1liver
ಲಿವರ್
ನಾಮವಾಚಕ
-
- (ಕಶೇರುಕ ಪ್ರಾಣಿಗಳಲ್ಲಿರುವ) ಪಿತ್ತಜನಕಾಂಗ; ಯಕೃತ್ತು; ಕಾಳಿಜ; ಕಲಿಜ.
- (ಇತರ ಪ್ರಾಣಿಗಳಲ್ಲಿನ) ಯಕೃತ್ತು; ಯಕೃತ್ತಿನಂಥದೇ ಅಂಗ.
- (ಆಹಾರಕ್ಕಾಗಿ ಬಳಸುವ ಕೆಲವು ಪ್ರಾಣಿಗಳ) ಯಕೃತ್ತಿನ, ಪಿತ್ತಜನಕಾಂಗದ – ಮಾಂಸ.
- ಯಕೃತ್ತಿನ ಬಣ್ಣ, ವರ್ಣ; ಎಣ್ಣೆಗೆಂಪು ಛಾಯೆಯ ಕಂದುಬಣ್ಣ.
- ಯಕೃತ್ತಿನ ರೋಗ (ಸ್ಥಿತಿ); ಪಿತ್ತವ್ಯಾಧಿ.
- (ಪ್ರಾಚೀನ ಪ್ರಯೋಗ) ಭಾವಗಳ ಯಾ ಮನೋರಾಗಗಳ ನೆಲೆ ಎಂದು ಭಾವಿತವಾದ ಪಿತ್ತಜನಕಾಂಗ.
ಪದಗುಚ್ಛ
- hot liver
- ರಾಗೋದ್ರೇಕ ಸ್ವಭಾವ.
- ಕಾಮುಕತೆ; ಕಾಮಾಸಕ್ತಿ; ಕಾಮೋದ್ರೇಕ ಸ್ವಭಾವ.
- lily livered ಪುಕ್ಕಲುತನದ; ಹೇಡಿಸ್ವಭಾವದ.
- white (or lily) liver ಹೇಡಿತನ; ಪುಕ್ಕಲು.