See also 2issue
1issue ಇಷೂ(ಸ್ಯೂ)
ನಾಮವಾಚಕ
  1. (ಹುಂಡಿ, ಬಂಡವಾಳ ಪತ್ರಗಳು, ಕಾಗದದ ಹಣ, ಸ್ಟಾಂಪುಗಳು, ಮೊದಲಾದವನ್ನು) ಹೊರಡಿಸುವುದು; ಪ್ರಚಾಲನ; ನೀಡಿಕೆ.
  2. ಒಮ್ಮೆ ಹೊರಡಿಸಿದ ನಾಣ್ಯಗಳು, ಕಾಗದದ ಹಣ, ವೃತ್ತಪತ್ರಿಕೆಯ ಪ್ರತಿಗಳು, ಮೊದಲಾದವುಗಳ ಮೊತ್ತ, ಸಂಖ್ಯೆ.
  3. (ಪುಸ್ತಕ) ಸಂಚಿಕೆ; ನಿರ್ದಿಷ್ಟ ಕಾಲಾವಧಿಯಲ್ಲಿ ವಿಶೇಷಾಂಶಗಳನ್ನೊಳಗೊಂಡು ಪ್ರಕಟವಾಗುವ ಆವೃತ್ತಿಯ ಭಾಗ (ಸಂಚಿಕೆ): May issue ಮೇ ಸಂಚಿಕೆ.
  4. ಕೊಟ್ಟ ಯಾ ಹಂಚಿದ – ವಸ್ತು ಯಾ ಮೊತ್ತ: issue of rations ರೇಷನ್ನಿನ ನೀಡಿಕೆ ಯಾ ಹಂಚಿಕೆ.
  5. ಹೊರಹೊರಡುವುದು; ಹೊರ ಹರಿತ; ಹೊರಸುರಿತ; ನಿರ್ಗಮನ; ಬಹಿರ್ಗಮನ; ನಿಸ್ಸರಣ; ನಿಷ್ಕ್ರಮಣ: the issue of water from a broken pipe ಒಡೆದ ಕೊಳವೆಯಿಂದ ನೀರಿನ ಸುರಿತ.
  6. ಹೊರದಾರಿ; ನಿಷ್ಕ್ರಮ; ನಿರ್ಗಮ; ಹೊರಕ್ಕೆ ಹೋಗುವ ಮಾರ್ಗ: a labyrinth that had no issue ಹೊರಕ್ಕೆ ಹೋಗುವ ಮಾರ್ಗವಿಲ್ಲದ ಚಕ್ರಭೀಮನ ಕೋಟೆ.
  7. (ನದಿ ಮೊದಲಾದವುಗಳ) ಉಗಮ ಸ್ಥಾನ; ಹೊರಬರುವ ಸ್ಥಳ.
  8. (ನದಿ, ಅಂತರ್ದೇಶೀಯ ಸಮುದ್ರ, ಮೊದಲಾದವುಗಳ) ಮುಖ; ಹೊರಹರಿಯುವ, ಬೀಳುವ ಜಾಗ.
  9. (ಕ್ರಿಯೆ ಮೊದಲಾದವುಗಳ) ಮುಗಿತ; ಮುಕ್ತಾಯ; ಸಮಾಪ್ತಿ; ಕೊನೆ; ಅಂತ್ಯ: negotiations were brought to an issue ಸಂಧಾನಗಳನ್ನು ಮುಕ್ತಾಯಕ್ಕೆ ತರಲಾಯಿತು.
  10. ಫಲಿತಾಂಶ; ಪರಿಣಾಮ; ಫಲ: the issue of a contest ಸ್ಪರ್ಧೆಯ ಫಲಿತಾಂಶ.
  11. (ನ್ಯಾಯಶಾಸ್ತ್ರ) ಮಕ್ಕಳು; ಸಂತಾನ; ಸಂತತಿ: without male issue ಗಂಡು ಸಂತಾನವಿಲ್ಲದೆ.
  12. (ಪ್ರಾಚೀನ ಪ್ರಯೋಗ) (ರಕ್ತ ಮೊದಲಾದವುಗಳ) ಸ್ರಾವ; ಒಸರು; ಹರಿವು; ಸೋರಿಕೆ; ಸುರಿತ: an issue of blood from the nose ಮೂಗಿನಿಂದ ರಕ್ತಸ್ರಾವ.
  13. (ರಕ್ತ ಮೊದಲಾದವನ್ನು) ಸ್ರವಿಸಲು ಮಾಡಿದ ಕಚ್ಚು, ಗಾಯ.
  14. (ಮುಖ್ಯವಾಗಿ ನ್ಯಾಯಶಾಸ್ತ್ರ) (ಎರಡು ಪಕ್ಷಗಳ ನಡುವೆ ನಿರ್ಣಯಿಸಬೇಕಾದ) ವಿವಾದಾಂಶ; ವಾದವಿಷಯ.
ಪದಗುಚ್ಛ
  1. at issue
    1. (ವ್ಯಕ್ತಿಗಳ ವಿಷಯದಲ್ಲಿ) ಭಿನ್ನಾಭಿಪ್ರಾಯವುಳ್ಳವರಾಗಿ; ಒಮ್ಮತವಿಲ್ಲದವರಾಗಿ: for years they remained at issue with each other ವರ್ಷಗಟ್ಟಲೆ ಅವರು ತಮ್ಮೊಳಗೆ ಭಿನ್ನಾಭಿಪ್ರಾಯವುಳ್ಳವರಾಗಿದ್ದರು.
    2. (ವಸ್ತುಗಳ ವಿಷಯದಲ್ಲಿ) ವಾದಗ್ರಸ್ತವಾದ; ವಿವಾದಾಸ್ಪದವಾದ; ಚರ್ಚೆಗೊಳಪಟ್ಟಿರುವ: the question at issue is whether the majority opinion is always right ಬಹುಮತಾಭಿಪ್ರಾಯ ಯಾವಾಗಲೂ ಸರಿಯೇ ಎಂಬ ಪ್ರಶ್ನೆ ವಿವಾದಾಸ್ಪದ.
  2. force the issue ನಿರ್ಣಯವನ್ನು ಒತ್ತಾಯಿಸು; ತೀರ್ಮಾನ ತಲುಪುವಂತೆ ಬಲವಂತ ಮಾಡು.
  3. in the issue ಹಾಗಾದಾಗ; ಸಂದರ್ಭ ಒದಗಿದಂತೆ; ಪರಿಸ್ಥಿತಿ ಹಾಗಾದಾಗ.
  4. issue of fact ವಾಸ್ತವ ಸಂಗತಿಯನ್ನು ಕುರಿತ ವಿವಾದಾಂಶ.
  5. issue of law ಕಾನೂನನ್ನು ಕುರಿತ ವಿವಾದಾಂಶ.
  6. join issue
    1. (ವಿವಾದಾಂಶವೆಂದು ಒಪ್ಪಿದ ವಿಷಯದ ಮೇಲೆ, ಇನ್ನೊಬ್ಬರೊಡನೆ) ವಾದಕ್ಕೆ – ಇಳಿ, ತೊಡಗು, ಆರಂಭಿಸು: we shall be ready to join issue with them on this very point ನಾವು ಅವರೊಡನೆ ಈ ಅಂಶದ ಮೇಲೆಯೇ ವಾದ ಮಾಡಲು ಸಿದ್ಧ.
    2. (ನ್ಯಾಯಶಾಸ್ತ್ರ) ವಿವಾದಾಂಶವನ್ನು ತೀರ್ಪಿಗೆ ಒಟ್ಟಾಗಿ ಒಪ್ಪಿಸು.
    3. (ನ್ಯಾಯಶಾಸ್ತ್ರ) (ಒಂದು ಪಕ್ಷ) ಮತ್ತೊಂದು ಪಕ್ಷ ಒಪ್ಪಿಸಿದ ವಾದಾಂಶವನ್ನು ಅಂಗೀಕರಿಸು.
  7. make an issue of ದೊಡ್ಡ ರಂಪ ಮಾಡು; ರಾದ್ಧಾಂತ ಮಾಡು; ವಾದವಿಷಯವಾಗಿ ಮಾಡು.
  8. take issue = ಪದಗುಚ್ಛ \((6)\).