆ? ಹಾಗಾದರೆ ನಾನು ಅವನಿಗೆ ಛೀಮಾರಿ ಮಾಡುತ್ತೇನೆ.
  12. speak up = ಪದಗುಚ್ಛ \((9)\).
  13. speak volumes (ಸಂಗತಿ, ಸತ್ಯಾಂಶ, ಮೊದಲಾದವುಗಳ ವಿಷಯದಲ್ಲಿ) ಅರ್ಥಪೂರ್ಣವಾಗಿರು; ಮಹತ್ತ್ವಪೂರ್ಣವಾಗಿರು: his silence speaks volumes ಆತನ ಮೌನ (ತುಂಬ) ಅರ್ಥಪೂರ್ಣವಾಗಿದೆ.
  14. speak volumes (or well etc.) for
    1. ಕ್ಕೆ ಸಂಪೂರ್ಣ ಸಾಕ್ಷಿಯಾಗಿರು; ಅತ್ಯುತ್ತಮ ನಿದರ್ಶನವಾಗಿರು: his restraint speaks volumes (or well) for his forbearance ಆತನ ಸಂಯಮವು ಆತನ ತಾಳ್ಮೆಗೆ ಪೂರ್ಣಸಾಕ್ಷಿ, ಅತ್ಯುತ್ತಮ ನಿದರ್ಶನ ಆಗಿದೆ.
    2. ಅನುಕೂಲಕರ ವಾತಾವರಣದಲ್ಲಿರಿಸು.