See also 2rear  3rear
1rear ರಿಅರ್‍
ನಾಮವಾಚಕ
  1. (ಸೈನ್ಯದ ಯಾ ನೌಕಾಪಡೆಯ) (ಅತ್ಯಂತ) ಹಿಂಭಾಗ.
  2. (ಸೈನ್ಯದ, ಪಾಳೆಯದ, ವ್ಯಕ್ತಿಯ) ಹಿಂಭಾಗ; ಹಿಂಗಡೆ; ಹಿಂಬದಿ.
  3. (ಯಾವುದೇ ವಸ್ತುವಿನ) ಹಿಂಭಾಗ; ಬೆನ್ನುಭಾಗ; ಹಿಂಬದಿ; ಹಿಂದುಗಡೆ: at the rear of(ಒಂದರ) ಹಿಂಭಾಗದಲ್ಲಿ; ಹಿಂಬದಿಯಲ್ಲಿ; ಹಿಂದುಗಡೆ.
  4. (ಆಡುಮಾತು) ಹಿತ್ತಲಮನೆ; ಹಿತ್ತಲು; ಕಕ್ಕಸು ಯಾ ಮೂತ್ರಿ; ಶೌಚಗೃಹ.
  5. (ಆಡುಮಾತು) ತಿಕ; ಅಂಡು; ಪಿರ್ರೆ; ಪೃಷ್ಠ.
ಪದಗುಚ್ಛ
  1. bring(or close) up the rear ಎಲ್ಲರಿಗಿಂತ, ಎಲ್ಲಕ್ಕಿಂತ – ಹಿಂದುಗಡೆ ಬರು.
  2. hang on the rear of (ಶತ್ರುವಿನ ಮೇಲೆ ದಾಳಿ ಮಾಡಲು) ಹಿಂಬಾಲಿಸಿಕೊಂಡು ಹೋಗು; ಬೆನ್ನಟ್ಟು; ಬೆನ್ನು ಬಿಡದಿರು.
  3. in the rear ಹಿಂದೆ; ಹಿಂದುಗಡೆ; ಹಿಂಭಾಗದಲ್ಲಿ.
  4. take the enemy from the rear ಶತ್ರುವನ್ನು ಹಿಂಬದಿಯಿಂದ ಆಕ್ರಮಿಸು.