See also 1rear  2rear
3rear ರಿಅರ್‍
ಸಕರ್ಮಕ ಕ್ರಿಯಾಪದ
  1. (ಗೃಹ, ಸೌಧ ಮೊದಲಾದವನ್ನು) ಎಬ್ಬಿಸು; ನಿರ್ಮಿಸು; ಕಟ್ಟು; ನಿಲ್ಲಿಸು: rear the cathedral ಭಾರಿ ಚರ್ಚನ್ನು ಎಬ್ಬಿಸು. rear a massive pillar ಭಾರಿ ಕಂಬವನ್ನು ನಿಲ್ಲಿಸು.
  2. ಎತ್ತು; ಎತ್ತಿನಿಲ್ಲು: reared his mightly stature ತನ್ನ ಭೀಮಗಾತ್ರವನ್ನೆತ್ತಿ ನಿಂತ. rear one’s head ತಲೆ ಮೇಲಕ್ಕೆತ್ತು.
  3. (ಪೈರು, ಪಚ್ಚೆ, ಬೆಳೆ ಮೊದಲಾದವನ್ನು) ಬೆಳೆ, ಕೃಷಿಮಾಡು.
  4. (ದನ ಮೊದಲಾದವನ್ನು) ಸಾಕು; ಪಾಲನೆ ಮಾಡು; (ತಳಿಯನ್ನು) ಬೆಳೆ, ಎಬ್ಬಿಸು.
  5. (ಮಕ್ಕಳನ್ನು) ಸಾಕು; ಸಲಹು; ಬೆಳೆಸು; ಪಾಲಿಸು; ಪೋಷಿಸು.
  6. (ಮಕ್ಕಳಿಗೆ) ಶಿಕ್ಷಣಕೊಡು; ವಿದ್ಯಾಭ್ಯಾಸ ಮಾಡಿಸು.
  7. (ಆತ್ಮಾರ್ಥಕ) (ಕುದುರೆ ಮೊದಲಾದವುಗಳ ವಿಷಯದಲ್ಲಿ) ಹಿಂಗಾಲುಗಳ ಮೇಲೆ (ದೇಹವನ್ನು) ಎಬ್ಬಿಸು, ಎತ್ತಿನಿಲ್ಲಿಸು.
ಅಕರ್ಮಕ ಕ್ರಿಯಾಪದ
  1. (ಕುದುರೆ ಮೊದಲಾದವುಗಳ ವಿಷಯದಲ್ಲಿ) ಹಿಂಗಾಲುಗಳ ಮೇಲೆ ಎದ್ದುನಿಲ್ಲು.
  2. ತುಂಬ ಎತ್ತರಕ್ಕೆ ಬೆಳೆ, ವಿಸ್ತರಿಸು.