See also 1issue
2issue ಇಷೂ(ಸ್ಯೂ)
ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷಏಕವಚನ issues, ಭೂತರೂಪ ಮತ್ತು ಭೂತಕೃದಂತ issued, ವರ್ತಮಾನ ಕೃದಂತ issuing).

ಸಕರ್ಮಕ ಕ್ರಿಯಾಪದ

    1. ಹೊರಕಳುಹು: expeditions annually issued by his orders ಅವನ ಆಜ್ಞೆಯ ಮೇಲೆ ಪ್ರತಿವರ್ಷ ಕಳುಹಿಸಿದ ದಂಡಯಾತ್ರೆಗಳು.
    2. (ಮುಖ್ಯವಾಗಿ ಸರ್ಕಾರದಿಂದ ಯಾ ಅಧಿಕೃತವಾಗಿ) ಕೊಡು; ನೀಡು; ಒದಗಿಸು: issued passports to them ಅವರಿಗೆ ಪಾಸ್‍ಪೋರ್ಟುಗಳನ್ನು ಅಧಿಕೃತವಾಗಿ ನೀಡಿದರು. issued orders to the staff ಸಿಬ್ಬಂದಿಗೆ ಆದೇಶ ನೀಡಿದರು. issue the book for a week ಒಂದು ವಾರದ ಮಟ್ಟಿಗೆ ಪುಸ್ತಕ ಒದಗಿಸು.
  1. (ಕಾಗದದ ಹಣ, ವೃತ್ತ ಪತ್ರಿಕೆಗಳನ್ನು) ಪ್ರಕಟಿಸು; ಚಲಾವಣೆಗೆ ತರು; ಚಲಾವಣೆ ಮಾಡು: issue a new coin ಹೊಸ ನಾಣ್ಯವನ್ನು ಚಲಾವಣೆ ಮಾಡು.
  2. (ಸೈನ್ಯ) (ಸೈನಿಕನಿಗೆ) ಸಜ್ಜು – ಒದಗಿಸು, ಕೊಡು; ಸರಂಜಾಮನ್ನು ಕೊಡು, ವಿತರಣೆ ಮಾಡು.
ಅಕರ್ಮಕ ಕ್ರಿಯಾಪದ
  1. ಹೊರಹೋಗು; ಹೊರಬರು; ಹೊರಹೊರಡು; ಹೊರಹರಿ; ನಿರ್ಗಮಿಸು; ಬಹಿರ್ಗಮಿಸು; ನಿಷ್ಕ್ರಮಿಸು: smoke issuing from the chimney ಕೊಳವೆಯಿಂದ ಹೊರಗೆ ಹೋಗುತ್ತಿರುವ ಹೊಗೆ.
  2. ಉದಿಸು; ಆವಿರ್ಭವಿಸು; ಒಂದು ಸ್ಥಿತಿಯಿಂದ ಹೊರಡು, ಹೊರಬರು: the acts which issue from these precepts ಈ ಉಪದೇಶಗಳಿಂದ ಹೊರಡುವ ಕ್ರಿಯೆಗಳು.
  3. ತಲೆದೋರು; ಉದ್ಭವಿಸು; ಹುಟ್ಟು; ಉದಿಸು; ಉತ್ಪತ್ತಿಯಾಗು: merit issues from worth ಸಾಮರ್ಥ್ಯ ಯೋಗ್ಯತೆಯಿಂದ ಹುಟ್ಟುತ್ತದೆ.
  4. ಫಲಿಸು; ಪರಿಣಮಿಸು; ಪರಿಣಾಮವಾಗಿ ಬರು: conflicts issuing from social unrest ಸಾಮಾಜಿಕ ಅಶಾಂತಿಯಿಂದ ಪರಿಣಮಿಸುವ ಘರ್ಷಣೆಗಳು.
  5. ಮುಗಿ; ಕೊನೆಗೊಳ್ಳು; ಅಂತ್ಯವಾಗು; ಸಮಾಪ್ತವಾಗು: a philosophy which issues in such conclusions ಅಂಥ ತೀರ್ಮಾನ(ಸಿದ್ಧಾಂತ)ಗಳಲ್ಲಿ ಕೊನೆಗೊಳ್ಳುವ ತತ್ತ್ವಜಿಜ್ಞಾಸೆ.
  6. ಹೊರಬೀಳು; ಪ್ರಕಟವಾಗು: new editions are expected to issue from the press ಹೊಸ ಸಂಚಿಕೆಗಳು ಮುದ್ರಣಾಲಯದಿಂದ ಪ್ರಕಟಗೊಳ್ಳುವ ನಿರೀಕ್ಷಣೆಯಿದೆ.